PM-KUSUM Yojana Scheme: PM-KUSUM ಯೋಜನೆಯ ಬಗ್ಗೆ ತಿಳಿದಿದೆಯಾ!

ಇದೀಗ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ PM-KUSUM ಯೋಜನೆಯಡಿಯಲ್ಲಿ ಸೌರ ಚಾಲಿತ ಕೃಷಿ ಪಂಪಸೆಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದ್ದು, ಕ್ರೆಡೆಲ್ ಮೂಲಕ ಜಾರಿಗೊಳಿಸಲಿದೆ. ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 4424 ಸಂಖ್ಯೆ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್‌ಸೆಟ್‌ಗಳನ್ನು ಆಳವಡಿಸುವ ಯೋಜನೆಯನ್ನು ಕೆ.ಆರ್‌.ಇ.ಡಿ.ಎಲ್ ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ . ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣ www.kredl.karnataka Eov.in ನಲ್ಲಿ ತಪ್ಪದೇ ಗಮನಿಸಿ ಅರ್ಜಿ ಸಲ್ಲಿಸುವುದು.

ಈ ಯೋಜನೆಯಿಂದ ರೈತರು ಲಾಭ ಪಡೆಯ ಬೇಕಾದರೆ ಕೆಲವು ವಿಷಯಗಳನ್ನು ಅರಿಯುವ ಅವಶ್ಯಕತೆ ಇದೆ. ಆದರೆ ಈ ಯೋಜನೆ ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ (ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್‌ಸೆಟ್‌ಗಳು ಅರ್ಹವಿರುವುದಿಲ್ಲ). ಅಲ್ಲದೇ ಅರ್ಜಿದಾರರು ಒಂದು ಸೌರ ಪಂಪ್‌ಸೆಟ್‌ಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‌ಸೆಟ್ ಪಡೆದಿದ್ದರೆ, ಅಂತಹ ಅರ್ಜಿದಾರರು ಅರ್ಹರಿರುವುದಿಲ್ಲ. ಅರ್ಜಿದಾರರು ಅವರ ವಂತಿಗೆಯನ್ನು ಡಿ.ಡಿ ಮೂಲಕವೇ ( MD – KREDL ಹೆಸರಿನಲ್ಲಿ Payable at Bangalore) ಸಲ್ಲಿಸಬೇಕು. Cheque ಅಥವಾ ಇತರೆ ಆನ್‌ಲೈನ್ Payment ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ.

ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರ ಚಾಲಿತ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ. 5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪ.ಜಾ / ಪ.ಪಂ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷ ಚೇತನ ವರ್ಗದವರು ಅವರ ವಂತಿಗೆಯನ್ನು ಪಾವತಿಸಬೇಕು. ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣ www.kredl.karnataka.gov.in ನಲ್ಲಿ ಮಾತ್ರ ಲಭ್ಯವಾಗುವ ಲಿಂಕ್ ಮೂಲಕವೇ ದಿನಾಂಕ: 15.07.2022, ಬೆಳಗ್ಗೆ 10.30 ರ ನಂತರ ಆನ್‌ಲೈನ್ ಅರ್ಜಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿಗಾಗಿ ಕಛೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ: 8095132100 ಮೂಲಕ ಸಂಪರ್ಕಿಸಬಹುದಾಗಿದೆ.

ಆದರೆ ಈ ಯೋಜನೆಯಿಂದ ಲಾಭ ಪಡೆಯಬೇಕಾದರೆ ಯಾವುದೇ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಈ ಯೋಜನೆಯ ಹೆಸರಿನಲ್ಲಿ ನಕಲಿ ಜಾಲತಾಣಗಳ ಮುಖಾಂತರ ರೈತರನ್ನು ಮೋಸಗೊಳಿಸುತ್ತಿರುವುದು ವ್ಯಾಪಕವಾಗಿರುವ ಪ್ರಯುಕ್ತ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ, ನವದೆಹಲಿ ಹಾಗೂ ಕೆ.ಆರ್.ಇ.ಡಿ.ಎಲ್ ಸಂಸ್ಥೆಯು ಜನಸಾಮಾನ್ಯರಿಗೆ ಜಾಹೀರಾತುಗಳ ಮೂಲಕ ಮೋಸಹೋಗದಿರಲು ತಿಳುವಳಿಕೆ ನೀಡಲಾಗಿರುತ್ತದೆ. ಆದರೂ ಸಹ ರೈತರು ಮೋಸಹೋದ ಪಕ್ಷದಲ್ಲಿ https://cybercrime-gov.in ರಲ್ಲಿ ದೂರು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: CBSE ತರಗತಿ 10, ತರಗತಿ 12 ಫಲಿತಾಂಶ ದಿನಾಂಕ ಮತ್ತು ಅಧಿಕೃತ ವೆಬ್‌ಸೈಟ್ ಲಿಂಕ್

ಇದನ್ನೂ ಓದಿ: Gandhada Gudi : ಅಕ್ಟೋಬರ್ 28 ಕ್ಕೆ ತೆರೆಯ ಮೇಲೆ ಗಂಧದ ಗುಡಿ

(Everything You Need to Know About PM-KUSUM Yojana Scheme)

Comments are closed.