Aadhaar Card Update : ಆಧಾರ್ ಕಾರ್ಡ್‌ದಾರರಿಗೆ ಭರ್ಜರಿ ಗುಡ್‌ನ್ಯೂಸ್ , ಇನ್ಮುಂದೆ ಉಚಿತವಾಗಿರಲಿದೆ ಈ ಸೌಲಭ್ಯ
ಆಧಾರ್ ಕಾರ್ಡ್ ಅಪ್ಟೇಟಸ್ಸ್ ಮಾಡೋದಕ್ಕೆ 75 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗಿತ್ತು. ಆದರೆ ಇನ್ಮುಂದೆ ಈ ಸೇವೆ ಸಂಪೂರ್ಣವಾಗಿ ಉಚಿತವಾಗಿ ಇರಲಿದೆ. ಆದರೆ ಮುಂದಿನ 6 ತಿಂಗಳವರೆಗೆ ಈ ಸೇವೆಯನ್ನು ಪಡೆಯಬಹುದಾಗಿದೆ.

Aadhaar Card Update : ದಿನನಿತ್ಯವೂ ಒಂದಿಲ್ಲೊಂದು ಕೆಲಸಕ್ಕೆ ಆಧಾರ್ ಕಾರ್ಡ್ (Aadhaar Card) ಕಡ್ಡಾಯವಾಗ್ತಿದೆ. ಆಧಾರ್ ಕಾರ್ಡ್ ಬಳಕೆದಾರರಿಗೆ ಇದೀಗ ಕೇಂದ್ರ ಸರಕಾರ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಯಾವುದೇ ಶುಲ್ಕವನ್ನೂ ಪಾವತಿಸದೇ ಆಧಾರ್ ಕಾರ್ಡ್ ಅಪ್‌ಡೇಟ್ಸ್ ಮಾಡಬಹುದಾಗಿದೆ.
ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದ ಮೇರೆಗೆ ಜುಲೈ 1 2026ರಿಂದಲೇ ಈ ಹೊಸ ರೂಲ್ಸ್ ಜಾರಿಗೆ ಬಂದಿದೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ಸ್ ಕಾರ್ಯವನ್ನು ಮುಗಿಸಬಹುದಾಗಿದೆ.
ಹಿಂದೆಲ್ಲಾ ಆಧಾರ್ ಕಾರ್ಡ್ ಅಪ್ಟೇಟಸ್ಸ್ ಮಾಡೋದಕ್ಕೆ 75 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗಿತ್ತು. ಆದರೆ ಇನ್ಮುಂದೆ ಈ ಸೇವೆ ಸಂಪೂರ್ಣವಾಗಿ ಉಚಿತವಾಗಿ ಇರಲಿದೆ. ಆದರೆ ಮುಂದಿನ 6 ತಿಂಗಳವರೆಗೆ ಈ ಸೇವೆಯನ್ನು ಪಡೆಯಬಹುದಾಗಿದೆ. 2027ರ ಜನವರಿ 1 ರಿಂದ ಈ ಸೇವೆ ಜಾರಿಯಲ್ಲಿರುತ್ತಾ ಅನ್ನೋದನ್ನು ಕೇಂದ್ರ ಸರಕಾರ ಖಚಿತ ಪಡಿಸಿಲ್ಲ.
Aadhaar Card : ಆಧಾರ್‌ಗೆ ಇಮೇಲ್ ಐಡಿ ಲಿಂಕ್ ಮಾಡಿದ್ರೆ ಲಾಭವೇನು ?
ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ಸ್ ಮಾಡುವುದು ಮಾತ್ರವಲ್ಲ, ಇನ್ಮುಂದೆ ಇಮೇಲ್ ಕೂಡ ಲಿಂಕ್ ಮಾಡವೇಕು. ನಿಮ್ಮ ಆಧಾರ್ ಕಾರ್ಡ್ ಒಂದೊಮ್ಮೆ ದುರುಪಯೋಗ ಆದ್ರೆ ಕೂಡ ನಿಮಗೆ ಈಮೇಲ್ ಅಲರ್ಟ್ ಬರೋಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಅಲ್ಲದೇ ಆಧಾರ್ ಕಾರ್ಡ್ ದುರುಪಯೋಗ ಅಥವಾ ಯಾರಾದರೂ ದೃಢೀಕರಣ (Authentication) ಮಾಡಲು ಪ್ರಯತ್ನಿಸಿದರೆ ತಕ್ಷಣವೇ ನಿಮ್ಮ ಇಮೇಲ್‌ಗೆ ನೋಟಿಫಿಕೇಶನ್ ಬರುತ್ತದೆ.
ಕೇಂದ್ರ ಸರಕಾರ ಆನ್‌ಲೈನ್ ವ್ಯವಹಾರಗಳನ್ನು ಇನ್ನಷ್ಟು ಸುರಕ್ಷಿತವಾಗಿ ಇರಿಸುವ ಸಲುವಾಗಿ ಆನ್‌ಲೈನ್ ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಸರಕಾರ ಯೋಜನೆಗಳ ಮಾಹಿತಿಯನ್ನು ಒದಗಿಸೋದಕ್ಕೆ ಈಮೇಲ್ ಸಹಕಾರಿಯಾಗಿದೆ. ಇದೇ ಕಾರಣದಿಂದಲೇ ಆಧಾರ್ ಜೊತೆಗೆ ಕೂಡಲೇ ಈಮೇಲ್ ಅನ್ನು ಕೂಡ ಲಿಂಕ್ ಮಾಡುವುದು ಉತ್ತಮ.
ಹೊಸ ಆಧಾರ್ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ ?
ಕೇಂದ್ರ ಸರಕಾರ ಈಗಾಗಲೇ ಹಳೆಯ ‘mAadhaar’ ಆ್ಯಪ್ ಬದಲಿಗೆ UIDAI ಹೊಸ ತಂತ್ರಜ್ಞಾನದ ಅಧಿಕೃತ ಆಧಾರ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಮನೆಯಲ್ಲಿಯೇ ಕುಳಿತು ಈ ಹೊಸ ಆಪ್ ಅನ್ನು ಅಧಿಕೃತ ಲಿಂಕ್‌ಗಳ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಆಂಡ್ರಾಯ್ಡ್ ಬಳಕೆಗದಾರರು (Google Play Store): Aadhaar App for Android, ಐಫೋನ್ ಬಳಕೆದಾರರಿಗೆ (Apple App Store): Aadhaar App for iOS ಮೂಲಕ ಆಪ್ ಡೌನ್‌ಲೋಡ್ ಮಾಡಬಹುದಾಗಿದೆ.
Aadhaar Card : ಇ ಮೇಲ್ ಐಡಿ ಅಪ್‌ಡೇಟ್ ಮಾಡುವ ಸರಳ ವಿಧಾನ
1. ಆ್ಯಪ್ ಲಾಗಿನ್ ಮತ್ತು ಭಾಷೆ ಆಯ್ಕೆ
ಹಂತ 1.ಮೊದಲಿಗೆ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ ಹೊಸ ಆಧಾರ್ ಆ್ಯಪ್ ಡೌನ್‌ಲೋಡ್ ಮಾಡಿ, ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ
2. ಆಧಾರ್ ಸಂಖ್ಯೆ ಮತ್ತು ಫೇಸ್ ಅಥೆಂಟಿಕೇಶನ್
ಹಂತ 2.ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ ವೆರಿಫಿಕೇಶನ್ ಮತ್ತು ಮುಖದ ಗುರುತು (Face Authentication) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಭದ್ರತೆಗಾಗಿ 4 ಅಂಕಿಗಳ ಪಿನ್ (PIN) ಸೆಟ್ ಮಾಡಿ.
3. ಇಮೇಲ್ ಅಪ್‌ಡೇಟ್ ವಿಭಾಗ
ಹಂತ 3.ಆ್ಯಪ್‌ನಲ್ಲಿರುವ ಇಮೇಲ್ ಅಪ್‌ಡೇಟ್ (Update Email ID) ಆಪ್ಷನ್ ಮೇಲೆ ಕ್ಲಿಕ್ ಮಾಡಿ, ನೀವು ಲಿಂಕ್ ಮಾಡಬಯಸುವ ಹೊಸ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಸಬ್‌ಮಿಟ್ ಮಾಡಿ
ಆಧಾರ್ ಕಾರ್ಡ್‌ನ ಹೊಸ ಆ್ಯಪ್‌ನ ಇತರ ಪ್ರಮುಖ ಪ್ರಯೋಜನವೇನು ?
ಈ ಆ್ಯಪ್ ಕೇವಲ ಇಮೇಲ್ ಅಪ್‌ಡೇಟ್‌ಗೆ ಮಾತ್ರ ಸೀಮಿತವಾಗಿಲ್ಲ. ಇನ್ನುಳಿದಂತೆ ಹಲವು ಸುಧಾರಿತ ಫೀಚರ್‌ಗಳನ್ನು ಹೊಂದಿದೆ:
ಡಿಜಿಟಲ್ ಐಡೆಂಟಿಟಿ: ಹೋಟೆಲ್ ಚೆಕ್-ಇನ್, ಆಸ್ಪತ್ರೆಗೆ ದಾಖಲಾಗುವಾಗ ಮತ್ತು ವಿಮಾನ ನಿಲ್ದಾಣ ಪ್ರವೇಶದ ಸಮಯದಲ್ಲಿ ಭೌತಿಕ ಕಾರ್ಡ್ ಬದಲಿಗೆ ಈ ಆ್ಯಪ್ ತೋರಿಸಬಹುದು.
Aadhaar Card : QR ಕೋಡ್ ಆಫ್‌ಲೈನ್ ವೆರಿಫಿಕೇಶನ್:
ಗಿಗಾ ವರ್ಕರ್ಸ್ ಮತ್ತು ವಿವಿಧ ಸೇವಾ ಸಿಬ್ಬಂದಿಗಳು ಆ್ಯಪ್‌ನ ‘ಸರ್ವಿಸಸ್ ಆಂಡ್ ಶೇರ್ ಕಾಂಟ್ಯಾಕ್ಟ್’ ವಿಭಾಗಕ್ಕೆ ಹೋಗಿ ಕ್ಯೂಆರ್ ಕೋಡ್ ಪ್ರದರ್ಶಿಸುವ ಮೂಲಕ, ಎದುರಿನವರು ತಮ್ಮ ಫೋನ್ ಕ್ಯಾಮೆರಾದಿಂದ ಸ್ಕ್ಯಾನ್ ಮಾಡಿ ತಕ್ಷಣ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸುರಕ್ಷಿತವಾಗಿ ದೃಢೀಕರಿಸಬಹುದು. ಕುಟುಂಬದ ಪ್ರೊಫೈಲ್: ಒಂದೇ ಆ್ಯಪ್‌ನಲ್ಲಿ ಗರಿಷ್ಠ 5 ಆಧಾರ್ ಪ್ರೊಫೈಲ್‌ಗಳನ್ನು ನಿರ್ವಹಿಸುವ ಅವಕಾಶವನ್ನು ಇದು ಕಲ್ಪಿಸುತ್ತದೆ.
free Aadhaar Card Update email id-update kannada news

