ಕ್ರಿಕೆಟ್‌ ಪ್ರಿಯರಿಗೆ ವೈಭವ್‌ ಸೂರ್ಯವಂಶಿ ನಿರಾಸೆ ; ಇಂಗ್ಲೆಂಡ್‌ ವಿರುದ್ದ ಮತ್ತೆ ಸೋತ ಟೀಂ ಇಂಡಿಯಾ

Vaibhav suryavanshi debut : ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಕ್ರಿಕೆಟ್‌ ದೇವರು ಎಂದೇ ಖ್ಯಾತಿ ಪಡೆದಿದ್ದ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಉಡೀಸ್‌ ಮಾಡಿದ್ದಾರೆ.

Vaibhav suryavanshi debut : ಐರ್ಲೆಂಡ್‌ ವಿರುದ್ದ ಸರಣಿ ಸೋಲಿನ ಬೆನ್ನಲ್ಲೇ ಭಾರತ ಇದೀಗ ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿಯೂ ಸೋಲಿನ ಅಭಿಯಾನ ಮುಂದುವರಿಸಿದೆ. ಅದ್ರಲ್ಲೂ ಕೇವಲ 15 ವರ್ಷಕ್ಕೆ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿರುವ ವೈಭವ್‌ ಸೂರ್ಯವಂಶಿ ಮೊದಲ ಪಂದ್ಯದಲ್ಲಿಯೇ ಕ್ರಿಕೆಟ್‌ ಪ್ರಿಯರಿಗೆ ನಿರಾಸೆ ಮೂಡಿಸಿದ್ದಾರೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡಕ್ಕೆ ಅಭಿಷೇಕ್‌ ಶರ್ಮಾ ಹಾಗೂ ವೈಭವ್‌ ಸೂರ್ಯವಂಶಿ ಉತ್ತಮ ಆರಂಭದ ನಿರೀಕ್ಷೆ ಮೂಡಿಸಿದ್ದರು, 2 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಸೂರ್ಯವಂಶಿ, ಸ್ಟಂಪ್‌ ಔಟ್‌ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇಶಾನ್‌ ಕಿಶನ್‌ 49 ರನ್‌, ಅಭಿಷೇಕ್‌ ಶರ್ಮಾ ಅವರ 43 ರನ್‌ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 190ರನ್‌ ಗಳಿಸಿತ್ತು.

ಆದರೆ ಅರ್ಷದೀಪ್‌ ಸಿಂಗ್‌ ಆರಂಭಿಕ ಆಘಾತ ನೀಡಿದ್ರೂ ಕೂಡ, ಜಾಕಬ್‌ ಬೆಥಲ್‌, ಬ್ರೂಕ್‌ ಹಾಗೂ ಬೆಂಟನ್‌ ಅವರ ಉತ್ತಮ ಆಟದ ನೆರವಿನಿಂದ ತಂಡ ಒಂದು ಓವರ್‌ ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿದೆ. ಸಂಜು ಸ್ಯಾಮ್ಸನ್‌ ಜಾಗದಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದ ವೈಭವ್‌ ಸೂರ್ಯವಂಶಿ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಕ್ರಿಕೆಟ್‌ ದೇವರು ಎಂದೇ ಖ್ಯಾತಿ ಪಡೆದಿದ್ದ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಉಡೀಸ್‌ ಮಾಡಿದ್ದಾರೆ. ಅಲ್ಲದೇ ವಿದೇಶಿ ನೆಲದಲ್ಲಿ ಕ್ರಿಕೆಟ್‌ಗೆ ಪದಾರ್ಪಣೆಮಾಡಿ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿಯೇ ಸ್ಟಂಪ್‌ಔಟ್‌ ಆಗುವ ಮೂಲಕ ಕುಖ್ಯಾತಿಗಳಿಸಿದ್ದಾರೆ.

india vs england 2nd t20 Vaibhav suryavanshi debut match india loss

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »