ರಾಮಲಿಂಗಾರೆಡ್ಡಿ ಖಾತೆ ಬದಲಾವಣೆಗೆ ಹೈಕಮಾಂಡ್​ ರೆಡ್​ ಸಿಗ್ನಲ್​ : ಮಾತುಕತೆ ಮೂಲಕ ಮನವೊಲಿಸಲು ಸಿಎಂಗೆ ಸೂಚನೆ

ಬೆಂಗಳೂರು ನಗರ ರಾಜಕಾರಣದ ಮೇಲೆ ಬಲವಾದ ಹಿಡಿತ ಹೊಂದಿರುವ ರಾಮಲಿಂಗಾರೆಡ್ಡಿ, ಡಿ.ಕೆ ಶಿವಕುಮಾರ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ತಮಗೆ ಈ ಖಾತೆ ದೊರಕಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ರಾಜೀನಾಮೆ ನೀಡುವ ಮೂಲಕ ಸಿಎಂ ಡಿ.ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್​ ಹೈಕಮಾಂಡ್​ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದ್ದರು.

ಬೆಂಗಳೂರು ನಗರ ರಾಜಕಾರಣದ ಮೇಲೆ ಬಲವಾದ ಹಿಡಿತ ಹೊಂದಿರುವ ರಾಮಲಿಂಗಾರೆಡ್ಡಿ, ಡಿ.ಕೆ ಶಿವಕುಮಾರ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ತಮಗೆ ಈ ಖಾತೆ ದೊರಕಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ರಾಜೀನಾಮೆ ನೀಡುವ ಮೂಲಕ ಸಿಎಂ ಡಿ.ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್​ ಹೈಕಮಾಂಡ್​ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದ್ದರು. ರಾಮಲಿಂಗಾರೆಡ್ಡಿ ಈ ತಂತ್ರಕ್ಕೆ ಹೈಕಮಾಂಡ್​ ಕ್ಯಾರೇ ಎಂದಿಲ್ಲ ಎನ್ನಲಾಗಿದ್ದು, ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಸಾಧ್ಯವೇ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದೆ ಎನ್ನಲಾಗಿದೆ.

ಒಬ್ಬ ರಾಜಕಾರಣಿಯ ರಾಜೀನಾಮೆ ತಂತ್ರಕ್ಕೆ ಬಗ್ಗಿದರೆ ಉಳಿದ ರಾಜಕಾರಣಿಗಳೂ ಇದೇ ಮಾರ್ಗದ ಮೂಲಕ ಹೈಕಮಾಂಡ್​ಗೆ ಒತ್ತಡ ಹೇರುವ ಸಾಧ್ಯತೆ ಇರುತ್ತದೆ. ಒಬ್ಬರ ಬೇಡಿಕೆಗೆ ಮಣಿದು ಖಾತೆ ಬದಲಾಯಿಸಿದರೆ, ಮುಂಬರುವ ದಿನಗಳಲ್ಲಿ ಇತರ ಸಚಿವರೂ ತಮ್ಮ ಖಾತೆ ಬದಲಾವಣೆಗೆ ಒತ್ತಡ ಹೇರಬಹುದು ಮತ್ತು ಮುಂದಿನ ಸಂಪುಟ ವಿಸ್ತರಣೆಯ ವೇಳೆಯೂ ಇದು ದೊಡ್ಡ ಸಮಸ್ಯೆಯಾಗಬಹುದು ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪೋರ್ಟ್‌ಫೋಲಿಯೋ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ದೆಹಲಿ ನಾಯಕರು ಸ್ಪಷ್ಟಪಡಿಸಿದ್ದಾರೆ.

Also Read: ಕಾನೂನು ಮೀರಿದರೆ ಕ್ರಮ ಖಚಿತ: ಖಡಕ್ ಸಂದೇಶ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಇನ್ನು ಇದರ ಜೊತೆಯಲ್ಲಿ ರಾಮಲಿಂಗಾರೆಡ್ಡಿ ಮನವೊಲಿಸುವ ಹೊಣೆಗಾರಿಕೆಯನ್ನು ಹೈಕಮಾಂಡ್​ ಸಿಎಂ ಡಿ.ಕೆ ಶಿವಕುಮಾರ್​ ಹೆಗಲಿಗೆ ಏರಿಸಿದೆ. ಇದರ ಬೆನ್ನಲ್ಲೇ ಸಚಿವರ ಮನಸ್ಸು ಬದಲಾಯಿಸಲು ಸಿಎಂ ಕಸರತ್ತು ಆರಂಭಿಸಿದ್ದಾರೆ. ಒಂದೆಡೆ ರಾಮಲಿಂಗಾರೆಡ್ಡಿ ಅವರ ಅಸಮಾಧಾನ, ಇನ್ನೊಂದೆಡೆ ಸಚಿವ ಮುನಿಯಪ್ಪ ಕೂಡ ಹಳೆಯ ಖಾತೆಯನ್ನೇ ಕೊಟ್ಟಿದ್ದಕ್ಕೆ ಅಪಸ್ವರ ತೆಗೆದಿದ್ದಾರೆ. ಈಗ ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಜವಾಬ್ದಾರಿ ಡಿ.ಕೆ ಸಾಹೇಬರ ಹೆಗಲಿಗೆ ಬಿದ್ದಿದ್ದು, ಟ್ರಬಲ್​ ಶೂಟರ್​ ಏನ್​ ಮಾಡ್ತಾರೆ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡ್ತಿದೆ.

High Command red signal for change of account of Ramalingareddy  Instruction to CM to convince through talks

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories