ಉಡುಪಿ: ಸೆಲ್ಫಿ ನೆಪದಲ್ಲಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್; ಉದ್ಯಮಿಗೆ ಭರ್ಜರಿ ₹51 ಲಕ್ಷ ಮೋಸ, ಇಬ್ಬರು ಮಹಿಳೆಯರ ವಿರುದ್ಧ ಕೇಸ್

ಉದ್ಯಮಿಯಿಂದ ಬರೋಬ್ಬರಿ 36.84 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾಳೆ. ನಂತರದಲ್ಲಿ 2ನೇ ಆರೋಪಿಯಾಗಿರುವ ಗೀತಾ ರಾವ್‌ ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದು, ಈಕೆ ಕೂಡ ಉದ್ಯಮಿಯನ್ನು ಬ್ಲಾಕ್‌ಮೇಲ್‌ ಮಾಡಿ ಸುಮಾರು 15 ಲಕ್ಷ ರೂಪಾಯಿ ನಗದು ಹಣವನ್ನು ದೋಚಿದ್ದಾಳೆ

ಉಡುಪಿ : ಕರಾವಳಿ ಭಾಗದಲ್ಲಿ ದಿನೇ ದಿನೇ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಸೆಲ್ಪಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಅದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಉದ್ಯಮಿಯೋರ್ವರನ್ನು ಬ್ಲಾಕ್‌ಮೇಲ್‌ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಅದನ್ನೇ ಅಸ್ತ್ರವಾಗಿಸಿಕೊಂಡು ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ಬ್ಲ್ಯಾಕ್‌ಮೇಲ್ ಮಾಡಿ ವಂಚಿಸಿರುವ ಆಘಾತಕಾರಿ ಘಟನೆಯೊಂದು ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿಗೆ ಬರೋಬ್ಬರಿ 51 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣ ವಂಚಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ನಗರ ಬನ್ನಂಜೆಯ ನಿವಾಸಿಯಾಗಿರುವ ತೇಜೇಶ್ವರ್‌ ರಾವ್‌ ಎಂಬವರೇ ವಂಚನೆಗೆ ಒಳಗಾದವರು., ಉಡುಪಿಯಲ್ಲಿ ಮೋದಿಕೇರ್‌ ಸ್ಟಾಕ್‌ ಪಾಇಯಿಂದ್‌ ಅಂಗಡಿಯನ್ನು ನಡೆಸುತ್ತಿದ್ದರು. ಈ ವೇಳೆಯಲ್ಲಿ ಇವರಿಗೆ ಝೀನತ್‌ ಹಾಗೂ ಗೀತಾರಾವ್‌ ಎಂಬಿಬ್ಬರು ಮಹಿಳೆಯರ ಪರಿಚಯವಾಗಿತ್ತು.

ಮೋದಿಕೇರ್‌ ಕಚೇರಿಯಲ್ಲಿ 1ನೇ ಆರೋಪಿಯಾಗಿರುವ ಝೀನತ್‌ ಉದ್ಯಮಿ ಜೊತೆಯಲ್ಲಿ ಸೆಲ್ಪಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡಿದ್ದಳು. ನಂತರ ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ ವಿಡಿಯೋವನ್ನು ಇಟ್ಟುಕೊಂಡು ತೇಜೇಶ್ವರ ರಾವ್‌ ಅವರಿಗೆ ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದಾಳೆ. ಮಾನಹಾನಿಗೆ ಹೆದರಿದ ಉದ್ಯಮಿ ಹಂತ ಹಂತವಾಗಿ ಹಣವನ್ನು ನೀಡಿದ್ದಾರೆ.

ಉದ್ಯಮಿಯಿಂದ ಬರೋಬ್ಬರಿ 36.84 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾಳೆ. ನಂತರದಲ್ಲಿ 2ನೇ ಆರೋಪಿಯಾಗಿರುವ ಗೀತಾ ರಾವ್‌ ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದು, ಈಕೆ ಕೂಡ ಉದ್ಯಮಿಯನ್ನು ಬ್ಲಾಕ್‌ಮೇಲ್‌ ಮಾಡಿ ಸುಮಾರು 15 ಲಕ್ಷ ರೂಪಾಯಿ ನಗದು ಹಣವನ್ನು ದೋಚಿದ್ದಾಳೆ. ಲಕ್ಷಾಂತರ ರೂಪಾಯಿ ಹಣ ನೀಡಿದ್ದರೂ ಕೂಡ ಇಷ್ಟಕ್ಕೆ ಸುಮ್ಮನಾಗದೇ ಚಿನ್ನಾಭರಣದ ಜೊತೆಗೆ ಭದ್ರತೆಗಾಗಿ ಕೆಲವು ಖಾಲಿ ಚೆಕ್‌ಗಳನ್ನು ಪಡೆದುಕೊಂಡು ವಂಚನೆ ಎಸಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಂಚನೆಗೆ ಒಳಗಾಗಿರುವ ಉದ್ಯಮಿ ಸದದು ಉಡುಪಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಹಣ, ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದ ಮಹಿಳೆಯರ ವಿರುದ್ದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಡುಪಿಯಲ್ಲಿ ಮೋದಿಕೇರ್ ಉದ್ಯಮಿಗೆ ಸೆಲ್ಫಿ ವಿಡಿಯೋ ತೋರಿಸಿ ₹51 ಲಕ್ಷಕ್ಕೂ ಅಧಿಕ ಹಣ ಬ್ಲ್ಯಾಕ್‌ಮೇಲ್ ಮಾಡಿ ವಂಚಿಸಿದ ಇಬ್ಬರು ಮಹಿಳೆಯರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸ್ ದಾಖಲು.

udupi modicare businessman blackmail fraud case registered

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »