ಸಚಿವ ಸ್ಥಾನ ವಂಚಿತ ಬಿ.ಕೆ ಹರಿಪ್ರಸಾದ್​ಗೆ ಡಬಲ್​ ಧಮಾಕಾ : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕ

ಕಾಂಗ್ರೆಸ್​ ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿರುವ ವಿಧಾನಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್​ ಸಿದ್ದರಾಮಯ್ಯ ಸಂಪುಟದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಡಿ.ಕೆ ಶಿವಕುಮಾರ್​ ನೂತನ ಸಂಪುಟದಲ್ಲಿ ಬಿ.ಕೆ ಹರಿಪ್ರಸಾದ್​ಗೆ ಸಚಿವ ಸ್ಥಾನ ಫಿಕ್ಸ್​ ಎಂದೇ ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಂಪುಟದಿಂದ ಬಿ.ಕೆ ಹರಿಪ್ರಸಾದ್​ ಹೆಸರು ಕೈಬಿಟ್ಟಾಗಿತ್ತು. ಇದರಿಂದ ನಿರಾಶೆಗೊಂಡಿದ್ದ ಬಿ.ಕೆಹರಿಪ್ರಸಾದ್​ಗೆ ಕಾಂಗ್ರೆಸ್​ ಹೈಕಮಾಂಡ್​ ಡಬಲ್​ ಧಮಾಕಾ ನೀಡಿದೆ.

ಬಿ.ಕೆ ಹರಿಪ್ರಸಾದ್​ರನ್ನು ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ಕಾಂಗ್ರೆಸ್​ ಹೈಕಮಾಂಡ್​ ನೇಮಕ ಮಾಡಿದೆ. ಡಿ.ಕೆ ಶಿವಕುಮಾರ್​ ರಾಜ್ಯದ ನೂತನ ಮುಖ್ಯಮಂತ್ರಿಯಾದ ಬೆನ್ನಲ್ಲೇ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇದೀಗ ಬಿ.ಕೆ ಹರಿಪ್ರಸಾದ್​ ಆಯ್ಕೆಯಾಗಿದ್ದಾರೆ. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

Also Read: ಬಿಕೆ ಹರಿಪ್ರಸಾದ್‌ಗೆ ಖುಲಾಯಿಸಿದ ಲಕ್‌: ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಸಾರಥಿ ?

ಇದರ ಜೊತೆಯಲ್ಲಿ ಮತ್ತೊಂದು ಗುಡ್​ನ್ಯೂಸ್​ ಕೂಡ ಬಿ.ಕೆ ಹರಿಪ್ರಸಾದ್​ಗೆ ಒಲಿದುಬಂದಿದೆ. ವಿಧಾನಪರಿಷತ್​ ಪ್ರವೇಶಕ್ಕೆ ಮತ್ತೊಮ್ಮೆ ದಾರಿ ಮಾಡಿಕೊಟ್ಟಿರುವ ಕಾಂಗ್ರೆಸ್​ ಹೈಕಮಾಂಡ್​ , ಅವರಿಗೆ ಪಕ್ಷದಿಂದ ಎಂಎಲ್​ಸಿ ಟಿಕೆಟ್​ ಕೂಡ ಘೋಷಣೆ ಮಾಡಿದೆ.

ಇನ್ನು ಡಿ.ಕೆ ಶಿವಕುಮಾರ್​ ರಾಜೀನಾಮೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯಲು ಸತೀಶ್​ ಜಾರಕಿಹೊಳಿ ಶತಾಯಗತಾಯ ಪ್ರಯತ್ನ ಮಾಡಿದ್ದರು. ಸಚಿವ ಸ್ಥಾನದ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿ ಮೇಲೂ ಕಣ್ಣಿಟ್ಟಿದ್ದ ಸತೀಶ್​ ಜಾರಕಿಹೊಳಿಗೆ ,ಕಾಂಗ್ರೆಸ್​ ಹೈಕಮಾಂಡ್​ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆಮಾಡಿಕೊಳ್ಳುವಂತೆ ಕಡಾಖಂಡಿತವಾಗಿ ಹೇಳಿತ್ತು. ಹೀಗಾಗಿ ಸತೀಶ್​ ಜಾರಕಿಹೊಳಿ ಬೇರೆ ವಿಧಿ ಇಲ್ಲದೇ, ಸಚಿವ ಸ್ಥಾನವನ್ನು ಮಾತ್ರ ಆಯ್ಕೆಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಕಾಂಗ್ರೆಸ್​ ಹೈಕಮಾಂಡ್​ ಬಿ.ಕೆ ಹರಿಪ್ರಸಾದ್​ರ ಬೇಸರ ತಣಿಸಲು ಎರಡೆರಡು ಗಿಫ್ಟ್​ಗಳನ್ನು ನೀಡಿದೆ.

Double blow to BK Hariprasad who was deprived of ministerial post appointed as new KPCC president

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories