ಇಂದು ಹೈಕಮಾಂಡ್ ನೇತೃತ್ವದಲ್ಲಿ ಬಿಗ್ ಮೀಟಿಂಗ್, ಸಿದ್ದು-ಡಿಕೆ ಬಣಗಳ ನಡುವೆ ತೀವ್ರ ಫೈಟ್!

ಸಿಎಂ ಬದಲಾವಣೆಯ ತಲೆನೋವಿನ ಭಾರ ಇಳಿಸಿಕೊಂಡಿರುವ ಕಾಂಗ್ರೆಸ್​ ಹೈಕಮಾಂಡ್​ಗೆ ಇದೀಗ ಸಂಪುಟ ಪುರ್ನರಚನೆಯ ತಲೆನೋವು ಶುರುವಾಗಿದೆ.

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ತಲೆನೋವಿನ ಭಾರ ಇಳಿಸಿಕೊಂಡಿರುವ ಕಾಂಗ್ರೆಸ್​ ಹೈಕಮಾಂಡ್​ಗೆ ಇದೀಗ ಸಂಪುಟ ಪುರ್ನರಚನೆಯ ತಲೆನೋವು ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಬಣದ ನಾಯಕರು ಸಂಪುಟದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆಸಿದ್ದು, ಯಾರನ್ನು ಆಯ್ಕೆ ಮಾಡುವುದು ? ಯಾರನ್ನು ಸಂಪುಟದಿಂದ ಕೈಬಿಡುವುದು ಎಂಬುದೇ ಸದ್ಯದ ದೊಡ್ಡ ತಲೆನೋವಿನ ವಿಚಾರವಾಗಿದೆ .

ಇದೇ ವಿಚಾರವಾಗಿ ನಿಯೋಜಿತ ಸಿಎಂ ಡಿ.ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್​ ಹೈಕಮಾಂಡ್​ ನಡುವೆ ನಿನ್ನೆ ನಡೆಯಬೇಕಿದ್ದ ಸಭೆ ಇಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದೆ. ರಾಹುಲ್​ ಗಾಂಧಿ ರಾಜಸ್ಥಾನ ಪ್ರವಾಸ ಹಾಗೂ ವಿಮಾನ ರದ್ದತಿ ಹಿನ್ನೆಲೆ ಐಸಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ನಿನ್ನೆ ದೆಹಲಿ ತಲುಪೋದು ತಡವಾದ ಕಾರಣ ನಿನ್ನೆ ನಡೆಯಬೇಕಿದ್ದ ಸಭೆ ಇಂದಿಗೆ ಮುಂದೂಡಿಕೆಯಾಗಿದೆ .

ಇದನ್ನೂ ಓದಿ : ಕುಟುಂಬ ಕಲಹಕ್ಕೆ 7 ಜೀವ ಬಲಿ! ಅಮೆರಿಕದಲ್ಲಿ ನಡೆಯಿತು ಭೀಕರ ಶೂಟೌಟ್

ಇಂದು ಡಿ.ಕೆ ಶಿವಕುಮಾರ್​ ಸಲ್ಲಿಸಲಿರುವ ಪಟ್ಟಿಯ ಪ್ರಕಾರ ಡಾ. ಜಿ ಪರಮೇಶ್ವರ್​ರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿಸದಿದ್ದಲ್ಲಿ ಸ್ಪೀಕರ್​ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಇನ್ನುಳಿದಂತೆ ಸತೀಶ್​ ಜಾರಕಿಹೊಳಿ ಹಾಗೂ ಬಿ.ಕೆ ಹರಿಪ್ರಸಾದ್​ರನ್ನೂ ಸಹ ಕೆಪಿಸಿಸಿ ಹುದ್ದೆಗೆ ಪರಿಗಣಿಸದಿದ್ದರೆ ಸಚಿವ ಸ್ಥಾನ ನೀಡಲು ಚಿಂತಿಸಲಾಗಿದೆ. ಹಾಗೂ ಇತ್ತ ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ, ಕೆ.ಜೆ ಜಾರ್ಜ್, ಕೆ.ಎಚ್​ ಮುನಿಯಪ್ಪ ಅಥವಾ ಪ್ರಿಯಾಂಕ್​ ಖರ್ಗೆ, ಬೈರತಿ ಸುರೇಶ್​, ಯು.ಟಿ ಖಾದರ್​ ಹಾಗೂ ರಾಮಲಿಂಗಾ ರೆಡ್ಡಿ ಹೆಸರು ಡಿ.ಕೆ ಶಿವಕುಮಾರ್​ ಪಟ್ಟಿಯಲ್ಲಿದೆ ಎನ್ನಲಾಗಿದೆ.

ಈ ಬಾರಿ ಮೇಲ್ವರ್ಗದ ರಾಜಕಾರಣಿ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಒಬಿಸಿ ವರ್ಗಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್​ ಚಿಂತಿಸುತ್ತಿದೆ . ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ ಹರಿಪ್ರಸಾದ್​ ಹಾಗೂ ಸತೀಶ್​ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಬ್ಬರೂ ಈ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇಬ್ಬರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯುವುದಿಲ್ಲವೋ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ : ವಾಷಿಂಗ್ ಮೆಷಿನ್ ಮೇಲೆ ಭಾರೀ ಡಿಸ್ಕೌಂಟ್! ಆನ್‌ಲೈನ್‌ನಲ್ಲಿ ಭರ್ಜರಿ ರಿಯಾಯಿತಿ

ಇತ್ತ ಡಿ.ಕೆ ಶಿವಕುಮಾರ್ ಪಟ್ಟಿಯಿಂದ ಜಮೀರ್​ ಅಹಮದ್​ಗೆ ಕೊಕ್​ ದೊರಕಿದೆ ಎನ್ನಲಾಗಿದೆ. ಜಮೀರ್​ ಅಹಮದ್​ ಬದಲು ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಡಿ.ಕೆ ಶಿವಕುಮಾರ್​, ಯು.ಟಿ ಖಾದರ್​ ಇಲ್ಲವೇ ತನ್ವೀರ್​ ಸೇಠ್​ರನ್ನು ಪರಿಗಣಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಮೀರ್​ ಅಹಮದ್​ಗೆ ಈ ಬಾರಿ ಸಚಿವ ಸ್ಥಾನ ದೊರಕುವುದು ಬಹುತೇಕ ಡೌಟ್​ ಎಂದೇ ಹೇಳಲಾಗ್ತಾ ಇದೆ. ಇಂದು ಹೈಕಮಾಂಡ್​ ಜೊತೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚಿಸಲಿರುವ ನಿಯೋಜಿತ ಸಿಎಂ ಡಿ.ಕೆ ಶಿವಕುಮಾರ್​ ಸಚಿವ ಸಂಪುಟದ ಫೈನಲ್​ ಪಟ್ಟಿಗೆ ಅಂತಿಮ ಮುದ್ರೆ ಪಡೆದುಕೊಂಡೇ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories