ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಬಲಿಯಾಯಿತೇ ಅಮಾಯಕ ಜೀವ? ಕಂಬದಲ್ಲೇ ನರಳಿ ಪ್ರಾಣಬಿಟ್ಟ ದಿನಗೂಲಿ ಕಾರ್ಮಿಕ!

ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ದಿನಗೂಲಿ ಕಾರ್ಮಿಕನೊಬ್ಬ ಕಂಬದ ಮೇಲೆಯೇ ಅತ್ಯಂತ ದಾರುಣವಾಗಿ ಪ್ರಾಣಬಿಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಹುಲಗಪ್ಪ (ಮೃತ ಕಾರ್ಮಿಕ) ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. 

ಬಳ್ಳಾರಿ: ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ದಿನಗೂಲಿ ಕಾರ್ಮಿಕನೊಬ್ಬ ಕಂಬದ ಮೇಲೆಯೇ ಅತ್ಯಂತ ದಾರುಣವಾಗಿ ಪ್ರಾಣಬಿಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಹುಲಗಪ್ಪ (ಮೃತ ಕಾರ್ಮಿಕ) ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

ದಿನಗೂಲಿ ಕಾರ್ಮಿಕನಾಗಿ ಕೆಲಸಕ್ಕೆ ಬಂದಿದ್ದ ಹುಲಗಪ್ಪ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸೂಚನೆಯಂತೆ ವಿದ್ಯುತ್ ಸರಿಪಡಿಸಲು ಕಂಬ ಏರಿದ್ದನು. ಆದರೆ, ಈ ವೇಳೆ ಹಠಾತ್ತಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಕಂಬದ ಮೇಲೆಯೇ ಆತ ಸಿಲುಕಿಕೊಂಡಿದ್ದಾನೆ. ಸುಮಾರು 15 ನಿಮಿಷಗಳ ಕಾಲ ಕಂಬದಲ್ಲೇ ನೇತಾಡುತ್ತಾ, “ಕಾಪಾಡಿ.. ಕಾಪಾಡಿ..” ಎಂದು ಹುಲಗಪ್ಪ ಜೋರಾಗಿ ಕಿರುಚಾಡುತ್ತಾ ನರಳಿ ನರಳಿ ಜೀವ ಬಿಟ್ಟಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಆತನನ್ನು ರಕ್ಷಿಸಲು ಸಾಧ್ಯವಾಗದೆ ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ.

ಈ ಎದೆನಡುಗಿಸುವ ಭೀಕರ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.ಈ ಘೋರ ಅನಾಹುತಕ್ಕೆ ಜೆಸ್ಕಾಂ (ಸ್ಥಳೀಯ ವಿದ್ಯುತ್ ಸರಬರಾಜು ಸಂಸ್ಥೆ) ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.