ಕವಾಸಕಿ ಎಡ್ವೆಂಚರ್ ಬೈಕ್ ವೆರ್ಸಿಸ್ –X 300 ಮೇಲೆ ಭಾರಿ ಡಿಸ್ಕೌಂಟ್ : ಆಫರ್ ಮುಗಿಯೊದ್ರೊಳಗೆ ಬೈಕ್ ಬುಕ್ ಮಾಡಿ!
ಕವಾಸಕಿ ತನ್ನ ಅದ್ಭುತ ಎಡ್ವೆಂಚರ್ ಬೈಕ್ ವೆರ್ಸಿಸ್ –X 300 ಮೇಲೆ ಭಾರಿ ಡಿಸ್ಕೌಂಟ್ ನೀಡಿದೆ. ಈ ಆಫರ್ ಜುಲೈ 2026 ಪೂರ್ತಿ ತಿಂಗಳು ಇರಲಿದೆ.

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಕವಾಸಕಿ. ಭಾರತದಲ್ಲಿ ಕವಾಸಕಿ ಬೈಕ್ಗಳು ಬಹಳ ಹಿಂದಿನ ಕಾಲದಿಂದಲೂ ಜನರ ಮೆಚ್ಚುಗೆ ಗಳಿಸಿದೆ. ಅದರಲ್ಲೂ ಕವಾಸಕಿ ನಿಂಜಾ, ಅಡ್ವೆಂಚರ್ ಬೈಕ್ ಗಳೆಂದರೆ ಕಾಲೇಜು ಮಕ್ಕಳ ಫೆವರೆಟ್ ಆಗಿದೆ. ಇದೀಗ ಕವಾಸಕಿ ತನ್ನ ಅತ್ಯದ್ಭುತ ಎಡ್ವೆಂಚರ್ ಬೈಕ್ ವೆರ್ಸಿಸ್ X–300 ಮೇಲೆ ಭಾರಿ ಡಿಸ್ಕಾಂಟ್ ಅನ್ನು ಘೋಷಿಸಿದೆ. ಈ ಕೊಡುಗೆ MY25 ಮತ್ತು MY26 ಎರಡೂ ಮಾದರಿಗಳಲ್ಲಿ ಲಭ್ಯವಿದೆ. ಇದರ ಜೊತೆಗೆ ನಗದು ರಿಯಾಯಿತಿಗಳು ಮತ್ತು ಉಚಿತ ಪರಿಕರಗಳು ಲಭ್ಯವಿದೆ. ಈ ರಿಯಾಯಿತಿಯನ್ನು ಜುಲೈ ಅಂತ್ಯದವರೆಗೆ ನೀಡಿದೆ.
ಆಫರ್ ಎಷ್ಟು?
ಕವಾಸಕಿ MY25 ವೆರ್ಸಿಸ್ X–300 ಮಾದರಿಗೆ ಹೆಚ್ಚಿನ ಡಿಸ್ಕಾಂಟ್ ನೀಡಿದೆ. ಅದಕ್ಕೆ 35,000 ರೂ. ನಗದು ರಿಯಾಯಿತಿ ನೀಡಿದೆ. ಈ ಮೂಲಕ ಬೈಕ್ನ ಬೆಲೆ 3.49 ಲಕ್ಷ ರೂ. ಆಗಿದೆ. (ಎಕ್ಸ್-ಶೋರೂಂ). MY26 ಮಾದರಿಯು 10,000 ರೂ. ಕಡಿಮೆ ನಗದು ರಿಯಾಯಿತಿಯನ್ನು ನೀಡುತ್ತದೆ. ಇದರಿಂದಾಗಿ ಅದರ ಬೆಲೆ 3.39 ಲಕ್ಷ ರೂ. ಆಗಿದೆ. (ಎಕ್ಸ್-ಶೋರೂಂ). ಈ ಎರಡೂ ಮಾದರಿಯ ಬೈಕ್ಗೆ ಪನ್ನಿಯರ್ ಸೀಟ್ ಅಥವಾ ಸೆಂಟರ್ ಸ್ಟ್ಯಾಂಡ್ ಆಯ್ಕೆ ನೀಡಿದೆ. ಕಂಪನಿಯ ಪ್ರಕಾರ ಇವುಗಳ ಬೆಲೆ 46,000 ರೂ.ಗಳು.
ವೈಶಿಷ್ಟ್ಯಗಳೇನು?
ವೆರ್ಸಿಸ್-ಎಕ್ಸ್ 300 ಬೈಕ್ 296 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿದೆ. ಇದು 40 ಎಚ್ಪಿ ಮತ್ತು 26 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ವೈಶಿಷ್ಟ್ಯದಿಂದಲೇ ಕವಾಸಕಿಯ ಅತ್ಯುತ್ತಮ ಅಡ್ವೆಂಚರ್ ಮೋಟಾರ್ಸೈಕಲ್ ಆಗಿದೆ.
ಇದರಲ್ಲಿ 19-ಇಂಚಿನ ಮುಂಭಾಗದ ಚಕ್ರ ಮತ್ತು 17-ಇಂಚಿನ ಹಿಂಭಾಗದ ಚಕ್ರವನ್ನು ಹೊಂದಿದೆ. ಇದು ಸ್ಪೋಕ್ ರಿಮ್ಗಳು ಮತ್ತು ಟ್ಯೂಬ್ ಟೈರ್ಗಳನ್ನು ಒಳಗೊಂಡಿದೆ. ಟೆಲಿಸ್ಕೋಪಿಕ್ ಮುಂಭಾಗದ ಫೋರ್ಕ್ಗಳನ್ನು ಮತ್ತು ಹಿಂಭಾಗದಲ್ಲಿ ಯುನಿ-ಟ್ರ್ಯಾಕ್ ಮಾನೋಶಾಕ್ ಸಸ್ಪೆನ್ಷನ್ ಅನ್ನು ಹೊಂದಿದೆ. ಇದರಿಂದ ದೀರ್ಘ ಪ್ರಯಾಣದಲ್ಲೂ ಆರಾಮದಾಯಕ ಅನುಭವ ನೀಡುತ್ತದೆ. ಈ ಸಸ್ಪೆನ್ಷನ್ ಬೈಕು ಸುಸಜ್ಜಿತ ಹೆದ್ದಾರಿಗಳು ಮತ್ತು ಒರಟು ಭೂಪ್ರದೇಶ ಎರಡಲ್ಲೂ ಸುಲಭವಾಗಿ ಓಡಬಲ್ಲದು.
ಇದನ್ನೂ ಓದಿ: ಟಾಟಾಗೆ ಠಕ್ಕರ್ ಕೊಟ್ಟ ಮಾರುತಿ ಇವಿ : ಒಂದೇ ಚಾರ್ಜ್ಗೆ 270 KM ಮೈಲೇಜ್, ಅಗ್ಗದ ಕಾರು ಮಾರುಕಟ್ಟೆಗೆ
ಇದು ಡ್ಯುಯಲ್-ಚಾನೆಲ್ ಎಬಿಎಸ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲಾಂಗ್-ಟ್ರಾವೆಲ್ ಸಸ್ಪೆನ್ಷನ್ ಮತ್ತು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡಿದೆ. ವರ್ಸಿಸ್-ಎಕ್ಸ್ 300 ರ ವೈಶಿಷ್ಟ್ಯಗಳು ತುಂಬಾ ಸರಳವಾಗಿದ್ದರೂ ಕೂಡಾ ಅಡ್ವೆಂಚರ್ ವಿಭಾಗದಲ್ಲಿನ ಅನೇಕ ಮೋಟಾರ್ಸೈಕಲ್ಗಳಿಗಿಂತ ಭಿನ್ನವಾಗಿದೆ. ಇದು ರೈಡ್ ಮೋಡ್ಗಳು, ಟ್ರಾಕ್ಷನ್ ಕಂಟ್ರೋಲ್ ಅಥವಾ ಬ್ಲೂಟೂತ್ ಸಂಪರ್ಕದಂತಹ ಎಲೆಕ್ಟ್ರಾನಿಕ್ ರೈಡರ್ ಏಡ್ಗಳನ್ನು ಹೊಂದಿಲ್ಲವಾದರೂ ಸಾಹಸ ಮನೋಭಾವದವರ ಅಚ್ಚುಮೆಚ್ಚಿನ ಬೈಕ್ ಆಗಿದೆ.

