NEET MDS:ನೀಟ್ ಎಂಡಿಎಸ್ ಮೆರಿಟ್ ಲಿಸ್ಟ್ ಬಿಡುಗಡೆ; ಮಾರ್ಕ್ ಕಾರ್ಡ್ ಜುಲೈ 27ಕ್ಕೆ

ರಾಷ್ಟ್ರೀಯ ಪರೀಕ್ಷಾ ಮಂಡಳಿ, ಎನ್ ಬಿ ಇ ನೀಟ್ ಎಂಡಿಎಸ್ (NBE NEET MDS) 2022 ಮೆರಿಟ್ ಪಟ್ಟಿಯನ್ನು ಘೋಷಿಸಿದೆ. ಜುಲೈ 15, 2022 ರಂದು ಎನ್ ಬಿಇಯಿಂದ ನೀಟ್ ಎಂಡಿಎಸ್ ಗಾಗಿ ಮೆರಿಟ್ ಪಟ್ಟಿಯನ್ನು ಘೋಷಿಸಲಾಗಿದೆ. ನೀಟ್ ಎಂಡಿಎಸ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಅಧಿಕೃತ ವೆಬ್‌ಸೈಟ್ – natboard.edu.in, nbe.edu.in ನಲ್ಲಿ ತಮ್ಮ ಮೆರಿಟ್ ಪಟ್ಟಿಯನ್ನು ವೀಕ್ಷಿಸಬಹುದು.ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, ನೀಟ್ ಎಂಡಿಎಸ್ 2022 ಅನ್ನು ಮೇ 2, 2022 ರಂದು ನಡೆಸಲಾಯಿತು ಮತ್ತು ಫಲಿತಾಂಶವನ್ನು ಮೇ 27, 2022 ರಂದು ಘೋಷಿಸಲಾಯಿತು. ಜುಲೈ 15, 2022 ರಂದು, ಅಭ್ಯರ್ಥಿಗಳಿಗಾಗಿ ನೀಟ್ ಎಂಡಿಎಸ್ 2022 ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ( NEET MDS).

ಅಭ್ಯರ್ಥಿಗಳು ತಮ್ಮ ನೀಟ್ ಎಂಡಿಎಸ್ 2022 ಮೆರಿಟ್ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಗೆ ಪರಿಶೀಲಿಸಬೇಕು ಎಂಬುದನ್ನು ತಿಳಿಯಲು ಕೆಳಗೆ ನೀಡಲಾದ ಪ್ರಕ್ರಿಯೆಯನ್ನು ಅನುಸರಿಸಬಹುದು

ನೀಟ್ ಎಂಡಿಎಸ್ 2022 ಮೆರಿಟ್ ಪಟ್ಟಿ – ಹೇಗೆ ಪರಿಶೀಲಿಸುವುದು
-ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – natboard.ed.u.in
-ಇತ್ತೀಚಿನ ಸುದ್ದಿ ವಿಭಾಗದ ಅಡಿಯಲ್ಲಿ, ನೀಟ್ ಎಂಡಿಎಸ್ 2022 ಮೆರಿಟ್ ಪಟ್ಟಿಗಾಗಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.
– ಆಗ ಒಂದು ಪಿಡಿಎಫ್ ತೆರೆಯುತ್ತದೆ. ಇಲ್ಲಿ ನೀಡಲಾದ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
-ನಿಮ್ಮ ರೋಲ್ ನಂಬರ್ ಹುಡುಕಿ ಮತ್ತು ಅದನ್ನು ಸೇವ್ ಮಾಡಿ.
-ಭವಿಷ್ಯದ ಉಲ್ಲೇಖಗಳಿಗಾಗಿ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ.


ಸ್ನಾತಕೋತ್ತರ ಎಂಡಿಎಸ್ ಕೋರ್ಸ್‌ಗಳಲ್ಲಿ ಆಲ್ ಇಂಡಿಯಾ ಕೋಟಾ, ಎಐಕ್ಯೂ ಸೀಟುಗಳ ಶೇಕಡಾ 50 ರಷ್ಟು ಅಭ್ಯರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೆರಿಟ್ ಪಟ್ಟಿಯನ್ನು ಮಾಡಲಾಗಿದೆ. ನೀಟ್ ಎಂಡಿಎಸ್ 2022 ರ ಕಟ್-ಆಫ್ ಸ್ಕೋರ್‌ಗಳನ್ನು ಸಹ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಅದರ ಪ್ರಕಾರ, ಸಾಮಾನ್ಯ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಕಟ್ ಆಫ್ ಸ್ಕೋರ್‌ಗಳು 263. ಎಸ್ ಸಿ, ಎಸ್ ಟಿ ,ಒಬಿಸಿ ಮತ್ತು ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ ಕಟ್ ಆಫ್ ಸ್ಕೋರ್ 227 ಮತ್ತು ಸಾಮಾನ್ಯ ವರ್ಗದ ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ, ಕಟ್ ಆಫ್ ಸ್ಕೋರ್ 245 ಆಗಿದೆ.
ಎನ್ ಬಿ ಇ ಎಂ ಎಸ್ ಹೊರಡಿಸಿದ ಸೂಚನೆಯ ಪ್ರಕಾರ, ಜುಲೈ 27, 2022 ರಿಂದ ಎಲ್ಲಾ ಅಭ್ಯರ್ಥಿಗಳಿಗೆ ನೀಟ್ ಎಂಡಿಎಸ್ 2022 ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಇದನ್ನು ಓದಿ: NEET UG Admit Card: ನೀಟ್ ಯುಜಿ – 2022 ರ ಅಡ್ಮಿಟ್ ಕಾರ್ಡ್ ಇಂದು ಬಿಡುಗಡೆ;ಇಲ್ಲಿದೆ ಸಂಪೂರ್ಣ ಮಾಹಿತಿ

( NEET MDS merit list released )

Comments are closed.