ಮುಸುರೆ ತೊಳೆಯುತ್ತಿದ್ದಾಕೆಗೆ ಒಲಿದು ಬಂದ ಮಂತ್ರಿಗಿರಿ..ಬಿಜೆಪಿ ನಿರ್ಧಾರಕ್ಕೆ ದೇಶಾದ್ಯಂತ ಮೆಚ್ಚುಗೆ
ನೂತನ ಸಚಿವೆಯಾಗಿ ಮುಸುರೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪ್ರಮಾಣವಚನ ಸ್ವೀಕರಿಸಿದ್ದು,ಎಲ್ಲೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ರಾಜಕೀಯ ಸಂಪೂರ್ಣ ಬದಲಾಗಿದೆ. ಬಿಜೆಪಿಯ ಸುವೇಂಧು ಅಧಿಕಾರಿ ಬಂಗಾಳದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ವಾರಗಳ ಬಳಿಕ ಸಂಪುಟ ರಚನೆ ಮಾಡಲಾಗಿದ್ದು, 35 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನು ಪಶ್ಚಿಮ ಬಂಗಾಳ ಸರ್ಕಾರದ ನೂತನ ಸಚಿವೆಯಾಗಿ ಮುಸುರೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪ್ರಮಾಣವಚನ ಸ್ವೀಕರಿಸಿದ್ದು,ಎಲ್ಲೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬರ್ಧಮಾನ್ ಜಿಲ್ಲೆಯ ಆಸುಗ್ರಾಮ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಹಿರುವ ಕಲಿತಾ ಮಾಝಿಗೆ ಮಂತ್ರಿ ಭಾಗ್ಯ ಒಲಿದುಬಂದಿದೆ. 2021ರಲ್ಲಿಯೂ ಬಿಜೆಪಿಯಿಂದ ಇದೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಲಿತಾ ಮಾಝಿ ಸೋಲನ್ನು ಕಂಡಿದ್ದರು.
ಇದನ್ನೂ ಓದಿ : ಇಂದು ಹೈಕಮಾಂಡ್ ನೇತೃತ್ವದಲ್ಲಿ ಬಿಗ್ ಮೀಟಿಂಗ್, ಸಿದ್ದು-ಡಿಕೆ ಬಣಗಳ ನಡುವೆ ತೀವ್ರ ಫೈಟ್!
2026ರಲ್ಲಿ ಬಿಜೆಪಿಯಿಂದ ಮತ್ತೆ ಟಿಕೆಟ್ ಪಡೆದ ಕಲಿತಾ, ವಿಜಯಶಾಲಿಯಾಗಿ ಹೊರಹೊಮ್ಮಿದ್ದರು. ಟಿಎಂಸಿ ಅಭ್ಯರ್ಥಿ ವಿರುದ್ಧ 12,535 ಮತಗಳ ಅಂತರದಿಂದ ಗೆಲುವು ಕಂಡಿದ್ದ ಕಲಿತಾ ಮಾಝಿ ಶಾಸಕ ಸ್ಥಾನ ಅಲಂಕರಿಸಿದ್ದರು. ಅವರಿವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಕಲಿತಾ ಮಾಝಿ ಜೀವನ ಸಾಗಿಸುತ್ತಿದ್ದರೆ, ಈಕೆಯ ಪತಿ ಕೂಡ ಪ್ಲಂಬರ್ ಆಗಿದ್ದಾರೆ.
ಕೊಲ್ಕತ್ತಾದ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್. ರವಿ ಪ್ರಮಾಣ ವಚನ ಬೋಧಿಸಿದ್ದಾರೆ. ಕೆಲವರು ಸಂಪುಟ ಸಚಿವರಾಗಿ, ಮತ್ತೆ ಕೆಲವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಸಾಮಾನ್ಯ ಮನೆಗೆಲಸದಾಕೆ ಮಹಿಳೆಗೆ ಮಂತ್ರಿ ಸ್ಥಾನ ನೀಡಿದ ಬಿಜೆಪಿ ಹೈಕಮಾಂಡ್ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.



