Daily Horoscope: ಇಂದು ಸೌಭಾಗ್ಯ ಯೋಗ ! ಜೂನ್ 10 ರ ಬುಧವಾರ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಯಾರಿಗೆ ಧನಲಾಭ ?
ಜೂನ್ 10, 2026ರ ಬುಧವಾರದ ದಿನ ಭವಿಷ್ಯ. ಇಂದು ಸೌಭಾಗ್ಯ ಮತ್ತು ಆಯುಷ್ಮಾನ್ ಯೋಗಗಳ ಮಹಾ ಸಂಯೋಜನೆ ಇರಲಿದ್ದು, ಮೇಷ, ಸಿಂಹ, ಧನುಸ್ಸು ಸೇರಿದಂತೆ ದ್ವಾದಶ ರಾಶಿಗಳ ಇಂದಿನ ರಾಶಿಫಲದ ಸಂಪೂರ್ಣ ವಿವರ ಇಲ್ಲಿದೆ.

Daily Horoscope: ಜೂನ್ 10, 2026ರ ಬುಧವಾರದ ದಿನ ಭವಿಷ್ಯ. ಇಂದು ಸೌಭಾಗ್ಯ ಮತ್ತು ಆಯುಷ್ಮಾನ್ ಯೋಗಗಳ ಮಹಾ ಸಂಯೋಜನೆ ಇರಲಿದ್ದು, ಮೇಷ, ಸಿಂಹ, ಧನುಸ್ಸು ಸೇರಿದಂತೆ ದ್ವಾದಶ ರಾಶಿಗಳ ಇಂದಿನ ರಾಶಿಫಲದ ಸಂಪೂರ್ಣ ವಿವರ ಇಲ್ಲಿದೆ.
ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ. ಗ್ರಹಗಳ ಶುಭ ಸಂಚಾರದಿಂದಾಗಿ ನಿಮ್ಮ ದೀರ್ಘಕಾಲದ ಕಷ್ಟಗಳು ಅಂತ್ಯಗೊಳ್ಳುವ ಸಮಯ ಹತ್ತಿರ ಬಂದಿದೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಭರ್ಜರಿ ಪ್ರಶಂಸೆ ಹಾಗೂ ಹೊಸ ಜವಾಬ್ದಾರಿಗಳು ಸಿಗಲಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ. ಆದರೆ, ನಿಮ್ಮ ಕೋಪ ಮತ್ತು ಆತುರದ ಮಾತುಗಳ ಮೇಲೆ ನಿಯಂತ್ರಣವಿರಲಿ, ಇಲ್ಲದಿದ್ದರೆ ಆತ್ಮೀಯರೊಂದಿಗೆ ಅನಗತ್ಯ ಮುನಿಸು ಉಂಟಾಗಬಹುದು. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲಿದ್ದೀರಿ. ಆರೋಗ್ಯ ಉತ್ತಮವಾಗಿರುತ್ತದೆ.
ವೃಷಭ ರಾಶಿ (Taurus)
ವೃಷಭ ರಾಶಿಯವರು ಇಂದು ಪ್ರತಿಯೊಂದು ಹೆಜ್ಜೆಯನ್ನೂ ಜಾಗರೂಕರಾಗಿ ಇಡಬೇಕಾದ ದಿನ. ವಿಶೇಷವಾಗಿ ರಾಜಕೀಯ ಅಥವಾ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿರುವವರು ಶತ್ರುಗಳ ಕುರಿತು ಎಚ್ಚರದಿಂದಿರಿ. ಹಣಕಾಸಿನ ಹೂಡಿಕೆಗೆ ಸಂಬಂಧಿಸಿದಂತೆ ಬೇರೆಯವರ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬೇಡಿ, ನಷ್ಟವಾಗುವ ಸಂಭವವಿದೆ. ಅತಿಯಾದ ಕೆಲಸದ ಒತ್ತಡದಿಂದಾಗಿ ದೇಹದಲ್ಲಿ ಆಯಾಸ ಮತ್ತು ದಣಿವು ಹೆಚ್ಚಾಗಬಹುದು, ಆರೋಗ್ಯದ ಕಡೆ ಗಮನಹರಿಸಿ. ಮನೆಯ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲಿದ್ದೀರಿ. ವ್ಯಾಪಾರಿಗಳಿಗೆ ಸಾಧಾರಣ ಲಾಭವಿರಲಿದೆ.
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಇಂದು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ದಿನವಾಗಿದೆ. ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂವಹನ ಏರ್ಪಡಲಿದ್ದು, ಪ್ರಮುಖ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಆದರೆ, ಆರ್ಥಿಕ ವಿಚಾರದಲ್ಲಿ ಮನಸ್ಸಿಗೆ ಸ್ವಲ್ಪ ಆತಂಕ ಎದುರಾಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗದಂತೆ ಬಜೆಟ್ ರೂಪಿಸಿಕೊಳ್ಳಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡುವಾಗ ವಿನಯತೆ ಇರಲಿ. ಕೌಟುಂಬಿಕ ವಾತಾವರಣವು ಸುಖಮಯವಾಗಿರಲಿದ್ದು, ಹಿರಿಯರ ಆಶೀರ್ವಾದ ನಿಮ್ಮ ಮೇಲಿರಲಿದೆ.
ಕರ್ಕಾಟಕ ರಾಶಿ (Cancer)
ಇಂದು ಅತ್ಯಂತ ಸಕಾರಾತ್ಮಕ ದಿನವಾಗಿರಲಿದೆ. ಗುರು ಗ್ರಹದ ಶುಭ ಪ್ರಭಾವದಿಂದಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಹಾದಿಗಳು ಗೋಚರಿಸಲಿವೆ. ಬಹುದಿನಗಳಿಂದ ಬಾಕಿ ಉಳಿದಿದ್ದ ಆಸ್ತಿ ವಿವಾದಗಳು ಇತ್ಯರ್ಥಗೊಂಡು ನೆಮ್ಮದಿ ತರಲಿವೆ. ಉದ್ಯೋಗಿಗಳಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಶುಭ ಸುದ್ದಿ ಸಿಗುವ ಯೋಗವಿದೆ. ಅವಿವಾಹಿತರಿಗೆ ಸೂಕ್ತ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದ ದೃಷ್ಟಿಯಿಂದ ಹಳೆ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕವಾಗಿ ಆದಾಯದ ಮೂಲಗಳು ಹೆಚ್ಚಾಗಲಿವೆ.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ಇಂದು ಮಿಶ್ರಫಲದ ದಿನವಾಗಿದ್ದರೂ, ಸೌಭಾಗ್ಯ ಯೋಗದ ಪ್ರಭಾವದಿಂದಾಗಿ ಅಂತಿಮವಾಗಿ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರ ಮತ್ತು ಉದ್ಯಮದಲ್ಲಿ ಲಾಭಾಂಶ ಹೆಚ್ಚಾಗಲಿದ್ದು, ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದೀರಿ. ಆದಾಗ್ಯೂ, ಕೆಲವು ಗುಪ್ತ ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಬರಬಹುದು, ತಾಳ್ಮೆಯಿಂದ ವರ್ತಿಸಿ. ವಾಹನ ಚಾಲನೆ ಮಾಡುವಾಗ ವೇಗದ ಮಿತಿ ಇರಲಿ. ಶಿವನ ಆರಾಧನೆ ಮಾಡುವುದರಿಂದ ಒಳಿತಾಗಲಿದೆ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಇಂದು ಹೆಚ್ಚಿನ ಶ್ರಮವನ್ನು ಬೇಡುವ ದಿನವಾಗಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಕಚೇರಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗುವುದು ಸ್ವಲ್ಪ ತಡವಾಗಬಹುದು, ಧೃತಿಗೆಡಬೇಡಿ. ಸಹೋದ್ಯೋಗಿಗಳ ನಡುವೆ ಸ್ಪರ್ಧಾತ್ಮಕ ವಾತಾವರಣವಿರಲಿದ್ದು, ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇದು ಸೂಕ್ತ ಸಮಯ. ಕಾರ್ಯದೊತ್ತಡದ ನಡುವಲ್ಲೂ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಿ. ಇಲ್ಲದೇ ಇದ್ರೆ ಸಂಬಂಧಗಳಲ್ಲಿ ಅಂತರ ಉಂಟಾಗಬಹುದು. ಜೀವನ ಸಂಗಾತಿಯ ಆರ್ಥಿಕ ಮತ್ತು ಮಾನಸಿಕ ಬೆಂಬಲವು ನಿಮಗೆ ಧೈರ್ಯ ತುಂಬಲಿದೆ.
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭದಾಯಕ ದಿನವಾಗಿದೆ. ನಿರಂತರ ಪ್ರಯತ್ನಗಳಿಂದಾಗಿ ನಿಮ್ಮ ಆದಾಯದಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಇದು ಸಕಾಲ. ನೂತನ ಮನೆ ಅಥವಾ ವಾಹನ ಖರೀದಿ ಮಾಡುವ ನಿಮ್ಮ ಕನಸು ನನಸಾಗುವ ಲಕ್ಷಣಗಳಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗಲಿದೆ. ಪ್ರೇಮಿಗಳ ನಡುವೆ ಪರಸ್ಪರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶ ಲಭಿಸಲಿದೆ.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರಿಗೆ ಇಂದು ಕ್ರಿಯಾತ್ಮಕ ಹಾಗೂ ಸೃಜನಶೀಲ ದಿನವಾಗಿರಲಿದೆ. ಕಲೆ, ಮಾಧ್ಯಮ ಮತ್ತು ಐಟಿ ರಂಗದಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಧನ ಲಕ್ಷ್ಮಿ ಯೋಗದ ಪ್ರಭಾವದಿಂದಾಗಿ ದಿಢೀರ್ ಧನಲಾಭ ಅಥವಾ ಹಳೆಯ ಬಾಕಿ ಹಣ ಕೈಸೇರುವ ಸಾಧ್ಯತೆ ಇದೆ. ಆದರೆ, ಆರೋಗ್ಯದ ವಿಷಯದಲ್ಲಿ ಅಲಕ್ಷ್ಯ ಬೇಡ, ವಿಶೇಷವಾಗಿ ರಕ್ತದೊತ್ತಡ ಇರುವವರು ಎಚ್ಚರದಿಂದಿರಿ. ಕುಟುಂಬ ಸದಸ್ಯರೊಂದಿಗೆ ಪ್ರವಾಸದ ಯೋಜನೆ ರೂಪಿಸಲಿದ್ದೀರಿ.
ಧನಸ್ಸು ರಾಶಿ (Sagittarius)
ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ರಾಜಯೋಗದ ಆರಂಭಕ್ಕೆ ಇಂದು ಮುನ್ನುಡಿ ಬೀಳಲಿದೆ. ನವಗ್ರಹಗಳ ಚಲನೆ ನಿಮಗೆ ಸಂಪೂರ್ಣ ಅನುಕೂಲಕರವಾಗಿದ್ದು, ಕೈಹಾಕಿದ ಎಲ್ಲಾ ಕೆಲಸಗಳಲ್ಲೂ ಅಭೂತಪೂರ್ವ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ನಿಮ್ಮ ಜೇಬು ತುಂಬಿಸಲಿದೆ. ಕಳೆದುಹೋಗಿದ್ದ ಆತ್ಮವಿಶ್ವಾಸ ಮತ್ತೆ ಮರಳಲಿದ್ದು, ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಸಂತಸ ತರಲಿದೆ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಸಿಗಲಿದೆ.
ಮಕರ ರಾಶಿ (Capricorn)
ಮಕರ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ನೀವು ಜೀವನದ ಸವಾಲುಗಳನ್ನು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಎದುರಿಸಲಿದ್ದೀರಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ, ಕೆಲಸದಲ್ಲಿ ಆಲಸ್ಯತನ ತೋರಬೇಡಿ. ಹಣಕಾಸಿನ ವ್ಯವಹಾರಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಕೌಟುಂಬಿಕ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇರಲಿದ್ದು, ತಾಯಿಯ ಕಡೆಯಿಂದ ಆರ್ಥಿಕ ಸಹಾಯ ಸಿಗುವ ಯೋಗವಿದೆ. ಸಂಜೆಯ ವೇಳೆಗೆ ಆಧ್ಯಾತ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಪ್ರಶಾಂತತೆ ಸಿಗಲಿದೆ.
ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೆ ಇಂದು ಧನಾತ್ಮಕ ಬದಲಾವಣೆಗಳ ದಿನವಾಗಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಇಂದು ಒಳ್ಳೆಯ ಕಂಪನಿಗಳಿಂದ ಇಂಟರ್ವ್ಯೂ ಕಾಲ್ ಬರಬಹುದು. ನೂತನ ಉದ್ಯಮ ಪ್ರಾರಂಭಿಸಲು ಹಣಕಾಸಿನ ನೆರವು ಸಿಗಲಿದೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದ್ದು, ಅದು ನಿಮ್ಮ ಭವಿಷ್ಯದ ಬೆಳವಣಿಗೆಗೆ ಪೂರಕವಾಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಯುವಕರು ಅನಗತ್ಯ ಸುತ್ತಾಟಗಳಿಗೆ ಬ್ರೇಕ್ ಹಾಕುವುದು ಒಳಿತು.
ಮೀನ ರಾಶಿ (Pisces)
ಮೀನ ರಾಶಿಯವರಿಗೆ ಇಂದು ಗ್ರಹಗಳ ಮಹಾ ಬದಲಾವಣೆಯಿಂದಾಗಿ ಹೊಸ ಹಾದಿ ಸುಗಮವಾಗಲಿದೆ. ಭೂಮಿ ಅಥವಾ ಆಸ್ತಿ ಮಾರಾಟದಿಂದ ಭಾರಿ ಪ್ರಮಾಣದ ಲಾಭವನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಇಂದು ಪರಿಹಾರ ಸಿಗಲಿದೆ. ವ್ಯಾಪಾರಸ್ಥರಿಗೆ ದೂರದ ಊರುಗಳಿಂದ ಹೊಸ ಆರ್ಡರ್‌ಗಳು ಸಿಗಲಿವೆ. ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವ ಬಗ್ಗೆ ಚರ್ಚೆಗಳು ನಡೆಯಲಿವೆ. ಹಿರಿಯರ ಮಾರ್ಗದರ್ಶನವು ನಿಮ್ಮ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಲಿದೆ. ದಿನದ ಅಂತ್ಯದಲ್ಲಿ ಶುಭ ವಾರ್ತೆ ಕೇಳಲಿದ್ದೀರಿ.
daily horoscope dina bhavishya 10 june 2026 rashi phala kannada

