ಗೃಹಲಕ್ಷ್ಮಿ ಯೋಜನೆಗೆ ಭಾರಿ ಸರ್ಜರಿ: ಸಿಎಂ ಡಿಕೆಶಿ ಮಹತ್ವದ ಘೋಷಣೆ, 4.30 ಲಕ್ಷ ಫಲಾನುಭವಿಗಳ ಹೆಸರು ಡಿಲೀಟ್!
ರಾಜ್ಯ ಸರಕಾರ ಮೇಜರ್ ಸರ್ಜರಿ ಮಾಡಿದೆ. ಅನರ್ಹ ಫಲಾನುಭವಿಗಳು ಹಾಗೂ ಮೃತರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ಜಮೆ ಆಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಆಪರೇಷನ್ ಗೃಹಲಕ್ಷ್ಮೀ ಕೈಗೆತ್ತಿಕೊಂಡಿದ್ದು, ಕರ್ನಾಟಕದ 4.30 ಲಕ್ಷ ಗೃಹಿಣಿಯರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದೆ.

Gruha Lakshmi Scheme : ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ ಯೋಜನೆ’ಗೆ (Gruha Lakshmi Scheme) ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದು, ರಾಜ್ಯ ಸರಕಾರ ಮೇಜರ್ ಸರ್ಜರಿ ಮಾಡಿದೆ. ಅನರ್ಹ ಫಲಾನುಭವಿಗಳು ಹಾಗೂ ಮೃತರ ಖಾತೆಗಳಿಗೆ ಗೃಹಲಕ್ಷ್ಮೀ ಹಣ ಜಮೆ ಆಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಆಪರೇಷನ್ ಗೃಹಲಕ್ಷ್ಮೀ ಕೈಗೆತ್ತಿಕೊಂಡಿದ್ದು, ಕರ್ನಾಟಕದ 4.30 ಲಕ್ಷ ಗೃಹಿಣಿಯರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದೆ.
ದೆಹಲಿ ಪ್ರವಾಸದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕಾರ್ಯ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ. ಅನರ್ಹರ ಖಾತೆಗೆ ಹಣ ಜಮೆ ಆಗ್ತಾ ಇರೋದನ್ನು ತಪ್ಪಿಸುವ ಸಲುವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
₹120 ಕೋಟಿಗೂ ಹೆಚ್ಚು ಗೃಹಲಕ್ಷ್ಮೀ (Gruha Lakshmi Scheme )ಹಣ ದುರುಪಯೋಗ ?
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮಹಿಳಾ ಕುಟುಂಬ ಮುಖ್ಯಸ್ಥರಿಗೆ ₹2,000 ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ನೀಡಲಾಗುತ್ತಿದೆ. ಆದರೆ ಇಲಾಖೆ ಹಾಗೂ ಸರಕಾರ ನಡೆಸಿದ ತಾಂತ್ರಿಕ ಪರಿಶೀಲನೆಯಲ್ಲಿ ಸುಮಾರು 100 ರಿಂದ 120 ಕೋಟಿ ರೂಪಾಯಿ ಹಣ ದುರುಪಯೋಗ ಆಗಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲಾ ಸುಮಾರು ಈಗಾಗಲೇ ಮೃತಪಟ್ಟಿರುವ ಸುಮಾರು 2.50 ಲಕ್ಷ ಮಹಿಳೆಯರ ಖಾತೆಗೆ ಹಣ ಜಮೆ ಆಗಿರವುದು ಬಯಲಾಗಿದೆ.
ಇನ್ನು ಕೆಲವು ಪ್ರಕರಣಗಳಲ್ಲಿ ಮೃತರ ಮೊಬೈಲ್ ಸಂಖ್ಯೆಯನ್ನು ಬಳಸಿ ಅಕ್ರಮವಾಗಿ ಹಣ ವಿಥ್‌ಡ್ರಾ ಮಾಡಲಾಗಿದೆ. ಈ ಕಾರಣದಿಂದಲೇ ಇಡೀ ವ್ಯವಸ್ಥೆಯನ್ನೇ ಶುದ್ದೀಕರಣ ಮಾಡುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಘೋಷಣೆ ಮಾಡಿದ್ದು, ಕಟ್ಟಿನಿಟ್ಟಿನ ಕ್ರಮಕೈಗೊಂಡಿದ್ದಾರೆ.
Also Read : ಸತತ ಇಳಿಕೆಯಲ್ಲಿ ಚಿನ್ನದ ಬೆಲೆ; ಗ್ರಾಹಕರಿಗೆ ಭರ್ಜರಿ ರಿಲೀಫ್! ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ
ಗೃಹಲಕ್ಷ್ಮೀ ಹಣಕ್ಕೆ ಬಯೋಮೆಟ್ರಿಕ್ ಜೊತೆಗೆ ಇ-ಕೆವೈಸಿ ಕಡ್ಡಾಯ!
ಗೃಹಲಕ್ಷ್ಮೀ ಯೋಜನೆಯ ಅನರ್ಹರನ್ನು ಪಟ್ಟಿಯಿಂದ ತೆಗೆಯಲು ರಾಜ್ಯ ಸರಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಹಣ ಪಡೆಯಲು ಬಯೋಮೆಟ್ರಿಕ್ (ಹೆಬ್ಬೆಟ್ಟು ಅಥವಾ ಕಣ್ಣಿನ ಸ್ಕ್ಯಾನಿಂಗ್) ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಫಲಾನುಭವಿಗಳು ಜೀವಂತವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಅಪ್ಲಿಕೇಶನ್ ಬಳಸಲಾಗುವುದು. ಪ್ರತಿ ತಾಲೂಕಿನಲ್ಲೂ ದಾಖಲೆಗಳ ಮರುಪರಿಶೀಲನೆ ನಡೆಯುತ್ತಿದ್ದು, ಅರ್ಹರಿಗೆ ಯಾವುದೇ ತೊಂದರೆಯಾಗದಂತೆ, ಕೇವಲ ನಕಲಿ ಫಲಾನುಭವಿಗಳನ್ನು ಮಾತ್ರ ಸರಣಿ ಮುಕ್ತಗೊಳಿಸಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲೇ 12 ಸಾವಿರ ಗೃಹಲಕ್ಷ್ಮೀಯರ ಹೆಸರುಗಳು ಕಟ್
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆಪರೇಷನ್ ಅಡಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ ಸಾವಿರಾರ ಮೃತ ಹಾಗೂ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಇದೀಗ ರಾಜ್ಯದಾದ್ಯಂತ ಇರುವ 4.30 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದು, ಇದರಿಂದ ರಾಜ್ಯ ಸರಕಾರ ನೂರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ.
Also Read : ಪೋಸ್ಟ್ ಆಫೀಸ್ ಯೋಜನೆ: ತಿಂಗಳು ₹3,500 ಹಾಕಿದರೆ 5 ವರ್ಷಕ್ಕೆ ಎಷ್ಟು ಸಿಗುತ್ತದೆ? ಲೆಕ್ಕ ಇಲ್ಲಿದೆ
ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಸಿಎಂ ಭರವಸೆ
ಕರ್ನಾಟಕ ಸರಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯುವುದಿಲ್ಲ (No Rollback). ಆದರೆ ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಬೇಕು ಅನ್ನೋದು ನಮ್ಮ ಉದ್ದೇಶ. ಕರ್ನಾಟಕ ಸರಕಾರಕ್ಕೆ ತೆರಿಗೆ ಪಾವತಿಸುವವರ ಹಣ ಪೋಲಾಗಬಾರದು ಅನ್ನೋದನ್ನು ನಮ್ಮ ಉದ್ದೇಶ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ದುರುಪಯೋಗ ಹಾಗೂ ವಾಣಿಜ್ಯ ಉದ್ದೇಶಕ್ಕೆ ಗೃಹಜ್ಯೋತಿ ಬಳಸುವವರ ಮೇಲೂ ನಿಗಾ ಇಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಮಾರ್ಗಸೂಚಿಗಳು ಹೊರಬೀಳಲಿವೆ.
gruha Lakshmi scheme rules change June 2026



