ಬುಧವಾರ, ಏಪ್ರಿಲ್ 30, 2025
HomeSportsCricketRohit Sharma : ರೋಹಿತ್ ನಾಯಕತ್ವದಲ್ಲಿ ದಶ ದಿಗ್ವಿಜಯ.. ಕಂಪ್ಲೀಟ್ ಆಗುತ್ತಾ ಮಿಷನ್ ವರ್ಲ್ಡ್ ಕಪ್...

Rohit Sharma : ರೋಹಿತ್ ನಾಯಕತ್ವದಲ್ಲಿ ದಶ ದಿಗ್ವಿಜಯ.. ಕಂಪ್ಲೀಟ್ ಆಗುತ್ತಾ ಮಿಷನ್ ವರ್ಲ್ಡ್ ಕಪ್ ?

- Advertisement -

ಬೆಂಗಳೂರು: ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma Mission ) ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಟಿ20 ನಾಯಕ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1ರಿಂದ ಗೆಲ್ಲುವ ಮೂಲಕ ರೋಹಿತ್ ನಾಯಕತ್ವದಲ್ಲಿ ಭಾರತ ಸತತ 10ನೇ ಸರಣಿ ಗೆದ್ದುಕೊಂಡಿದೆ. ಇಂದೋರ್’ನಲ್ಲಿ ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯವನ್ನು ಭಾರತ 49 ರನ್’ಗಳಿಂದ ಸೋತರೂ 2-1ರ ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಇದು ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ದಕ್ಕಿದ ಮೊದಲ ಟಿ20 ಸರಣಿ ಗೆಲುವು.

ಇದರೊಂದಿಗೆ ರೋಹಿತ್ ಶರ್ಮಾ (Rohit Sharma)ಟೀಮ್ ಇಂಡಿಯಾದ ಪೂರ್ಣಕಾಲಿಕ ನಾಯಕನಾದ ನಂತರ ಟಿ20, ಏಕದಿನ ಹಾಗೂ ಟೆಸ್ಟ್ ಸೇರಿದಂತೆ 10ನೇ ಸರಣಿ ಗೆಲುವು ತಮ್ಮದಾಗಿಸಿ ಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ, ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಲ್ಲಿ ಏಕದಿನ ಸರಣಿ, ವಿಂಡೀಸ್ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ, ಶ್ರೀಲಂಕಾ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ, ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ, ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಟಿ20 ಸರಣಿ, ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ, ವೆಸ್ಟ್ ಇಂಡೀಸ್ ವಿರುದ್ಧ 4-1 ಅಂತರದಲ್ಲಿ ಟಿ20 ಸರಣಿ, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಟಿ20 ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 2-1ರ ಅಂತರದಲ್ಲಿ ಟಿ20 ಸರಣಿ ಸರಣಿಗಳನ್ನು ಭಾರತ ರೋಹಿತ್ ನಾಯಕತ್ವದಲ್ಲಿ ಗೆದ್ದಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ (Rohit Sharma Mission) ಟಿ20 ಸರಣಿ (ದ್ವಿಪಕ್ಷೀಯ) ಗೆಲುವುಗಳು:

  • 3-0 Vs ನ್ಯೂಜಿಲೆಂಡ್ (ಟಿ20 ಸರಣಿ)
  • 3-0 Vs ವೆಸ್ಟ್ ಇಂಡೀಸ್ (ಏಕದಿನ ಸರಣಿ)
  • 3-0 Vs ವೆಸ್ಟ್ ಇಂಡೀಸ್ (ಟಿ20 ಸರಣಿ)
  • 3-0 Vs ಶ್ರೀಲಂಕಾ (ಟಿ20 ಸರಣಿ)
  • 2-0 Vs ಶ್ರೀಲಂಕಾ (ಟೆಸ್ಟ್ ಸರಣಿ)
  • 2-1 Vs ಇಂಗ್ಲೆಂಡ್ (ಟಿ20 ಸರಣಿ)
  • 2-1 Vs ಇಂಗ್ಲೆಂಡ್ (ಏಕದಿನ ಸರಣಿ)
  • 4-1 Vs ವೆಸ್ಟ್ ಇಂಡೀಸ್ (ಟಿ20 ಸರಣಿ)
  • 2-1 Vs ಆಸ್ಟ್ರೇಲಿಯಾ (ಟಿ20 ಸರಣಿ)
  • 2-1 Vs ದಕ್ಷಿಣ ಆಫ್ರಿಕಾ (ಟಿ20 ಸರಣಿ)

ಇದನ್ನೂ ಓದಿ : AB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ ಎಬಿ ಡಿವಿಲಿಯರ್ಸ್

ಇದನ್ನೂ ಓದಿ : Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್

ಇದನ್ನೂ ಓದಿ : Sarfaraz Khan : ಭಾರತ ತಂಡದಲ್ಲಿ ಸ್ಥಾನ ಪಡೆಯಲು ಈ ಆಟಗಾರ ಇನ್ನೆಷ್ಟು ಶತಕ ಹೊಡೆಯಬೇಕು ?

ಇದೀಗ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿದ್ದು, ಗುರುವಾರ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ಮತ್ತೆ ಚುಟುಕು ವಿಶ್ವಕಪ್ ಗೆದ್ದಿಲ್ಲ. ಇನ್ನು 2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ಮತ್ತೆ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಭಾರತ Vs ಪಾಕ್ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

Dasha Digvijay under the leadership of Rohit Sharma Mission World Cup becoming complete?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular