­Mango Farming: ಕೃಷಿಕರೇ ಗಮನಿಸಿ: ಮಾವಿನ ಹಣ್ಣಿನ ನೊಣದ ನಿಯಂತ್ರಣಕ್ಕೆ ಮೋಹಕ ಬಲೆ ಬಳಕೆ; ಹೇಗೆ ತಯಾರಿಸುವುದು?

­ಯಾವುದೇ ಬೆಳೆಯಾಗಲಿ ಅತ್ಯಮತ ಜಾಗರೂಕತೆಯಿಂದ ಕಾಯ್ದುಕೊಳ್ಳುಬೇಕು. ಆದರೆ ಹಾಗೆ ಜೋಪಾನ ಮಾಡುವುದು ಅಷ್ಟು ಸುಲಭವಲ್ಲ. ಇದೀಗ ಮಾವಿನಹಣ್ಣಿನ ಸೀಸನ್ ಹತ್ತಿರ ಬರುತ್ತಿದೆ. ಮಾರುಕಟ್ಟೆಗೆ ಈಗಾಗಲೆ ಮಾವಿನ ಕಾಯಿಗಳು ಲಗ್ಗೆಯಿಟ್ಟಿವೆ. ಕರ್ನಾಟಕದಲ್ಲಿ ಲಕ್ಷಾಂತರ ಎಕರೆಗಳಲ್ಲಿ ಮಾವು ಬೆಳೆಯುತ್ತಾರೆ. ಕೃಷಿ ಸಮುದಾಯದ ಬಾಂಧವರಿಗೆ ಮಾವಿನ ಹಣ್ಣಿನ ನೊಣದ (mango farming) ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ (Agriculture Tips) ಕುರಿತು ಇಲ್ಲಿ ವಿವರಿಸಲಾಗಿದೆ.

ಮಾವಿಗೆ ಹಣ್ಣಿನ ನೊಣದ ಬಾದೆಯಿಂದಾಗಿ ಹಣ್ಣಿನ ಮೇಲೆ ಕಪ್ಪು ಚುಕ್ಕೆಗಳಾಗುತ್ತದೆ. ಇದೇ ಮುಂದುವರೆದು ನಂತರ ಮಾವಿನ ಹಣ್ಣು ಕೊಳೆತುಹೋಗುತ್ತದೆ ಈ ಕೀಟವನ್ನು ನಿಯಂತ್ರಸಲು ನೊಣವನ್ನು ಆಕರ್ಷಿಸಲು ಮೋಹಕ ಬಲೆಯನ್ನು ( ಮೋಥೈಲ್ ಯುಜಿನಾಲ್ ) ತೂಗು ಹಾಕಬೇಕು. ( 6 ಮೋಹಕ ಬಲೆಗಳು ಪ್ರತಿ ಎಕರೆ ಭೂಮಿಗೆ) ಅಥವಾ ಮಾವಿನ ಕಾಯಿ ಲಿಂಬೆ ಹಣ್ಣಿನ ಗಾತ್ರಕ್ಕೆ ಬಂದಾಗ ಡೆಲ್ಟಾ ಮೆಥ್ರಿನ್ 0.5 ಮಿಲೀ ಲೀಟರ್ ಮತ್ತು ಅಜಾರಿಡೆಕ್ಟಿನ್ 1% ( Neem Oil) 1 ಮಿಲೀ ಲೀಟರ್ ಪ್ರತಿ ಲೋಟ ನೀರಿನೊಂದಿಗೆ ಸೇರಿಸಿ ಸಿಂಪಡಣೆ ಮಾಡಬೇಕು.

ಅಥವಾ ಡೆಲ್ಟಾ ಮೆಥ್ರಿನ್ 1 ಮೀಲಿ ಲೀಟರ್ ಮತ್ತು ಬೆಲ್ಲ 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಹಾಗೂ ಮಾವು ಮಾಗುವ ಅವಧಿಯಲ್ಲಿ ಮಾವಿನಕಾಂಡಕ್ಕೆ 10-15 ದಿನಕೊಮ್ಮೆ ಬೆಲ್ಲ 100 ಗ್ರಾಂ ಮತ್ತು ಡೆಲ್ಟಾ ಮೆಥ್ರಿನ್ 2 ಮಿಲೀಲೀಟರ್ ಪ್ರತಿ ಲೋಟ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕಾ ಮಾಹಿತಿ ಮತ್ತು ಸಲಹಾ ಕೇಂದ್ರ ಶಿರಸಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಮೋಹಕ ಬಲೆಗಳನ್ನು ಸ್ವತಃ ರೈತರೇ ಅಳವಡಿಸುವ ವಿಧಾನ ಹೀಗಿದೆ

1. ಸಣ್ಣ ಪ್ಲಾಸ್ಟಿಕ್ ಕಂಟೇನರ್‌ನ್ನು ತೆಗೆದುಕೊಳ್ಳಬೇಕು

2. 5 * 5* 1 ಸಿಂ.ಮೋ ಅಳತೆಯ ಪ್ಲೈವುಡ್‌ನ್ನು ತೆಗೆದುಕೊಂಡು ಅದನ್ನು

ಮಿಥೈಲ್ ಯುಜಿನಾಲ್ : ಡೈಕ್ಲೊವಾಸ್ (6:4) ಪ್ರಮಾಣದಲ್ಲಿ ಮಿಶ್ರಣ ಮಾಡಿದ ದ್ರಾವಣದಲ್ಲಿ ಒಂದು ದಿನ ನೆನೆಸಬೇಕು.

3. ಔಷಧಿಯಿಂದ ಉಪಚರಿಸಿದ ಫ್ಲೈವುಡ್‌ನ್ನು ಪ್ಲಾಸ್ಟಿಕ್ ಕಂಟೆನರ್‌ನಲ್ಲಿ ತೂಗು ಬಿಡಬೇಕು.

4. ಹೀಗೆ ತಯಾರಿಸಿದ ಮೋಹಕ ಬಲೆಯನ್ನು ಪ್ರತಿ ಎಕರೆಗೆ 6-8 ರಂತೆ ಮಾವಿನ ಮರಕ್ಕೆ ತೂಗು ಬಿಡಬೇಕು

5. ಈ ಮೋಹಕ ಬಲೆಗಳು ಗಂಡು ಹಣ್ಣಿನ ನೊಣವನ್ನು ಆಕರ್ಷಿಸಿ ಸಾಯಿಸುತ್ತದೆ. ಇದರಿಂದ

ಸಂತಾನೋತ್ಪತ್ತಿಗೆ ತೊಂದರೆಯುಂಟಾಗಿ ಮಾವಿನ ಹಣ್ಣಿಗೆ ಉಂಟಾಗುವ ಹಾನಿಯನ್ನುಂಟು ಮಾಡುವುದನ್ನು ತಡೆಗಟ್ಟಬಹುದು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(Mango Farming Agriculture tips Mango fruit can save by fly trap)

Comments are closed.