ಮಹಾರಾಜ ಟ್ರೋಫಿ 2026 : ಕೆಎಲ್ ರಾಹುಲ್ ಅನ್ಸೋಲ್ಡ್ : ಯಾವ ಆಟಗಾರ, ಯಾವ ತಂಡಕ್ಕೆ
Maharaja Trophy KSCA T20 Auction 2026 : ಮಹಾರಾಜ ಟ್ರೋಫಿ (Maharaja Trophy KSCA T20 Auction 2026) ಕ್ರಿಕೆಟ್ ಪಂದ್ಯಾವಳಿಗಾಗಿ ಹರಾಜು ಪ್ರಕ್ರಿಯೆ ಇಂದು ನಡೆದಿದ್ದು, ಟೀಂ ಇಂಡಿಯಾದ ಭರವಸೆಯ ಆಟಗಾರ ಕೆಎಲ್ ರಾಹುಲ್ ಅನ್ಸೋಲ್ಡ್ ಆಗಿದ್ದಾರೆ.

ಬೆಂಗಳೂರು : ಮಹಾರಾಜ ಟ್ರೋಫಿ (Maharaja Trophy KSCA T20 Auction 2026) ಕ್ರಿಕೆಟ್ ಪಂದ್ಯಾವಳಿಗಾಗಿ ಹರಾಜು ಪ್ರಕ್ರಿಯೆ ಇಂದು ನಡೆದಿದ್ದು, ಟೀಂ ಇಂಡಿಯಾದ ಭರವಸೆಯ ಆಟಗಾರ ಕೆಎಲ್ ರಾಹುಲ್ ಅನ್ಸೋಲ್ಡ್ ಆಗಿದ್ದಾರೆ. 2026ರ ಜೂನ್ 20 ರಿಂದ ಜುಲೈ 12 ರವರೆಗೆ ಮಹಾರಾಜ ಟ್ರೋಫಿ ಪಂದ್ಯಾವಳಿ ನಡೆಯಲಿದ್ದು, ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಹಲವು ಆಟಗಾರು ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ.
ಮಹಾರಾಜ ಟ್ರೋಫಿ 2026 ( Maharaja Trophy KSCA T20 Auction 2026) : ಹರಾಜಿನ ದುಬಾರಿ ಆಟಗಾರರು
ಕರ್ನಾಟಕದ ಪ್ರಮುಖ ಸ್ಟಾರ್ ಆಟಗಾರರಾದ ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಈ ಬಾರಿಯೂ ಹರಾಜಿನಲ್ಲಿ ಭಾರಿ ಮೊತ್ತಕ್ಕೆ
- ದೇವದತ್ ಪಡಿಕ್ಕಲ್- ಹುಬ್ಬಳ್ಳಿ ಟೈಗರ್ಸ್₹13.20 ಲಕ್ಷ
- ಮಯಾಂಕ್ ಅಗರ್ವಾಲ್- ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ₹14.00 ಲಕ್ಷ
- ಅಭಿನವ್ ಮನೋಹರ್- ಹುಬ್ಬಳ್ಳಿ ಟೈಗರ್ಸ್₹12.20 ಲಕ್ಷ
- ಮನೀಶ್ ಪಾಂಡೆ- ಮೈಸೂರು ವಾರಿಯರ್ಸ್₹12.20 ಲಕ್ಷ
- ವಿದ್ವತ್ ಕಾವೇರಪ್ಪ – ಶಿವಮೊಗ್ಗ ಲಯನ್ಸ್ ₹10.80 ಲಕ್ಷ
Also Read : ಆರ್ಸಿಬಿ ಸೇರ್ತಾರಾ ವೈಭವ್ ಸೂರ್ಯವಂಶಿ ? IPL 2027 ಹರಾಜಿನ ನಿಯಮಗಳೇನು?
ಮಹಾರಾಜ ಟ್ರೋಫಿ 2026 : ಯಾವ ಆಟಗಾರರು ಯಾವ ತಂಡಕ್ಕೆ
ಹುಬ್ಳಿ ಟೈಗರ್ಸ್ (Hubli Tigers)
ಹುಬ್ಳಿ ತಂಡವು ಈ ಬಾರಿ ಭಾರಿ ಹಣ ನೀಡಿ ದೇವದತ್ ಪಡಿಕ್ಕಲ್ ಮತ್ತು ಅಭಿನವ್ ಮನೋಹರ್ ಅವರನ್ನು ತನ್ನದಾಗಿಸಿಕೊಂಡಿದೆ.
- ದೇವದತ್ ಪಡಿಕ್ಕಲ್ – ₹13.20 ಲಕ್ಷ
- ಅಭಿನವ್ ಮನೋಹರ್ – ₹12.20 ಲಕ್ಷ
- ಮೊಹಮ್ಮದ್ ತಾಹಾ – ₹4.60 ಲಕ್ಷ
- ಕೆ.ಸಿ. ಕಾರಿಯಪ್ಪ – ₹4.20 ಲಕ್ಷ
- ಸಮರ್ಥ್ ನಾಗರಾಜ್ – ₹3.20 ಲಕ್ಷ
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (Kalyani Bengaluru Blasters)
ಬೆಂಗಳೂರು ತಂಡವು ಅನುಭವಿ ಓಪನರ್ ಮಯಾಂಕ್ ಅಗರ್ವಾಲ್ ಅವರ ಸಾರಥ್ಯವನ್ನು ಬಲಪಡಿಸಲು ದೊಡ್ಡ ಮೊತ್ತ ಹೂಡಿದೆ.
- ಮಯಾಂಕ್ ಅಗರ್ವಾಲ್ – ₹14.00 ಲಕ್ಷ
- ವಿದ್ಯಾಧರ್ ಪಾಟೀಲ್ – ₹8.30 ಲಕ್ಷ
- ಚೇತನ್ ಎಲ್.ಆರ್ – ₹5.10 ಲಕ್ಷ
- ಶುಭಾಂಗ್ ಹೆಗ್ಡೆ – ₹4.30 ಲಕ್ಷ
- ರೋಹನ್ ಪಾಟೀಲ್ – ₹2.70 ಲಕ್ಷ
Also Read : ಆರ್ಸಿಬಿ ವಿಜಯೋತ್ಸವ ಕರಾಳ ಘಟನೆಗೆ 1 ವರ್ಷ : 11 ಅಭಿಮಾನಿಗಳ ದುರ್ಮರಣಕ್ಕೆ ಸಿಗದ ತಾರ್ಕಿಕ ಅಂತ್ಯ
ಮೈಸೂರು ವಾರಿಯರ್ಸ್ (Mysore Warriors)
ಆಲ್ರೌಂಡರ್ಗಳು ಮತ್ತು ಅನುಭವಿ ಬ್ಯಾಟರ್ಗಳ ಮೇಲೆ ಮೈಸೂರು ತಂಡ ಹೆಚ್ಚು ಗಮನ ಹರಿಸಿದೆ.
- ಮನೀಶ್ ಪಾಂಡೆ – ₹12.20 ಲಕ್ಷ
- ಕರುಣ್ ನಾಯರ್ – ₹6.80 ಲಕ್ಷ
- ಶಿಖರ್ ಶೆಟ್ಟಿ – ₹4.70 ಲಕ್ಷ
- ಕೆ. ಗೌತಮ್ – ₹4.40 ಲಕ್ಷ
- ಸಿ.ಎ. ಕಾರ್ತಿಕ್ – ₹4.20 ಲಕ್ಷ
- ಪ್ರಸಿದ್ಧ್ ಕೃಷ್ಣ – ₹2.00 ಲಕ್ಷ
ಗುಲ್ಬರ್ಗಾ ಮಿಸ್ಟಿಕ್ಸ್ (Gulbarga Mystics)
ಗುಲ್ಬರ್ಗಾ ತಂಡವು ಬೌಲಿಂಗ್ ಮತ್ತು ವಿಕೆಟ್ ಕೀಪಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಪ್ರಮುಖ ಆಟಗಾರರನ್ನು ಖರೀದಿಸಿದೆ.
- ವೈಶಾಕ್ ವಿಜಯ್ಕುಮಾರ್ – ₹8.80 ಲಕ್ಷ
- ಲವಿಶ್ ಕೌಶಲ್ – ₹7.75 ಲಕ್ಷ
- ಲುವ್ನೀತ್ ಸಿಸೋಡಿಯಾ – ₹7.20 ಲಕ್ಷ
- ಪ್ರವೀಣ್ ದುಬೆ – ₹6.80. ಲಕ್ಷ
- ಕೆ.ವಿ. ಸಿದ್ದಾರ್ಥ್ – ₹6.10 ಲಕ್ಷ
ಕೋಸ್ಟಲ್ ಕಿಂಗ್ಸ್ ಮಂಗಳೂರು (Coastal Kings Mangaluru)
ಹೊಸ ಫ್ರಾಂಚೈಸಿಯಾಗಿ ಕಣಕ್ಕಿಳಿದಿರುವ ಮಂಗಳೂರು ತಂಡವು ಸ್ಪಿನ್ ಮತ್ತು ಆಲ್ರೌಂಡ್ ವಿಭಾಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.
- ಶ್ರೇಯಸ್ ಗೋಪಾಲ್ – ₹8.60 ಲಕ್ಷ
- ಶಿವರಾಜ್ ಎಸ್ – ₹6.55 ಲಕ್ಷ
- ಅಭಿಲಾಷ್ ಶೆಟ್ಟಿ – ₹6.30 ಲಕ್ಷ
- ಮೇಲು ಕ್ರಾಂತಿ ಕುಮಾರ್ – ₹5.60 ಲಕ್ಷ
- ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ – ₹5.00 ಲಕ್ಷ
ಶಿವಮೊಗ್ಗ ಲಯನ್ಸ್ (Shivamogga Lions)
ವೇಗದ ಬೌಲಿಂಗ್ ದಾಳಿಯನ್ನು ಬಲಪಡಿಸಲು ಶಿವಮೊಗ್ಗ ತಂಡ ದೊಡ್ಡ ಹೂಡಿಕೆ ಮಾಡಿದೆ.
- ವಿದ್ವತ್ ಕಾವೇರಪ್ಪ – ₹10.80 ಲಕ್ಷ
- ಅನೀಶ್ವರ್ ಗೌತಮ್ – ₹8.20 ಲಕ್ಷ
- ವಾಸುಕಿ ಕೌಶಿಕ್ – ₹5.90 ಲಕ್ಷ
- ಹಾರ್ದಿಕ್ ರಾಜ್ – ₹5.80 ಲಕ್ಷ
- ಅವಿನಾಶ್ ಡಿ – ₹5.40 ಲಕ್ಷ
ಪ್ರತಿ ತಂಡವು ಹರಾಜಿನ ಮೂಲಕ ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನು ಖರೀದಿಸಿದೆ. ಇದರೊಂದಿಗೆ ಕಡ್ಡಾಯವಾಗಿ ಇಬ್ಬರು ‘ಕ್ಯಾಚ್ಮೆಂಟ್ ಏರಿಯಾ ಆಟಗಾರರನ್ನು (ಸ್ಥಳೀಯ ಪ್ರತಿಭೆಗಳು) ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ 5ನೇ ಸೀಸನ್ನ ರೋಚಕ ಟೂರ್ನಿಯು ಜೂನ್ 20 ರಿಂದ ಜುಲೈ 12 ರವರೆಗೆ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಜರುಗಲಿದೆ. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಈ ಬಾರಿ ಹರಾಜಿನಲ್ಲಿ ಅನ್ಸೋಲ್ಡ್ ಆಗಿ ಉಳಿದಿದ್ದಾರೆ.
Maharaja Trophy KSCA T20 Auction 2026 KL Rahul Unsold



