ಕೇರಳಕ್ಕೆ ನಾಳೆ ಮಾನ್ಸೂನ್ ಎಂಟ್ರಿ: ಜೂನ್ 6 ರವರೆಗೆ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಈ ಜಿಲ್ಲೆಗಳಿಗೆ ಹೈ ಅಲರ್ಟ್!
Karnataka Rain Alert: ಕೇರಳಕ್ಕೆ ನಾಳೆ ಅಧಿಕೃತವಾಗಿ ಮುಂಗಾರು ಮಳೆ ಪ್ರವೇಶಿಸಲಿದ್ದು, ಇದರ ಪ್ರಭಾವದಿಂದಾಗಿ ಜೂನ್ 6 ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಘೋಷಿಸಿರುವ ಯೆಲ್ಲೋ ಅಲರ್ಟ್ ಜಿಲ್ಲೆಗಳ ಪೂರ್ಣ ವಿವರ ಇಲ್ಲಿದೆ.

Karnataka Rain Alert: ಬೆಂಗಳೂರು : ಬಿಸಿಲ ಝಳದಿಂದ ತತ್ತರಿಸಿದ ಕರ್ನಾಟಕದ ಜನತೆಗೆ ಮಳೆ ತಂಪೆರೆದಿದೆ. ಕಳೆದ ರಾತ್ರಿಯಿಂದಲೂ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ನಾಳೆ ಕೇರಳಕ್ಕೆ ನೈರುತ್ಯ ಮಾನ್ಸೂನ್ ಎಂಟ್ರಿ ಕೊಡಲಿದ್ದು, ಕರ್ನಾಟಕದಲ್ಲಿ ಇನ್ನೆರಡು ದಿನ ವಿಳಂಭವಾಗಲಿದೆ. ಆದರೆ ಮುಂಗಾರು ಪ್ರವೇಶಕ್ಕೂ ಮುನ್ನ ಕರ್ನಾಟಕದಲ್ಲಿ ಮಳೆ ಸುರಿಯುತ್ತಿದ್ದು, ಜೂನ್ 6ರ ವರೆಗೆ ಬಿರುಗಾಳಿ ಸಹಿತ ಬಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳಕ್ಕೆ ನಾಳೆ (ಜೂನ್ 4) ನೈರುತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಕೇರಳ ಹಾಗೂ ತಮಿಳುನಾಡಿಗೆ ಮುಂಗಾರು ಪ್ರವೇಶಿಸಿದ ಎರಡು ದಿನಗಳ ಬಳಿಕ ಕರ್ನಾಟಕದಲ್ಲಿ ಮಾನ್ಸೂನ್ ಎಂಟ್ರಿ ಕೊಡಲಿದೆ. ಮಾನ್ಸೂನ್ ಎಂಟ್ರಿಗೆ ಮೊದಲೇ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಉಳಿದಂತೆ ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
Also Read : ಕಾಳಿ-ಶರಾವತಿ ಪ್ರವಾಹ, ಸಮುದ್ರದಲ್ಲಿ ಭಾರೀ ಅಲೆಗಳು : ಉತ್ತರ ಕನ್ನಡದಲ್ಲಿ ಹೈ ಅಲರ್ಟ್
ಮಾತ್ರವಲ್ಲದೇ ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ವಿಜಯನಗರ, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Also Read : ಮಂತ್ರಾಲಯ, ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಜೂನ್ 3 ರಿಂದ ಓಡಲಿದೆ ವಿಶೇಷ ರೈಲು
ತಾಪಮಾನ ಏರಿಕೆಗೆ ಬ್ರೇಕ್, ಕರಾವಳಿ ಕೂಲ್ ಕೂಲ್
ಕಳೆದ ಕೆಲವು ತಿಂಗಳಿನಿಂದಲೂ ಬಿಸಿಲ ಝಳದಿಂದ ತತ್ತರಿಸಿದ್ದ ಕರಾವಳಿ ಜನತೆಗೆ ಮಳೆಯ ಎಂಟ್ರಿ ಖುಷಿ ಕೊಟ್ಟಿದೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯಲ್ಲಿ ಇಂದು ತಂಪು ತಂಪು ವಾತಾವರಣ ನಿರ್ಮಾಣವಾಗಿದೆ. ಇನ್ನೆರಡು ದಿನಗಳ ಕಾಲ ಮಳೆ ಸುರಿಯಲಿದ್ದು, ಜೂನ್ 6ರ ಬಳಿಕ ಮುಂಗಾರು ಎಂಟ್ರಿ ಕೊಡುವ ಹಿನ್ನೆಲೆಯಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ.
kerala monsoon entry karnataka rain alert june 6 yellow alert districts list



