ಆರ್‌ಬಿಐ ಹೊಸ ಗೈಡ್‌ಲೈನ್ಸ್: ಇನ್ಮುಂದೆ ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ಈ ತಪ್ಪು ಮಾಡಿದ್ರೆ ಅಕೌಂಟ್ ಬ್ಲಾಕ್!
ಗೂಗಲ್ ಪೇ (Google Pay), ಫೋನ್ ಪೇ (PhonePe), ಪೇಟಿಎಂ (Paytm) ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ದಿನನಿತ್ಯ ಹಣದ ವಹಿವಾಟು ನಡೆಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಎನ್‌ಪಿಸಿಐ (NPCI) ಡಿಜಿಟಲ್ ವಂಚನೆಗಳಿಗೆ ಬ್ರೇಕ್ ಹಾಕಲು ಜೂನ್ ತಿಂಗಳಿನಿಂದ ದೇಶಾದ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಆನ್‌ಲೈನ್ ಮೂಲಕ ಹಣ ವರ್ಗಾವಣೆಗ ಮಾಡುವವರೇ ಎಚ್ಚರ…! ಭಾರತೀಯ ರಿಸರ್ವ್ ಬ್ಯಾಂಕ್ ಆನ್‌ಲೈನ್ ವಹಿವಾಟಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿಗೆ ತಂಡಿದೆ. ಗೂಗಲ್ ಪೇ (Google Pay), ಫೋನ್ ಪೇ (PhonePe), ಪೇಟಿಎಂ (Paytm) ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ದಿನನಿತ್ಯ ಹಣದ ವಹಿವಾಟು ನಡೆಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಎನ್‌ಪಿಸಿಐ (NPCI) ಡಿಜಿಟಲ್ ವಂಚನೆಗಳಿಗೆ ಬ್ರೇಕ್ ಹಾಕಲು ಜೂನ್ ತಿಂಗಳಿನಿಂದ ದೇಶಾದ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಆರ್‌ಬಿಐನ ಈ ಹೊಸ ಭದ್ರತಾ ನಿಯಮಗಳ (Two-Factor Authentication) ಪ್ರಕಾರ, ಇನ್ಮುಂದೆ ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ಗ್ರಾಹಕರು ಸಣ್ಣ ತಪ್ಪು ಮಾಡಿದರೂ ಅವರ ಬ್ಯಾಂಕ್ ಖಾತೆ ಬ್ಲಾಕ್ ಆಗುವ ಅಥವಾ ವಹಿವಾಟು ರದ್ದಾಗುವ ಸಾಧ್ಯತೆ ಇದೆ.
ಕಡ್ಡಾಯವಾಗಲಿದೆ 2-ಸ್ಟೆಪ್ ವೆರಿಫಿಕೇಶನ್ (Two-Factor Authentication)
ಇದುವರೆಗೆ ನೀವು ಕೇವಲ ಯುಪಿಐ ಪಿನ್ (UPI PIN) ಹಾಕಿದರೆ ಹಣ ವರ್ಗಾವಣೆಯಾಗುತ್ತಿತ್ತು. ಆದರೆ ಇನ್ಮುಂದೆ ಕೇವಲ ಪಿನ್ ನಂಬರ್ ಹಾಕಿದ ಮಾತ್ರಕ್ಕೆ ಸಾಕಾಗುವುದಿಲ್ಲ. ಸೈಬರ್ ವಂಚನೆ ಹಾಗೂ ಸಿಮ್-ಸ್ವಾಪ್ (SIM-Swap) ವಂಚನೆಗಳನ್ನು ತಡೆಯಲು ಆರ್‌ಬಿಐ ದ್ವಿಮುಖ ಭದ್ರತೆಯನ್ನು ಕಡ್ಡಾಯಗೊಳಿಸಿದೆ. ಇನ್ಮುಂದೆ ದೊಡ್ಡ ಮೊತ್ತದ ಅಥವಾ ಅನುಮಾನಾಸ್ಪದ ವಹಿವಾಟು ನಡೆಸುವಾಗ ಪಿನ್ ಜೊತೆಗೆ ಬಯೋಮೆಟ್ರಿಕ್ (ಫಿಂಗರ್‌ಪ್ರಿಂಟ್/ಫೇಸ್ ಐಡಿ) ಅಥವಾ ಇನ್-ಆ್ಯಪ್ ಸುರಕ್ಷತಾ ಅಪ್ರೂವಲ್ ಕಡ್ಡಾಯವಾಗಿ ಇರಲಿದೆ.
ನಿಮ್ಮ ಅಕೌಂಟ್ ಬ್ಲಾಕ್ ಆಗದಂತೆ ತಡೆಯಲು ಈ ಹೊಸ ನಿಯಮ
ಲಿಮಿಟೆಡ್ ಬ್ಯಾಲೆನ್ಸ್ ಚೆಕ್: ಇನ್ಮುಂದೆ ಗ್ರಾಹಕರು ಒಂದು ಯುಪಿಐ ಆ್ಯಪ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಲು (Balance Check) ಅವಕಾಶವಿರುತ್ತದೆ. ಅದಕ್ಕಿಂತ ಹೆಚ್ಚು ಬಾರಿ ಸರ್ಚ್ ಮಾಡಿದರೆ ಸಿಸ್ಟಮ್ ಲೋಡ್ ತಡೆಯಲು ಬ್ಯಾಂಕಿಂಗ್ ಸರ್ವರ್ ತಾತ್ಕಾಲಿಕವಾಗಿ ನಿಮ್ಮ ಯುಪಿಐ ಅನ್ನು ಬ್ಲಾಕ್ ಮಾಡಬಹುದು.
90 ದಿನಗಳ ಇನ್‌ಆಕ್ಟಿವ್ ನಿಯಮ: ನೀವು ಲಿಂಕ್ ಮಾಡಿರುವ ಮೊಬೈಲ್ ನಂಬರ್ 90 ದಿನಗಳಿಗಿಂತ ಹೆಚ್ಚು ಕಾಲ ಇನ್‌ಆಕ್ಟಿವ್ ಆಗಿದ್ದರೆ (ರೀಚಾರ್ಜ್ ಮಾಡಿಸದಿದ್ದರೆ), ಅಂತಹ ನಂಬರ್‌ಗಳ ಯುಪಿಐ ಸೇವೆಯನ್ನು ಎನ್‌ಪಿಸಿಐ ಸಂಪೂರ್ಣವಾಗಿ ರದ್ದುಗೊಳಿಸಲಿದೆ.
ಬ್ಯಾಂಕ್ ಅಕೌಂಟ್ ಲಿಂಕಿಂಗ್ ಮಿತಿ: ಸುರಕ್ಷತೆಯ ದೃಷ್ಟಿಯಿಂದ ಒಂದು ಯುಪಿಐ ಆ್ಯಪ್‌ಗೆ ದಿನಕ್ಕೆ ಗರಿಷ್ಠ 25 ಬ್ಯಾಂಕ್ ಖಾತೆಗಳನ್ನು ಮಾತ್ರ ಲಿಂಕ್ ಮಾಡಲು ಮಿತಿ ಹೇರಲಾಗಿದೆ.
e-KYC ಅಪ್ಡೇಟ್ : ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ಕಡಿತವಾಗುವುದನ್ನು ತಡೆಯಲು ಗ್ರಾಹಕರು ತಕ್ಷಣವೇ ತಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಿಮ್ಮ ಆಧಾರ್ ಮತ್ತು ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೆ ಸರಿಯಾಗಿ ಲಿಂಕ್ ಆಗದಿದ್ದರೆ ಡಿಜಿಟಲ್ ಪಾವತಿಗಳು ಸ್ಥಗಿತಗೊಳ್ಳಬಹುದು.
ಆರ್‌ಬಿಐ ತಂದಿರುವ ಈ ಹೊಸ ಬದಲಾವಣೆಗಳಿಂದ ಡಿಜಿಟಲ್ ಪಾವತಿ ಪ್ರಕ್ರಿಯೆ ಸ್ವಲ್ಪ ನಿಧಾನವಾಗಬಹುದು. ಆದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಇದು ಡಬಲ್ ಸುರಕ್ಷತೆ ನೀಡಲಿದ್ದು, ಸೈಬರ್ ಕಳ್ಳರ ಆಟಕ್ಕೆ ಪೂರ್ಣ ಪ್ರಮಾಣದ ಬ್ರೇಕ್ ಬೀಳಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಮುನ್ನೆಚ್ಚರಿಕೆಯಾಗಿ ಇಂದೇ ನಿಮ್ಮ ಯುಪಿಐ ಆ್ಯಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಿ.
rbi online money transfer new guidelines 2026



