ಲೋಕಭವನಕ್ಕೆ ರಾಜ್ಯಪಾಲ ಗೆಹ್ಲೋಟ್ ಆಗಮನ : ಇಂದೇ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಸಾಧ್ಯತೆ
ರಾಜ್ಯ ಕಂಡ ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಸಂದರ್ಭದಲ್ಲಿ ನಡೆದುಕೊಂಡ ರೀತಿ, ಅವರ ರಾಜಕೀಯ ಪ್ರಬುದ್ಧತೆ ಎಲ್ಲರಿಗೂ ಮಾದರಿ ಎನಿಸಿದೆ. ರಾಜಕೀಯ ಹೈಡ್ರಾಮಾಗಳ ಮೂಲಕ ವಿಪಕ್ಷಗಳ ಬಾಯಿಗೆ ಆಹಾರವಾಗಬಹುದು ಎಂದುಕೊಂಡಿದ್ದವರ ನಿರೀಕ್ಷೆಗಳನ್ನು ಸುಳ್ಳು ಮಾಡಿ, ಬಹಿರಂಗವಾಗಿ ಎಲ್ಲಿಯೂ ತಮ್ಮ ದುಃಖ ತೋರ್ಪಡಿಸದೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ದಾರೆ.
ರಾಜ್ಯ ಕಂಡ ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಸಂದರ್ಭದಲ್ಲಿ ನಡೆದುಕೊಂಡ ರೀತಿ, ಅವರ ರಾಜಕೀಯ ಪ್ರಬುದ್ಧತೆ ಎಲ್ಲರಿಗೂ ಮಾದರಿ ಎನಿಸಿದೆ. ರಾಜಕೀಯ ಹೈಡ್ರಾಮಾಗಳ ಮೂಲಕ ವಿಪಕ್ಷಗಳ ಬಾಯಿಗೆ ಆಹಾರವಾಗಬಹುದು ಎಂದುಕೊಂಡಿದ್ದವರ ನಿರೀಕ್ಷೆಗಳನ್ನು ಸುಳ್ಳು ಮಾಡಿ, ಬಹಿರಂಗವಾಗಿ ಎಲ್ಲಿಯೂ ತಮ್ಮ ದುಃಖ ತೋರ್ಪಡಿಸದೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ದಾರೆ. ಲೋಕಭವನದಲ್ಲಿ ರಾಜ್ಯಪಾಲರ ಅನುಪಸ್ಥಿತಿಯ ನಡುವೆಯೂ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುವ ಮೂಲಕ ಹೈಕಮಾಂಡ್ ಮಾತಿಗೆ ಬದ್ಧರಾಗಿ ನಿಂತಿದ್ದಾರೆ.
ಇನ್ನು ಮಧ್ಯಪ್ರದೇಶದ ಇಂದೋರ್ಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಪ್ರಯಾಣ ಬೆಳೆಸಿದ ಹಿನ್ನೆಲೆಯಲ್ಲಿ ನಿನ್ನೆಯೇ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೂ ಸಹ, ರಾಜೀನಾಮೆ ಪತ್ರ ಅಂಗೀಕಾರವಾಗಿರಲಿಲ್ಲ. ಆದರೆ ಇದೀಗ ಇಂದೋರ್ನಿಂದ ಗೆಹ್ಲೋಟ್ ಬೆಂಗಳೂರಿಗೆ ಮರಳಿದ್ದು ಇಂದೇ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಪತ್ರಕ್ಕೆ ಅಧಿಕೃತ ಅಂಕಿತ ಬೀಳುವ ಸಾಧ್ಯತೆಯಿದೆ.
Also Read: ಕೌಜಲಗಿ ಮನೆತನದ ಮೂರನೇ ತಲೆಮಾರು, ಶಾಸಕ ಮಹಾಂತೇಶ್ ಕೌಜಲಗಿಗೆ ಒಲಿಯುತ್ತಾ ಸಚಿವ ಸ್ಥಾನ ?
ಕರ್ನಾಟಕ ಅದೆಷ್ಟೋ ರಾಜಕೀಯ ಅಧಿಕಾರ ಹಸ್ತಾಂತರಗಳನ್ನು ಕಂಡಿದೆ. ಆದರೆ ಈ ಮಟ್ಟದ ರಾಜಕೀಯ ಪ್ರಬುದ್ಧತೆ ಕಂಡುಬಂದಿದ್ದು ಸಿಎಂ ಸಿದ್ದರಾಮಯ್ಯರಲ್ಲಿ ಮಾತ್ರ ಎಂದು ಕರುನಾಡು ಮಾತನಾಡಿಕೊಳ್ಳುತ್ತಿದೆ. ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಅಲ್ಲಲ್ಲಿ ಭಾವುಕರಾದಂತೆ ಕಂಡುಬಂದರೂ ಸಹ ಎಲ್ಲಿಯೂ ಅದನ್ನು ತೋರ್ಪಡಿಸದೇ ವಿದಾಯದ ಭಾಷಣವನ್ನು ಮಾಡಿದ ಸಿದ್ದರಾಮಯ್ಯರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಸಿದ್ದರಾಮಯ್ಯರ ರಾಜೀನಾಮೆ ಪತ್ರ ಅಂಗೀಕಾರಗೊಂಡಲ್ಲಿ, ಕರ್ನಾಟಕ ಕಂಡ ಸುದೀರ್ಘ ಅವಧಿಯ ಸಿಎಂ ಅಧಿಕಾರವು ಅಧಿಕೃತ ಯುಗಾಂತ್ಯ ಕಾಣಲಿದೆ.
Governors surprise visit to Lok Bhavan Will Siddaramaiahs resignation be accepted today



