ಗೆಳತಿಯರಿಗೆ ಐಫೋನ್ ಗಿಫ್ಟ್ ನೀಡಲು ಐನಾತಿ ಪ್ಲಾನ್ : ಗೋಡೌನ್‌ನಿಂದ ನಲ್ಲಿ ಕದ್ದ ಅಪ್ರಾಪ್ತ ಲವರ್ಸ್
ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಮಾತನ್ನು ಕೇಳಿದ್ದೇವೆ, ಆದರೆ ಇಲ್ಲೊಬ್ಬರು ಪ್ರೇಯಸಿಯರ ದುಬಾರಿ ಆಸೆಯನ್ನು ಈಡೇರಿಸಲು ವಿಚಿತ್ರ ಕಳ್ಳತನದ ಹಾದಿ ಹಿಡಿದಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಗೆಳತಿಯರಿಗೆ ಐಫೋನ್ ಗಿಫ್ಟ್ ಕೊಡಲೇಬೇಕು ಎಂಬ ಹಠಕ್ಕೆ ಬಿದ್ದ ಇಬ್ಬರು ಅಪ್ರಾಪ್ತ ಯುವಕರು, ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ನಲ್ಲಿಗಳನ್ನು ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ನಗರದ ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಗೋಡೌನ್‌ನ ಮೇಲ್ಛಾವಣಿಯ ಶೀಟ್‌ಗಳನ್ನು ಕಿತ್ತು ಒಳನುಗ್ಗಿದ್ದ ಈ ಕಿರಾತಕರು, ಅಲ್ಲಿಟ್ಟಿದ್ದ ದುಬಾರಿ ಗೋಲ್ಡ್, ರೋಸ್ ಗೋಲ್ಡ್ ಹಾಗೂ ಸಿಲ್ವರ್ ಕೋಟಿಂಗ್ ಹೊಂದಿದ್ದ ಡಿಸೈನರ್ ನಲ್ಲಿಗಳನ್ನು ದೋಚಿದ್ದರು. ಆದರೆ ಆಘಾತಕಾರಿ ವಿಷಯವೆಂದರೆ, ತಮಗೆ ಹಣದ ತುರ್ತು ಅಗತ್ಯವಿದ್ದ ಕಾರಣ ಈ ಐಷಾರಾಮಿ ನಲ್ಲಿಗಳನ್ನು ಸ್ಥಳೀಯ ಗುಜರಿ ವ್ಯಾಪಾರಿಗೆ ಕೇವಲ 20,000 ರೂಪಾಯಿಗಳಿಗೆ ಮಾರಿ ಕೈತೊಳೆದುಕೊಂಡಿದ್ದರು.
Also Read: Delhi Fire Accident: ದೆಹಲಿಯ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟ; 21 ಮಂದಿ ಸಜೀವ ದಹನ
ಗೋಡೌನ್ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಕಲಾಂನ ಠಾಣೆಯ ಪೊಲೀಸರು, ಸುತ್ತಮುತ್ತಲಿನ 20ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿ ಕೇವಲ 12 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಮ್ಮ ಗರ್ಲ್‌ಫ್ರೆಂಡ್ಸ್ ಐಫೋನ್ ಕೇಳಿ ಒತ್ತಾಯ ಮಾಡುತ್ತಿದ್ದರು, ಅದಕ್ಕಾಗಿ ಈ ಕೃತ್ಯ ಎಸಗಿದೆವು ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಕದ್ದ ಮಾಲನ್ನು ಕೊಂಡಿದ್ದ ಗುಜರಿ ವ್ಯಾಪಾರಿ ಇರ್ಫಾನ್ ಅಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮೌಲ್ಯಯುತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Ainatis plan to gift iPhones to girlfriends Underage lovers steal faucet from godown