ಸಿಎಂ ಸ್ಥಾನ ತ್ಯಜಿಸಿದ ಸಿದ್ದರಾಮಯ್ಯಗೆ ಬಂಪರ್​ ಗಿಫ್ಟ್​ : ಕಾಂಗ್ರೆಸ್​ ಹೈಕಮಾಂಡ್​ನಿಂದ ಅತ್ಯುನ್ನತ ಜವಾಬ್ದಾರಿ 

2023ರಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿಯೇ ದ್ವಿತೀಯಾರ್ಧದಲ್ಲಿ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ತ್ಯಜಿಸಬೇಕು ಎನ್ನುವುದು ನಿಶ್ಚಿತವಾಗಿತ್ತು. ಅಂತೆಯೇ ಮೂರು ವರ್ಷಗಳ ಬಳಿಕ ಹೈಕಮಾಂಡ್​ ಆದೇಶಕ್ಕೆ ತಲೆಬಾಗಿ ಸಿಎಂ ಸ್ಥಾನ ಪದತ್ಯಾಗ ಮಾಡಿರುವ ಸಿದ್ದರಾಮಯ್ಯರಿಗೆ ಕಾಂಗ್ರೆಸ್​ ಹೈಕಮಾಂಡ್ ಆಫರ್​ಗಳ ಮೇಲೆ ಆಫರ್​ ನೀಡುತ್ತಿದೆ.

2023ರಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿಯೇ ದ್ವಿತೀಯಾರ್ಧದಲ್ಲಿ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ತ್ಯಜಿಸಬೇಕು ಎನ್ನುವುದು ನಿಶ್ಚಿತವಾಗಿತ್ತು. ಅಂತೆಯೇ ಮೂರು ವರ್ಷಗಳ ಬಳಿಕ ಹೈಕಮಾಂಡ್​ ಆದೇಶಕ್ಕೆ ತಲೆಬಾಗಿ ಸಿಎಂ ಸ್ಥಾನ ಪದತ್ಯಾಗ ಮಾಡಿರುವ ಸಿದ್ದರಾಮಯ್ಯರಿಗೆ ಕಾಂಗ್ರೆಸ್​ ಹೈಕಮಾಂಡ್ ಆಫರ್​ಗಳ ಮೇಲೆ ಆಫರ್​ ನೀಡುತ್ತಿದೆ. ಕಾಂಗ್ರೆಸ್​ ಹೈಕಮಾಂಡ್ ಈ ಹಿಂದೆ ನೀಡಿರುವ ರಾಜ್ಯಸಭಾ ಸದಸ್ಯ ಸ್ಥಾನವನ್ನು ನಿರಾಕರಿಸಿದ ಸಿದ್ದರಾಮಯ್ಯಗೆ ಇದೀಗ ರಾಷ್ಟ್ರಮಟ್ಟದ ಹುದ್ದೆಯೊಂದನ್ನು ಹೈಕಮಾಂಡ್​ ನೀಡಿದೆ.

ಕಾಂಗ್ರೆಸ್​ ಪಕ್ಷಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಕಾಂಗ್ರೆಸ್​ನ ಅತ್ಯುನ್ನತ ಅಂಗವಾದ ಕಾಂಗ್ರೆಸ್​ ವರ್ಕಿಂಗ್​ ಕಮಿಟಿ ಸಿಡಬ್ಲುಸಿಯ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸಿದ್ದರಾಮಯ್ಯರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಇನ್ಮುಂದೆ ಕಾಂಗ್ರೆಸ್​ ಹೈಕಮಾಂಡ್​ ದರ್ಜೆಗೆ ಏರಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ ವೇಣುಗೋಪಾಲ್​, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯ ಮೇರೆಗೆ ಸಿದ್ದರಾಮಯ್ಯರಿಗೆ ಸಿಡಬ್ಲುಸಿ ಸದಸ್ಯ ಸ್ಥಾನ ನೀಡುತ್ತಿರುವುದಾಗಿ ದೆಹಲಿ ಅಕ್ಬರ್​ ರಸ್ತೆಯಲ್ಲಿರುವ ಕಾಂಗ್ರೆಸ್​ ಪ್ರಧಾನ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

Also Read: ಇಂದಿನಿಂದ ರಾಜ್ಯದಲ್ಲಿ ಡಿ.ಕೆ ಯುಗಾರಂಭ : ಸಂಜೆ 4:05ಕ್ಕೆ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಕಾಂಗ್ರೆಸ್​ ಪಕ್ಷಕ್ಕೆ ಸಂಬಂಧಿಸಿದ ಅತ್ಯುನ್ನತ ನಿರ್ಧಾರಗಳು, ರಾಷ್ಟ್ರ ರಾಜಕಾರಣ , ಮೈತ್ರಿ ಕುರಿತ ನಿರ್ಣಯಗಳು ಸೇರಿದಂತೆ ಪಕ್ಷಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುವ ಸೂಪರ್​ ಪವರ್​ ಹೊಂದಿರುವ ಕಮಿಟಿ ಇದಾಗಿದ್ದು, ಇದೀಗ ಈ ಕಮಿಟಿಯಲ್ಲಿ ಸಿದ್ದರಾಮಯ್ಯ ಕೂಡ ಸ್ಥಾನ ಪಡೆದಿದೆ. ಕರ್ನಾಟಕದ ಪ್ರಭಾವಿ ಕಾಂಗ್ರೆಸ್​ ನಾಯಕ ಎನಿಸಿರುವ ಸಿದ್ದರಾಮಯ್ಯರ ವರ್ಚಸ್ಸನ್ನು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳುವುದು ಕಾಂಗ್ರೆಸ್​ನ ಲೆಕ್ಕಾಚಾರ ಕೂಡ ಆಗಿದೆ.

Bumper gift for Siddaramaiah who resigned as CM Highest responsibility from Congress high command

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories