ದಿನ ಭವಿಷ್ಯ 23 ಜುಲೈ 2026: ಈ 5 ರಾಶಿಗಳಿಗೆ ಒಲಿಯಲಿದ್ದಾಳೆ ಲಕ್ಷ್ಮಿ, ನಿಮ್ಮ ರಾಶಿಗೂ ಇದೆಯಾ ಅದೃಷ್ಟ

oday's Horoscope in Kannada : ನಕ್ಷತ್ರಗಳ ಚಲನೆ, ಗ್ರಹಗಳ ಸ್ಥಾನ ಪಲ್ಲಟದ ಆಧಾರದ ಮೇಲೆ ಇಂದಿನ ನಿಮ್ಮ ದಿನ ಭವಿಷ್ಯ ಹೇಗಿರಲಿದೆ. ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ ಮತ್ತು ಕೌಟುಂಬಿಕ ಜೀವನದ ನಿಖರವಾದ ಜ್ಯೋತಿಷ್ಯ ಫಲ ಇಲ್ಲಿದೆ

ದಿನ ಭವಿಷ್ಯ 23 ಜುಲೈ 2026 (Today’s Horoscope in Kannada) : ನಕ್ಷತ್ರಗಳ ಚಲನೆ, ಗ್ರಹಗಳ ಸ್ಥಾನ ಪಲ್ಲಟದ ಆಧಾರದ ಮೇಲೆ ಇಂದಿನ ನಿಮ್ಮ ದಿನ ಭವಿಷ್ಯ ಹೇಗಿರಲಿದೆ. ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ ಮತ್ತು ಕೌಟುಂಬಿಕ ಜೀವನದ ನಿಖರವಾದ ಜ್ಯೋತಿಷ್ಯ ಫಲ ಇಲ್ಲಿದೆ

ಮೇಷ ರಾಶಿ ಇಂದಿನ ಭವಿಷ್ಯ (Aries Horoscope Today)

ವೃತ್ತಿ ಕ್ಷೇತ್ರದಲ್ಲಿ ಅತ್ಯುತ್ತಮ ಅವಕಾಶ. ನಿಮ್ಮ ಹಳೆಯ ಸಾಲಗಳು ತೀರುವ ಲಕ್ಷಣ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ. ಆರ್ಥಿಕವಾಗಿ ಹೂಡಿಕೆ ಮಾಡಲು ಇದು ಸಕಾಲ. ಕೌಟುಂಬಿಕ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದ್ದು, ಸಂಗಾತಿಯ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆರೋಗ್ಯದ ಕಡೆಗೆ ಕೊಂಚ ಗಮನಹರಿಸುವುದು ಒಳಿತು, ವಿಶೇಷವಾಗಿ ಅತಿಯಾದ ಮಾನಸಿಕ ಒತ್ತಡವನ್ನು ತಗ್ಗಿಸಲು ಧ್ಯಾನ ಅಥವಾ ಯೋಗ ಮಾಡುವುದು ಉತ್ತಮ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ.

  • ಅದೃಷ್ಟ ಸಂಖ್ಯೆ: 9
  • ಅದೃಷ್ಟ ಬಣ್ಣ: ಕೆಂಪು

ವೃಷಭ ರಾಶಿ ಇಂದಿನ ಭವಿಷ್ಯ (Taurus Horoscope Today)

ಆರ್ಥಿಕ ವಿಚಾರದಲ್ಲಿ ಕೊಂಚ ಜಾಗರೂಕರಾಗಿರಿ, ಅನಗತ್ಯ ಖರ್ಚುಗಳು ನಿಮ್ಮ ಮಾಸಿಕ ಬಜೆಟ್ ಅನ್ನು ಏರುಪೇರು ಮಾಡಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಮೂಡಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವ ಯೋಗವಿದೆ. ಪ್ರೇಮಿಗಳಿಗೆ ಇಂದಿನ ದಿನ ಅತ್ಯಂತ ರೋಮ್ಯಾಂಟಿಕ್ ಆಗಿರಲಿದ್ದು, ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ಮೀಸಲಿಡುವಿರಿ. ನಿಮ್ಮ ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯಿಂದ ಉದ್ಯೋಗದಲ್ಲಿನ ಸವಾಲುಗಳನ್ನು ಬಹಳ ಸುಲಭವಾಗಿ ನಿಭಾಯಿಸುವಿರಿ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಇಂದು ಸ್ವಲ್ಪ ರಿಲೀಫ್ ಸಿಗಲಿದೆ.

  • ಅದೃಷ್ಟ ಸಂಖ್ಯೆ: 6
  • ಅದೃಷ್ಟ ಬಣ್ಣ: ಬಿಳಿ

ಮಿಥುನ ರಾಶಿ ಇಂದಿನ ಭವಿಷ್ಯ (Gemini Horoscope Today)

ಹೊಸ ಯೋಜನೆಗಳನ್ನು ಆರಂಭಕ್ಕೆ ಅತ್ಯಂತ ಶುಭ ದಿನ. ಹಳೆಯ ಸ್ನೇಹಿತರನ್ನು ಭೇಟಿಯಾಗುವುದರಿಂದ ಮನಸ್ಸಿಗೆ ಅತೀವ ಸಂತೋಷ ಸಿಗಲಿದೆ. ಹಣಕಾಸಿನ ಹರಿವು ಸ್ಥಿರವಾಗಿರಲಿದ್ದು, ಬ್ಯಾಂಕಿಂಗ್ ಅಥವಾ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯಿಂದ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿದರೂ, ಸಂಜೆಯ ಹೊತ್ತಿಗೆ ಎಲ್ಲವೂ ಸರಿಯಾಗಲಿದೆ. ಐಟಿ, ಮಾಧ್ಯಮ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ವಿದೇಶದಿಂದ ಅಥವಾ ದೂರದ ಊರುಗಳಿಂದ ಹೊಸ ಪ್ರಾಜೆಕ್ಟ್ ಸಿಗುವ ಸಾಧ್ಯತೆಯಿದೆ.

  • ಅದೃಷ್ಟ ಸಂಖ್ಯೆ: 5
  • ಅದೃಷ್ಟ ಬಣ್ಣ: ಹಸಿರು

ಕರ್ಕಾಟಕ ರಾಶಿ ಇಂದಿನ ಭವಿಷ್ಯ (Cancer Horoscope Today)

ಮಾನಸಿಕ ಗೊಂದಲಗಳಿದ್ದರೂ ಮಧ್ಯಾಹ್ನದ ನಂತರ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ, ಮುಂಬರುವ ಪ್ರಮೋಷನ್ ವಿಚಾರದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿ ಶುಭ ಕಾರ್ಯಗಳ ಬಗ್ಗೆ ಹಿರಿಯರೊಂದಿಗೆ ಚರ್ಚೆ ನಡೆಯಲಿದೆ. ಆಸ್ತಿ ಖರೀದಿ ಅಥವಾ ಮಾರಾಟದ ವಿಚಾರದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸೂಕ್ತ ಸಮಯವಲ್ಲ, ಸ್ವಲ್ಪ ಕಾಯುವುದು ಒಳಿತು. ಆರೋಗ್ಯದ ದೃಷ್ಟಿಯಿಂದ ಉದರ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿದೆ.

  • ಅದೃಷ್ಟ ಸಂಖ್ಯೆ: 2
  • ಅದೃಷ್ಟ ಬಣ್ಣ: ಬೆಳ್ಳಿ (Silver)

ಸಿಂಹ ರಾಶಿ ಇಂದಿನ ಭವಿಷ್ಯ (Leo Horoscope Today)

ನಿಮ್ಮ ಪಾಲಿಗೆ ಇಂದು ಸಂಪೂರ್ಣವಾಗಿ ಅದೃಷ್ಟದ ಬಾಗಿಲು ತೆರೆಯಲಿದೆ. ನಿಮ್ಮ ಅದ್ಭುತ ನಾಯಕತ್ವ ಗುಣಗಳಿಂದಾಗಿ ಸಮಾಜದಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಯುವಕರಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ಉದ್ಯಮ ಅಥವಾ ವ್ಯಾಪಾರದಲ್ಲಿ ನೀವು ಈವರೆಗೆ ಹಾಕಿರುವ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಬಂಪರ್ ಲಾಭ ತರುವ ಸಾಧ್ಯತೆಯಿದೆ. ಕುಟುಂಬ ಸದಸ್ಯರೊಂದಿಗೆ ಸಂಜೆಯ ವೇಳೆ ಕಿರು ಪ್ರವಾಸದ ಯೋಗವಿದೆ. ಆರೋಗ್ಯವು ಉತ್ತಮವಾಗಿರಲಿದ್ದು, ನಿಮ್ಮ ಉತ್ಸಾಹ ಮತ್ತು ಚೈತನ್ಯ ಇಡೀ ದಿನ ನಿಮ್ಮನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ.

  • ಅದೃಷ್ಟ ಸಂಖ್ಯೆ: 1
  • ಅದೃಷ್ಟ ಬಣ್ಣ: ಹಳದಿ ಅಥವಾ ಬಂಗಾರ

ಕನ್ಯಾ ರಾಶಿ ಇಂದಿನ ಭವಿಷ್ಯ (Virgo Horoscope Today)

ದಿನಚರಿಯಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಅನಿವಾರ್ಯ. ಆರ್ಥಿಕವಾಗಿ ಏರಿಳಿತ ಕಂಡು ಬರಲಿದೆ.ದೊಡ್ಡ ಮೊತ್ತದ ಸಾಲ ನೀಡುವ ಮುನ್ನ ಎರಡೆರಡು ಬಾರಿ ಯೋಚಿಸಿ. ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದ್ದು, ಪೋಷಕರಿಂದ ನಿಮ್ಮ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ಸಿಗಲಿದೆ. ತ್ವಚೆ ಮತ್ತು ಕಣ್ಣಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡಬಹುದು, ಹೀಗಾಗಿ ಸ್ಕ್ರೀನ್ ಟೈಮ್ ಕಡಿಮೆ ಮಾಡಿ. ಉದ್ಯೋಗದ ಸ್ಥಳದಲ್ಲಿ ಅತಿಯಾದ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಬಹುದು, ಆದರೆ ನಿಮ್ಮ ಕೌಶಲ್ಯದಿಂದ ಅದನ್ನು ಯಶಸ್ವಿಯಾಗಿ ಹಾಗೂ ಸಮಯಕ್ಕೆ ಸರಿಯಾಗಿ ನಿರ್ವಹಿಸುವಿರಿ. ಪ್ರೀತಿಪಾತ್ರರಿಗೆ ಸಣ್ಣ ಉಡುಗೊರೆ ನೀಡುವ ಮೂಲಕ ನಿಮ್ಮ ಬಾಂಧವ್ಯ ವೃದ್ಧಿಸಿಕೊಳ್ಳಿ.

  • ಅದೃಷ್ಟ ಸಂಖ್ಯೆ: 5
  • ಅದೃಷ್ಟ ಬಣ್ಣ: ತಿಳಿ ನೀಲಿ

ತುಲಾ ರಾಶಿ ಇಂದಿನ ಭವಿಷ್ಯ (Libra Horoscope Today)

ಬಹುಕಾಲದಿಂದ ಬಾಕಿ ಉಳಿದಿರುವ ಕಾನೂನು ವ್ಯಾಜ್ಯಗಳು ಪರಿಹಾರ ಕಾಣಲಿದೆ. ಕಲೆ, ಸಾಹಿತ್ಯ ಮತ್ತು ಫ್ಯಾಷನ್‌ ಕ್ಷೇತ್ರದವರಿಗೆ ಹೊಸ ಅವಕಾಶ. ಸಾರ್ವಜನಿಕವಾಗಿ ಮನ್ನಣೆ ಸಿಗಲಿದೆ. ಸಂಗಾತಿಯೊಂದಿಗೆ ಈ ಹಿಂದೆ ಇದ್ದ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿ, ದಾಂಪತ್ಯ ಜೀವನದಲ್ಲಿ ಮಧುರತೆ ಮರಳಲಿದೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ದಿಟ್ಟ ತೀರ್ಮಾನಗಳು ಲಾಭದಾಯಕವಾಗಲಿವೆ, ವಿಶೇಷವಾಗಿ ರಿಯಲ್ ಎಸ್ಟೇಟ್ ಹೂಡಿಕೆಗಳು ಉತ್ತಮ ದೀರ್ಘಕಾಲೀನ ಫಲಿತಾಂಶ ನೀಡಲಿವೆ.ವಾಹನ ಚಲಾಯಿಸುವಾಗ ಅಥವಾ ಪ್ರಯಾಣಿಸುವಾಗ ಎಚ್ಚರಿಕೆ ಅಗತ್ಯ. ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನದಲ್ಲಿರಲು ಯೋಗ ಅಥವಾ ವ್ಯಾಯಾಮಕ್ಕೆ ಇಂದಿನಿಂದಲೇ ಆದ್ಯತೆ ನೀಡಿ.

  • ಅದೃಷ್ಟ ಸಂಖ್ಯೆ: 6
  • ಅದೃಷ್ಟ ಬಣ್ಣ: ಗುಲಾಬಿ

ವೃಶ್ಚಿಕ ರಾಶಿ ಇಂದಿನ ಭವಿಷ್ಯ (Scorpio Horoscope Today)

ಭವಿಷ್ಯದ ಯೋಜನೆಗಳನ್ನು ರೂಪಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ಒಳಸಂಚು ಮಾಡಬಹುದು, ಆದುದರಿಂದ ನಿಮ್ಮ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ. ಕುಟುಂಬಸ್ಥರ ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಜನೆ ರೂಪಿಸುವಿರಿ. ವ್ಯಾಪಾರ ಮತ್ತು ಆಮದು-ರಫ್ತು ವಹಿವಾಟಿನಲ್ಲಿ ನಿರೀಕ್ಷೆಗೂ ಮೀರಿದ ಲಾಭ ನಿಮ್ಮದಾಗಲಿದೆ. ಆದರೆ, ನಿಮ್ಮ ಭವಿಷ್ಯದ ರಹಸ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ರಕ್ತದೊತ್ತಡ ಅಥವಾ ಮಧುಮೇಹ ಇರುವವರು ತಮ್ಮ ಆರೋಗ್ಯದ ಬಗ್ಗೆ, ಜೊತೆಗೆ ಊಟದ ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

  • ಅದೃಷ್ಟ ಸಂಖ್ಯೆ: 9
  • ಅದೃಷ್ಟ ಬಣ್ಣ: ಕಡು ಕೆಂಪು

ಧನಸ್ಸು ರಾಶಿ ಇಂದಿನ ಭವಿಷ್ಯ (Sagittarius Horoscope Today)

ನಿತ್ಯದ ಕೆಲಸ ಕಾರ್ಯಗಳು ವೇಗವಾಗಿ ಸಾಗಲಿದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಒಲವು ಹೆಚ್ಚಾಗಲಿದ್ದು, ಇದರಿಂದ ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆ ದೊರೆಯುತ್ತದೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಇಂದು ಶುಭ ಸುದ್ದಿ ಸಿಗುವ ಯೋಗವಿದೆ. ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಲಿದ್ದು, ಹಳೆಯ ಸಾಲಗಳನ್ನು ಯಶಸ್ವಿಯಾಗಿ ಮರುಪಾವತಿ ಮಾಡುವಿರಿ. ಕುಟುಂಬದಲ್ಲಿ ಮಗುವಿನ ಆಗಮನದ ಅಥವಾ ವಿವಾಹದಂತಹ ಶುಭ ಸುದ್ದಿಗಳು ಕೇಳಿಬರಲಿವೆ. ನಿಮ್ಮ ಪ್ರವಾಸ ಯೋಜನೆಗಳು ಯಶಸ್ವಿಯಾಗಲಿದ್ದು, ಹೊಸ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಭವಿಷ್ಯದಲ್ಲಿ ಲಾಭವಾಗಲಿದೆ.

  • ಅದೃಷ್ಟ ಸಂಖ್ಯೆ: 3
  • ಅದೃಷ್ಟ ಬಣ್ಣ: ಕೇಸರಿ ಅಥವಾ ಹಳದಿ

ಮಕರ ರಾಶಿ ಇಂದಿನ ಭವಿಷ್ಯ (Capricorn Horoscope Today)

ವೃತ್ತಿಪರ ಜೀವನದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲುಗಳನ್ನು ತಂದುಕೊಡಲಿದೆ. ಕಚೇರಿಯಲ್ಲಿ ದೊಡ್ಡ ಜವಾಬ್ದಾರಿಗಳು, ನಾಯಕತ್ವದ ಸ್ಥಾನ ಅಥವಾ ಬಡ್ತಿ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಹೊಸ ಮಾರುಕಟ್ಟೆಗೆ ವಿಸ್ತರಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬಹುದು. ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಡಬೇಕು, ಆತುರದ ನಿರ್ಧಾರಗಳು ಭವಿಷ್ಯದಲ್ಲಿ ನಷ್ಟಕ್ಕೆ ಕಾರಣವಾಗಬಹುದು. ತಂದೆ-ತಾಯಿಯ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ. ವೈವಾಹಿಕ ಜೀವನದಲ್ಲಿ ಸಾಮರಸ್ಯದಿಂದ ಇರಲಿದೆ. ಸಂಗಾತಿಯು ನಿಮ್ಮ ಗುರಿಗಳನ್ನು ತಲುಪಲು ಬೆಂಬಲವಾಗಿ ನಿಲ್ಲುತ್ತಾರೆ. ಕೀಲು ಅಥವಾ ಬೆನ್ನು ನೋವಿನಂ ಸಮಸ್ಯೆಗಳು ಕಾಡಲಿದೆ.

  • ಅದೃಷ್ಟ ಸಂಖ್ಯೆ: 8
  • ಅದೃಷ್ಟ ಬಣ್ಣ: ಕಪ್ಪು ಅಥವಾ ಕಡು ನೀಲಿ

ಕುಂಭ ರಾಶಿ ಇಂದಿನ ಭವಿಷ್ಯ (Aquarius Horoscope Today)

ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಲಾಭದಾಯಕ ದಿನ. ಹಣಕಾಸಿನ ಹರಿವು ಯಾವುದೇ ಅಡೆತಡೆಯಿಲ್ಲದೆ ಸಾಗಲಿದ್ದು, ಆರ್ಥಿಕ ಭದ್ರತೆ ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಥವಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅವಕಾಶಗಳು ಕೂಡಿಬರಲಿವೆ. ಹೊಸ ಉದ್ಯಮ ಆರಂಭಿಸಲು, ಸ್ಟಾರ್ಟ್ ಅಪ್ ಸ್ಥಾಪಿಸಲು ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಇದು ಉತ್ತಮ ಸಮಯ. ಸಮಾಜದಲ್ಲಿ ನಿಮ್ಮ ಸೇವಾ ಮನೋಭಾವಕ್ಕೆ ತಕ್ಕ ಗೌರವ ಹಾಗೂ ಪುರಸ್ಕಾರ ಸಿಗಲಿದೆ. ಪ್ರೇಮ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.

  • ಅದೃಷ್ಟ ಸಂಖ್ಯೆ: 8
  • ಅದೃಷ್ಟ ಬಣ್ಣ: ನೇರಳೆ (Purple)

ಮೀನ ರಾಶಿ ಇಂದಿನ ಭವಿಷ್ಯ (Pisces Horoscope Today)

ನಿಮ್ಮ ರಾಶಿಯವರಿಗೆ ಇಂದು ಸಕಾರಾತ್ಮಕ ಬದಲಾವಣೆ ಸಿಗಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕೊಂಡು ಬರಲಿದೆ. ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುವ ಉತ್ತಮ ದಿನ. ಆರ್ಥಿಕ ದೃಷ್ಟಿಯಿಂದಲೂ ಇಂದಿನ ದಿನ ಸಾಮಾನ್ಯವಾಗಿದ್ದರೂ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕೌಟುಂಬಿಕ ಜೀವನದಲ್ಲಿ ಅತಿಥಿಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ವಾಹನ ಹಾಗೂ ಬೆಲೆಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ.

  • ಅದೃಷ್ಟ ಸಂಖ್ಯೆ: 3
  • ಅದೃಷ್ಟ ಬಣ್ಣ: ಸುವರ್ಣ ಬಣ್ಣ (Gold)

dina bhavishya today horoscope in kannada 23 July 2026

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021