ಗೋಕರ್ಣದಲ್ಲಿ ಕ್ಷೇತ್ರದಲ್ಲಿ ನಡೆಯಿತು ಇದೆಂತಾ ಅಪಚಾರ : ಪವಿತ್ರ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ, ದೇಶದ ಪ್ರಮುಖ ಶೈವ ಕ್ಷೇತ್ರಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಮಹಾ ಅಪಚಾರವೊಂದು ಸಂಭವಿಸಿದೆ. ಇಡೀ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಪರಮ ಪವಿತ್ರ ಎಂದು ಭಾವಿಸುವ ಮಹಾಬಲೇಶ್ವರ ದೇವರ ‘ಆತ್ಮಲಿಂಗ’ ಇರುವ ಗರ್ಭಗುಡಿಗೆ ಕೊಳಚೆ ನೀರು ನುಗ್ಗಿದ್ದು, ಪವಿತ್ರ ಲಿಂಗವೇ ಕೊಳಚೆ ನೀರಿನಲ್ಲಿ ಮುಳುಗಡೆಯಾದ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ, ದೇಶದ ಪ್ರಮುಖ ಶೈವ ಕ್ಷೇತ್ರಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಮಹಾ ಅಪಚಾರವೊಂದು ಸಂಭವಿಸಿದೆ. ಇಡೀ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಪರಮ ಪವಿತ್ರ ಎಂದು ಭಾವಿಸುವ ಮಹಾಬಲೇಶ್ವರ ದೇವರ ‘ಆತ್ಮಲಿಂಗ’ ಇರುವ ಗರ್ಭಗುಡಿಗೆ ಕೊಳಚೆ ನೀರು ನುಗ್ಗಿದ್ದು, ಪವಿತ್ರ ಲಿಂಗವೇ ಕೊಳಚೆ ನೀರಿನಲ್ಲಿ ಮುಳುಗಡೆಯಾದ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಇತಿಹಾಸದಲ್ಲೇ ಇಂತಹದ್ದೊಂದು ದುಸ್ಥಿತಿ ಎಂದೂ ಬಂದಿರಲಿಲ್ಲ ಎಂದು ಸ್ಥಳೀಯ ಪುರೋಹಿತರು ಹಾಗೂ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಕ್ಷಾಂತರ ಭಕ್ತರು ಸ್ವಯಂ ಹಸ್ತದಿಂದ ಸ್ಪರ್ಶಿಸಿ ಪೂಜೆ ಸಲ್ಲಿಸುವ ಮಹಾಬಲೇಶ್ವರನ ಆತ್ಮಲಿಂಗ ಕೊಳಚೆ ನೀರಿನಿಂದ ಮುಳುಗಿ ಹೋಗಿದೆ. ಬಾರೀ ಮಳೆಯಿಂದಾಗಿ ನೋಡ ನೋಡುತ್ತಿದ್ದಂತೆಯೇ ಪವಿತ್ರ ಆತ್ಮಲಿಂಗವಿದ್ದ ಜಾಗ ಪೂರ್ತಿ ದುರ್ವಾಸನೆ ಯುಕ್ತ ಕಪ್ಪು ನೀರಿನಿಂದ ತುಂಬಿ ಹೋಗಿದೆ. ಇದರಿಂದಾಗಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಪೂಜೆ-ಅಭಿಷೇಕ ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣವೇ ಎಚ್ಚೆತ್ತ ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿ ಬಕೆಟ್ಗಳ ಮೂಲಕ ಕೊಳಚೆ ನೀರನ್ನು ಹೊರಹಾಕಲು ಹರಸಾಹಸ ಪಡಬೇಕಾಯಿತು.
ಕರಾವಳಿಯ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಗೋಕರ್ಣಕ್ಕೆ ಪ್ರತಿದಿನ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ದೇವಸ್ಥಾನದಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದರೂ, ಕನಿಷ್ಠ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದ ಆಡಳಿತ ಮಂಡಳಿ ಮತ್ತು ಸ್ಥಳೀಯ ಪುರಸಭೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ, ದೇವರ ಇತಿಹಾಸದಲ್ಲೇ ನಡೆದಿರುವ ಮಹಾ ಅಪಚಾರ. ಪವಿತ್ರ ಕ್ಷೇತ್ರವನ್ನು ಈ ರೀತಿ ನಿರ್ಲಕ್ಷ್ಯ ಮಾಡಿರುವುದಕ್ಕೆ ಅಧಿಕಾರಿಗಳೇ ನೇರ ಹೊಣೆ. ತಕ್ಷಣವೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪುರೋಹಿತರು ಎಚ್ಚರಿಕೆ ನೀಡಿದ್ದಾರೆ.
Also Read: ಕುಡುಕರಿಗೆ ಬಾರ್, ಪಬ್ ಇಂಟ್ರಿಗೆ ಆಧಾರ್ ಕಡ್ಡಾಯ : ಕರ್ನಾಟಕದಲ್ಲಿ ಜಾರಿ ಆಯ್ತು ಕಠಿಣ ರೂಲ್ಸ್
ಗೋಕರ್ಣ ಕ್ಷೇತ್ರದಲ್ಲಿ ಸದ್ಯ ಕೊಳಚೆ ನೀರನ್ನು ಹೊರ ಹಾಕಿ ತಾತ್ಕಾಲಿಕವಾಗಿ ಗರ್ಭಗುಡಿಯನ್ನು ಸ್ವಚ್ಚಗೊಳಿಸಲಾಗಿದೆ. ಆದರೆ ಮಳೆ ಹೀಗೆಯೇ ಮುಂದುವರಿದ್ರೆ ಇದೇ ಪರಿಸ್ಥಿತಿ ಮರುಕಳಿಸುವ ಆತಂಕ ಎದುರಾಗಿದೆ. ರಾಜ್ಯದ ಇತಿಹಾಸ ಪ್ರಸಿದ್ಧ ಆತ್ಮಲಿಂಗಕ್ಕೆ ಒದಗಿರುವ ಈ ದುಸ್ಥಿತಿಗೆ ಸರ್ಕಾರ ಮತ್ತು ಮುಜರಾಯಿ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರಾವಳಿ ಭಾಗದ ಜನತೆ ಒತ್ತಾಯಿಸುತ್ತಿದ್ದಾರೆ.
This is what happened in the field in Gokarna Sewage water submerged the sacred Atma Linga



