ಕೇವಲ 2 ಲಕ್ಷ ರೂ ಡೌನ್‌ ಪೇಮೆಂಟ್‌ ಮಾಡಿ, ಮಾರುತಿ ಎರ್ಟಿಗಾ ಸಿಎನ್‌ಜಿ ಕಾರು ಖರೀದಿಸಿ

Maruti Ertiga CNG Car: ಮಾರುತಿ ಸುಜುಕಿ, ಭಾರತ ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಲ್ಲೊಂದು. ಮಾರುತಿ ಸುಜುಕಿ ತನ್ನ ಬಜೆಟ್‌ ಫ್ರೆಂಡ್ಲಿ ಎಮ್‌ಪಿವಿ ವಿಭಾಗದಲ್ಲಿ ಮಾರುತಿ ಎರ್ಟಿಗಾವನ್ನು ಮಾರಾಟ ಮಾಡುತ್ತದೆ.

ಮಾರುತಿ ಎರ್ಟಿಗಾದ ಸಿಎನ್‌ಜಿ ರೂಪಾಂತರದ ಕಾರನ್ನು ಖರೀದಿಸಲು ಭಾರತದ ಜನತೆ ಉತ್ಸಾಹ ತೋರಿಸಿದೆ. ಇದು ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ ಕಾರು ಎಂದು ಹೆಸರು ಪಡೆದುಕೊಂಡಿದೆ.

ಈ ಕಾರಿನ ಎಕ್ಸ್‌ ಶೋರೂಂ ಬೆಲೆ 12.78 ಲಕ್ಷ ರೂ. ಇಷ್ಟು ಬೆಲೆಯನ್ನು ಒಮ್ಮೆಲೆ ಕೊಟ್ಟು ಖರೀದಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಅದಕ್ಕೆ ಬೇಸರವಾಗಬೇಕೆಂದಿಲ್ಲ.

ಹೇಗೆಂದರೆ ಈ ಕಾರನ್ನು ಕೇವಲ 2 ಲಕ್ಷ ಡೌನ್‌ ಪೇಮೆಂಟ್‌ನಲ್ಲೂ ಖರೀದಿಸಬಹುದು. ಹೇಗೆ? ಇಲ್ಲಿದೆ ಓದಿ.

ಮಾರುತಿ ಎರ್ಟಿಗಾ ಬೆಲೆ ಎಷ್ಟು?

ಮಾರುತಿ, ಎರ್ಟಿಗಾ ಸಿಎನ್‌ಜಿಯನ್ನು ಬಜೆಟ್‌ ಎಮ್‌ಪಿವಿ ವಿಭಾಗದಲ್ಲಿ ಮಾರಾಟ ಮಾಡುತ್ತದೆ. ಈ ಕಾರಿನ ಬೆಲೆ ಎಕ್ಸ್‌ ಶೋ ರೂಂ ಬೆಲೆ 10.76 ಲಕ್ಷ ರೂ.

ಅದರ ಆನ್‌ ರೋಡ್ ಬೆಲೆ ನೋಂದಣಿ ತೆರಿಗೆ ಹಾಗೂ ವಿಮೆಯನ್ನು ಸೇರಿಸಿ ಅಂದಾಜು 12 ಲಕ್ಷ ರೂ. ಗಳಾಗಬಹುದು. (ನೀವು ವಾಸಿಸುವ ಪ್ರದೇಶಕ್ಕನುಗುಣವಾಗಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು.)

2 ಲಕ್ಷ ಡೌನ್‌ ಪೇಮೆಂಟ್‌ ನಂತರ ಇಎಮ್‌ಐ ಎಷ್ಟು?

ಮಾರುತಿ ಎರ್ಟಿಗಾ ಸಿಎನ್‌ಜಿ ರೂಪಾಂತರ ಕಾರನ್ನು 2 ಲಕ್ಷ ರೂ. ಡೌನ್‌ ಪೇಮೆಂಟ್ನಲ್ಲಿ ಖರೀದಿಸಿದ ನಂತರ ಬ್ಯಾಂಕ್ ಕಾರಿಗೆ ಎಕ್ಸ್-ಶೋರೂಂ ಬೆಲೆಯಲ್ಲಿ ಲೋನ್ ನೀಡುತ್ತದೆ.

ನೀವು ಬ್ಯಾಂಕಿನಿಂದ ಸುಮಾರು ₹10 ಲಕ್ಷ ಸಾಲ ಪಡೆಯಬೇಕಾಗಬಹುದು. ಬ್ಯಾಂಕ್ ನಿಮಗೆ ಏಳು ವರ್ಷಗಳವರೆಗೆ 9% ಬಡ್ಡಿಯಲ್ಲಿ ₹10 ಲಕ್ಷ ಸಾಲ ನೀಡಿದರೆ, ಮುಂದಿನ ಏಳು ವರ್ಷಗಳವರೆಗೆ ನೀವು ಮಾಸಿಕ 17,354 ರೂ. ಇಎಂಐ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಲು ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ XEV 9S: ವಿನ್ಯಾಸ, ಬೆಲೆ, ವೈಶಿಷ್ಟ್ಯ ಏನು?

ಮಾರುತಿ ಎರ್ಟಿಗಾ ಸಿಎನ್‌ಜಿ ವೈಶಿಷ್ಟ್ಯ

ಇದು 6 ಏರ್‌ ಬ್ಯಾಗ್‌ಗಳನ್ನು ಹೊಂದಿರುವ ಹೆಚ್ಚು ಸುರಕ್ಷತೆಯನ್ನು ಒದಗಿಸುವ ಕಾರು. ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 102 PS ಪವರ್ ಮತ್ತು 139 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆದರೆ, CNG ಆಯ್ಕೆಯಲ್ಲಿ, ಇದು 99 PS ಪವರ್ ಮತ್ತು 122 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ MPV ಯಲ್ಲಿ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳಿರುತ್ತದೆ.

ಸಿಎನ್‌ಜಿ ರೂಪಾಂತರದಲ್ಲಿ ಈ ಕಾರು ಪ್ರತಿ ಕೆಜಿಗೆ 26.11 ಕಿಮಿ ಮೈಲೇಜ್‌ ನೀಡುತ್ತದೆ. ಅತ್ಯಂತ ಆರಾಮದಾಯಕವಾಗಿರುವ ಈ ಸವೆನ್ ಸೀಟರ್‌ ಕಾರು ಟಾಪ್‌ ಮಾಡೆಲ್‌ನಲ್ಲಿ ಎರಡನೇ ಸಾಲಿನ ಸೀಟ್‌ಗಳಲ್ಲಿಯೂ ಎಸಿ ವೆಂಟ್‌ ಮತ್ತು ಯುಎಸ್‌ಬಿ–ಸಿ ಫಾಸ್ಟ್‌ ಚಾರ್ಜಿಂಗ್‌ ಪೋರ್ಟ್‌ಗಳಿವೆ.

ಇದರ ಜೊತೆಗೆ 3 ಪಾಯಿಂಟ್‌ ಸೀಟ್‌ಬೆಲ್ಟ್‌ಗಳು, ಅಡ್ಜೆಸ್ಟ್‌ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ಇದರಲ್ಲಿ ಕಾಣಬಹುದು.

ಮಾರುತಿ ಎರ್ಟಿಗಾ ಕಾರು ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ರೆನಾಲ್ಟ್ ಟ್ರೈಬರ್‌, ಕಿಯಾ ಕ್ಯಾರೆನ್ಸ್‌ ಕ್ಲಾವಿಸ್‌ ಮತ್ತು ಕಿಯಾ ಕ್ಯಾರೆನ್ಸ್‌ ನಂತಹ ಬಜೆಟ್‌ ಎಮ್‌ಪಿವಿ ಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ.

ಇದನ್ನೂ ಓದಿ: Yamaha ದ ಮೊದಲ ಎಲಿಕ್ವಿಕ್ ಸ್ಕೂಟರ್ Aerox E: ಸಿಂಗಲ್ ಚಾರ್ಜ್‌ನಲ್ಲಿ ಓಡತ್ತೆ 106 ಕಿಮಿ

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories