ಏಕಾದಶಿ ಹಿನ್ನೆಲೆ ಪ್ರಾಣಿಬಲಿ ಮುಂದೂಡಿದ ಮುಸ್ಲಿಂ ಸಮುದಾಯ – ಬಕ್ರೀದ್ ಹಬ್ಬದಂದು ಭಾವೈಕ್ಯತೆಯ ಸಂದೇಶ
ನಿನ್ನೆ ನಡೆದ ಬಕ್ರೀದ್ ಹಬ್ಬ ಹಲವು ಕಾರಣಗಳಿಂದ ಭಾವೈಕ್ಯತೆಯ ಸಂದೇಶವನ್ನು ಸಾರಿದೆ. ದೇಶಾದ್ಯಂತ ಮುಸ್ಲಿಂ ಸಮುದಾಯ ಬಕ್ರೀದ್ ಹಬ್ಬಕ್ಕೆ ಗೋ ಹತ್ಯೆಯನ್ನೇ ನಿಷೇಧಿಸಿರುವುದು ಒಂದೆಡೆಯಾದರೆ, ಮಹಾರಾಷ್ಟ್ರದ ಪ್ರಸಿದ್ಧ ಪಂಢರಾಪುರದಲ್ಲಿ ಬಕ್ರೀದ್ ಹಬ್ಬದ ಸಂದರ್ಬದಲ್ಲಿ ಮುಸ್ಲಿಂ ಬಾಂಧವರು ಕೈಗೊಂಡ ನಿರ್ಧಾರವೊಂದು ದೇಶಾದ್ಯಂತ ಸದ್ದು ಮಾಡಿದೆ.
ನಿನ್ನೆ ನಡೆದ ಬಕ್ರೀದ್ ಹಬ್ಬ ಹಲವು ಕಾರಣಗಳಿಂದ ಭಾವೈಕ್ಯತೆಯ ಸಂದೇಶವನ್ನು ಸಾರಿದೆ. ದೇಶಾದ್ಯಂತ ಮುಸ್ಲಿಂ ಸಮುದಾಯ ಬಕ್ರೀದ್ ಹಬ್ಬಕ್ಕೆ ಗೋ ಹತ್ಯೆಯನ್ನೇ ನಿಷೇಧಿಸಿರುವುದು ಒಂದೆಡೆಯಾದರೆ, ಮಹಾರಾಷ್ಟ್ರದ ಪ್ರಸಿದ್ಧ ಪಂಢರಾಪುರದಲ್ಲಿ ಬಕ್ರೀದ್ ಹಬ್ಬದ ಸಂದರ್ಬದಲ್ಲಿ ಮುಸ್ಲಿಂ ಬಾಂಧವರು ಕೈಗೊಂಡ ನಿರ್ಧಾರವೊಂದು ದೇಶಾದ್ಯಂತ ಸದ್ದು ಮಾಡಿದೆ. ಹಿಂದೂಗಳ ಅತ್ಯಂತ ಪವಿತ್ರ ಅಧಿಕ ಮಾಸ ಏಕಾದಶಿ ಹಾಗೂ ಮುಸ್ಲಿಮರ ದೊಡ್ಡ ಹಬ್ಬ ಬಕ್ರೀದ್ ಒಂದೇ ದಿನ ಸಂಭವಿಸಿತ್ತು.
ಹಿಂದೂ ಧರ್ಮದ ಏಕಾದಶಿಯ ಆಚರಣೆಗೆ ಮಾನ್ಯತೆ ನೀಡಿದ ಮುಸ್ಲಿಂ ಸಮುದಾಯ ಬಕ್ರೀದ್ ಹಬ್ಬದ ನಡುವೆಯೂ ತಮ್ಮ ಹಬ್ಬದ ಪ್ರಮುಖ ಭಾಗವಾದ ಪ್ರಾಣಿ ಬಲಿಯನ್ನು ಎರಡು ದಿನಕ್ಕೆ ಮುಂದೂಡಿಕೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದೆ. ಪಂಢರಪುರದಲ್ಲಿ ಏಕಾದಶಿಯಂದು ಲಕ್ಷಾಂತರ ವಿಠ್ಠಲ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಮುಸ್ಲಿಂ ಸಮುದಾಯವು ಈ ಮಹತ್ವದ ನಿರ್ಧಾರ ಕೈಗೊಂಡಿದೆ.
Also Read: RBI ಹೆಸರಿನಲ್ಲಿ ನಕಲಿ ಇಮೇಲ್ ಮತ್ತು ಮೆಸೇಜ್ಗಳು ವೈರಲ್! ಹೊಸ ಮೋಸದ ಜಾಲ
ಇನ್ನು ಈ ವಿಚಾರವಾಗಿ ಪಂಢರಾಪುರ ನಿವಾಸಿ ಹಾಗೂ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಮಾತನಾಡಿದ್ದು, ನಾವು ಕೂಡ ವಿಠ್ಠಲನ ಕ್ಷೇತ್ರದಲ್ಲಿಯೇ ವಾಸವಿದ್ದೇವೆ. ಅನೇಕ ಬಾರಿ ವಿಠ್ಠಲ ದೇವರ ಉತ್ಸವಗಳಲ್ಲಿ ಭಾಗಿ ಕೂಡ ಆಗಿದ್ದೇವೆ. ಅಧಿಕ ಮಾಸದ ಏಕಾದಶಿ ಮೂರು ವರ್ಷಕ್ಕೆ ಒಮ್ಮೆ ಬರುವಂತಹ ದಿನ. ಹೀಗಾಗಿ ಪಂಢರಾಪುರಕ್ಕೆ ಆಗಮಿಸುವ ಭಕ್ತರಿಗೆ ಅನಾನುಕೂಲವಾಗದಿರಲಿ ಎಂದು ಪ್ರಾಣಿಬಲಿ ಮುಂದೂಡಿದ್ದೇವೆ. ಇದೇನು ಮೊದಲಲ್ಲ. ಈ ಹಿಂದೆಯೂ ನಾವು ಇಂತಹ ನಿರ್ಧಾರ ಕೈಗೊಂಡಿದ್ದೆವು ಎಂದಿದ್ದಾರೆ.
Muslim community postpones animal sacrifice on the occasion of Ekadashi – message of unity on Bakrid festival



