ಕೋಟ: ಐರೋಡಿಯ ಯುವತಿಗೆ ಸರ್ಕಾರಿ ಕೆಲಸದ ಆಮಿಷ; ಫೋನ್ ಪೇ, ಗೂಗಲ್ ಪೇ ಮೂಲಕ ₹10.83 ಲಕ್ಷ ಪೀಕಿ ವಂಚಿಸಿದ ಕಿರಾತಕ!‌

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಿವಾಸಿ ಕು. ಎಸ್. ವರ್ಷಾ (23 ವರ್ಷ) ವಂಚನೆಗೊಳಗಾದ ದುರ್ದೈವಿ. ಅಭಿಷೇಕ್ ಎಂಬಾತ ತನಗೆ ಸರಕಾರಿ ಕೆಲಸ ಕೊಡಿಸುವುದಾಗಿ ವಂಚನೆ ನಡೆಸಿದ್ದಾನೆ ಎಂದು ವರ್ಷಾ ಆರೋಪಿಸಿದ್ದು, ಕೋಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

  • ಉಡುಪಿ ಜಿಲ್ಲೆಯಲ್ಲಿ ಸರಕಾರಿ ಕೆಲಸದ ವಂಚನೆ
  • ಸರಕಾರಿ ಕೆಲಸ ಕೊಡಿಸುವ ಜಾಲ ಬಯಲು
  • ವರ್ಷಾ (23 ವರ್ಷ) ಎಂಬಾಕೆಗೆ ವಂಚನೆ
  • ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬ್ರಹ್ಮಾವರ : ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೋರ್ವಳಿಂದ 10 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿರುವ ಘಟನೆ ಉಡುಪಿ (Udupi ) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಐರೋಡಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಿವಾಸಿ ಕು. ಎಸ್. ವರ್ಷಾ (23 ವರ್ಷ) ವಂಚನೆಗೊಳಗಾದ ದುರ್ದೈವಿ. ಅಭಿಷೇಕ್ ಎಂಬಾತ ತನಗೆ ಸರಕಾರಿ ಕೆಲಸ ಕೊಡಿಸುವುದಾಗಿ ವಂಚನೆ ನಡೆಸಿದ್ದಾನೆ ಎಂದು ವರ್ಷಾ ಆರೋಪಿಸಿದ್ದು, ಕೋಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Also Read : ಕುಂದಾಪುರದಲ್ಲಿ ‘ಸೇವಾ ಸಂಕಲ್ಪ’: ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ₹93.64 ಲಕ್ಷದ ಆಸರೆ ನೀಡಿದ ಸಂಪತ್ ಶೆಟ್ಟಿ

ಸರಕಾರಿ ಕೆಲಸ ಕೊಡಿಸುವುದನ್ನು ನಂಬಿದ ವರ್ಷ ಅಭಿಷೇಕ್‌ಗೆ ಸೇರಿದ ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) 2025ರ ಅಕ್ಟೋಬರ್‌ನಿಂದ 2026ರ ಮೇ ಅಂತ್ಯದ ವರೆಗೆ ಹಂತ ಹಂತವಾಗಿ ಒಟ್ಟು 10,83,000/- ರೂ. ಹಣವನ್ನು ನೀಡಿದ್ದರು. ಆದರೆ ವರ್ಷ ಅವರಿಂದ ಹಣವನ್ನು ಪಡೆದುಕೊಂಡ ಅಭಿಷೇಕ್‌ ಸರಕಾರಿ ಕೆಲಸವನ್ನೂ ನೀಡದೇ, ಇತ್ತ ಹಣವನ್ನೂ ವಾಪಾಸ್‌ ನೀಡಿರಲಿಲ್ಲ.

ಸರಕಾರಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಕೊಟ್ಟ ಹಣವನ್ನು ವಾಪಾಸ್‌ ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ವರ್ಷಾ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Also Read : ಕಾರ್ಕಳ: ವಾಟ್ಸಾಪ್‌ನಲ್ಲಿ ಆರ್‌ಟಿಒ ಪಿಡಿಎಫ್‌ ಓಪನ್, ಬ್ಯಾಂಕ್‌ ಖಾತೆಯಿಂದ ₹5.63 ಲಕ್ಷ ಕನ್ನ

ಯುವತಿ ನೀಡಿದ ದೂರಿನ ಆಧಾರದ ಮೇಲೆ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

kota brahmavar government job scam girl cheated of 10 lakhs by abhishek

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories