ಡಿ.ಕೆ ಶಿವಕುಮಾರ್​ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್​ : ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಡಿಸಿಎಂ ಡಿ.ಕೆ ಶಿವಕುಮಾರ್​ ಮುಖ್ಯಮಂತ್ರಿ ಕನಸಿನ ಹಾದಿ ಮತ್ತಷ್ಟು ಸರಳಗೊಂಡಿದೆ. ನಿನ್ನೆ ರಾಜೀನಾಮೆಯುದ್ದಕ್ಕೂ ಸಿದ್ದರಾಮಯ್ಯ ಜೊತೆಯೇ ಇದ್ದ ಡಿಸಿಎಂ ಡಿ.ಕೆ ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಉಪಹಾರ ಕೂಟದಲ್ಲಿ ಅವರ ಕಾಲಿಗೆರಗಿ ಆಶೀರ್ವಾದವನ್ನೂ ಪಡೆದುಕೊಂಡಿದ್ದರು.

ಇನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಡಿಸಿಎಂ ಡಿ.ಕೆ ಶಿವಕುಮಾರ್​ ಮುಖ್ಯಮಂತ್ರಿ ಕನಸಿನ ಹಾದಿ ಮತ್ತಷ್ಟು ಸರಳಗೊಂಡಿದೆ. ನಿನ್ನೆ ರಾಜೀನಾಮೆಯುದ್ದಕ್ಕೂ ಸಿದ್ದರಾಮಯ್ಯ ಜೊತೆಯೇ ಇದ್ದ ಡಿಸಿಎಂ ಡಿ.ಕೆ ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಉಪಹಾರ ಕೂಟದಲ್ಲಿ ಅವರ ಕಾಲಿಗೆರಗಿ ಆಶೀರ್ವಾದವನ್ನೂ ಪಡೆದುಕೊಂಡಿದ್ದರು. ಸಿದ್ದರಾಮಯ್ಯರ ವಿದಾಯದ ಭಾಷಣ ಮುಗಿಯುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ದೇವನಹಳ್ಳಿ ಏರ್​ಪೋರ್ಟ್ನಲ್ಲಿ ಮಾಧ್ಯಮಗಳ ಕಣ್ಣಿಗೆ ಭಾವಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಕಾಣಿಸಿಕೊಂಡಿದ್ದು, ಅವರ ಕೈಯಲ್ಲಿ ಕೆಲ ದಾಖಲೆಗಳಿರುವುದು ಕಂಡುಬಂದಿದೆ.ಮೂಲಗಳ ಪ್ರಕಾರ ಡಿಸಿಎಂ ಡಿ.ಕೆ ಶಿವಕುಮಾರ್​ ತಮ್ಮ ನೂತನ ಸಂಪುಟದ ಪಟ್ಟಿಗೆ ಹೈಕಮಾಂಡ್​ನಿಂದ ಅನುಮತಿ ಪಡೆಯಲು ತೆರಳಿದ್ದಾರೆ ಎನ್ನಲಾಗಿದೆ.

Also Read: ಕೌಜಲಗಿ ಮನೆತನದ ಮೂರನೇ ತಲೆಮಾರು, ಶಾಸಕ ಮಹಾಂತೇಶ್ ಕೌಜಲಗಿಗೆ ಒಲಿಯುತ್ತಾ ಸಚಿವ ಸ್ಥಾನ ?

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್​ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸೋಮವಾರದಂದು ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ವಿಧಾನಸೌಧದ ಆವರಣದಲ್ಲಿಯೇ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ದೆಹಲಿಯಿಂದ ಕಾಂಗ್ರೆಸ್​ ಹೈಕಮಾಂಡ್​ ಕೂಡ ಆಗಮಿಸಲಿದೆ ಎನ್ನಲಾಗಿದೆ.

ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ಫಿಕ್ಸ್​ ಆಗುತ್ತಿದ್ದಂತೆಯೇ,ಸಚಿವಾಕಾಂಕ್ಷಿಗಳ ಕನಸು ಮತ್ತೆ ಚಿಗುರೊಡೆದಿದೆ. ಡಿಕೆಶಿ ತನ್ನ ಸಂಪುಟದಲ್ಲಿ ಯಂಗಸ್ಟರ್​ಗಳಿಗೆ ಅವಕಾಶ ನೀಡುವ ಚಿಂತನೆ ಹೊಂದಿದ್ದು, ಹಳೆಯ ಸಚಿವರಿಗೆ ಕೊಕ್​ ನೀಡಲಿದ್ದಾರೆ ಎನ್ನಲಾಗಿದೆ. ಹೊಸಬರಿಗೆ ಹೆಚ್ಚು ಅವಕಾಶ ನೀಡುವ ನಿಲುವನ್ನು ಡಿಕೆಶಿ ಹೊಂದಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್ ನೂತನ ಸಂಪುಟದಲ್ಲಿ ಯಾರಿಗೆಲ್ಲ ಸ್ಥಾನವಿದೆ ಎನ್ನುವುದು ಶೀಘ್ರದಲ್ಲಿಯೆ ತಿಳಿಯಲಿದೆ .

DK Shivakumars coronation time fixed He will take oath as the new Chief Minister on Monday

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories