ಹೊಸ ಅಲೆ ಸೃಷ್ಟಿಸಲು ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ XEV 9S: ವಿನ್ಯಾಸ, ಬೆಲೆ, ವೈಶಿಷ್ಟ್ಯ ಏನು?

Mahindra XEV 9S: ದೇಸಿಯ ಕಾರು ತಯಾರಿಕಾ ಕಂಪನಿ ಮಹೀಂದ್ರಾ ಇತ್ತೀಚೆಗೆ ತನ್ನ ಮುಂಬರುವ ಮಹೀಂದ್ರಾ XEV 9S ಎಲೆಕ್ಟ್ರಿಕ್ SUV ಯ ಒಳಾಂಗಣದ ಟೀಸರ್‌ ಬಿಡುಗಡೆ ಮಾಡಿದೆ.

ಟೀಸರ್‌ ನೋಡಿದಾಗ ಈ ಕಾರು ಅತ್ಯಂತ ಆಧುನಿಕವಾಗಿ ವಿನ್ಯಾಸಗೊಳಿಸಿರುವುದು ಕಾಣಿಸುತ್ತಿದೆ. ಸೆವೆನ್‌ ಸೀಟರ್‌ ಎಲೆಕ್ಟ್ರಿಕ್‌ ಎಸ್‌ಯುವಿಯಾದ ಈ ಕಾರಿನ ಒಳಾಂಗಣದಲ್ಲಿ ಸಾಕಷ್ಟು ಜಾಗವಿರುವುದು ಕಂಡುಬಂದಿದೆ.

282bhp ಮತ್ತು 380Nm ಮೋಟಾರ್‌ನೊಂದಿಗೆ ಬರುವ ಈ ಕಾರು INGLO ಮಾಡ್ಯುಲರ್ ಹಗುರವಾದ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಮಹೀಂದ್ರಾ XEV 9S ನ ಟೀಸರ್‌ನಲ್ಲಿ ಏನೆಲ್ಲಾ ವಿಶೇಷಗಳನ್ನು ತೋರಿಸಲಾಗಿದೆ ಎಂದು ನೋಡೋಣ.

ಮಹೀಂದ್ರಾ XEV 9S ನ ಟೀಸರ್‌ನಲ್ಲಿ ಏನಿದೆ?

ಟೀಸರ್‌ನಲ್ಲಿ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಎರಡನೇ ಸಾಲಿನ ಸೀಟುಗಳು ಸಹ ಸ್ಲೈಡಿಂಗ್ ಮಾಡಬಹುದು ಎಂಬುದನ್ನು ಬಹಿರಂಗಪಡಿಸಿದೆ.

ಇದು ದೀರ್ಘ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆರಾಮದಾಯಕ ಅನುಭವ ಒದಗಿಸಬಲ್ಲದು.

ಇದಲ್ಲದೆ, ಸೀಟುಗಳನ್ನು ಕಪ್ಪು ಬಣ್ಣದಲ್ಲಿ ಮತ್ತು ಅದಕ್ಕೆ ಸಿಲ್ವರ್‌ ಲೈನ್‌ ನೀಡಿ ವಿನ್ಯಾಸಗೊಳಿಸಲಾಗಿದೆ. ಇದು ಕಾರಿನ ಒಳಾಂಗಣಕ್ಕೆ ಪ್ರೀಮಿಯಂ ನೋಟವನ್ನು ನೀಡುತ್ತದೆ.

ಟೀಸರ್‌ನಲ್ಲಿ ತೋರಿಸಿರುವ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಟ್ರೈ-ಕ್ಲಸ್ಟರ್ ಡಿಸ್ಪ್ಲೇ. ಈ ಡಿಸ್ಪ್ಲೇ XEV 9E ನಲ್ಲಿ ಕಂಡುಬರುವ ವಿನ್ಯಾಸವನ್ನು ಹೋಲುತ್ತದೆ. ಇದು ಚಾಲಕರಿಗೆ ಗುಣಮಟ್ಟದ ಕೊಡುಗೆ ನೀಡುತ್ತದೆ.

ಮಹೀಂದ್ರಾ XEV 9S ವಿನ್ಯಾಸ ಹೇಗಿದೆ?

XEV 9S ನಯವಾದ ಮೇಲ್ನೋಟ ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿದ್ದು ಕಂಡುಬಂದಿದೆ. XUV700 ನ ಹಿಂಭಾಗದ ವಿಭಾಗದಿಂದ ವಿನ್ಯಾಸವನ್ನು ಎರವಲು ಪಡೆದುಕೊಂಡಂತಿದೆ.

ಆದರೆ ಟೈಲ್‌ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್‌ನಂತಹ ಕೆಲವು ಪ್ರಮುಖ ಬದಲಾವಣೆಗಳನ್ನು ನೋಡಬಹುದು.

ಹೆಚ್ಚುವರಿಯಾಗಿ, XEV 9S ಕಾರು ಪನೋರಮಿಕ್ ಸನ್‌ರೂಫ್ ಅನ್ನು ಸಹ ಹೊಂದಿದ್ದು, BE 6 ಮತ್ತು XEV 9e ನಲ್ಲಿರುವ ಸ್ಥಿರ ಗಾಜಿನ ಛಾವಣಿಗಳಿಗೆ ಹೋಲಿಸಿದರೆ ಹೊಸ ಭಾವನೆಯನ್ನು ನೀಡುತ್ತದೆ.

ಇದನ್ನೂ ಓದಿ: ಭಾರತ ಕುಸಿದುಹೋಗುತ್ತೆ ಎಂದು ಭಾವಿಸಿದ್ದ ಟ್ರಂಪ್; ಆದರೆ ಆದದ್ದೇ ಬೇರೆ! ದಾಖಲೆ ಬರೆದ ಕಾರ್ ಮಾರಾಟ

ಮಹೀಂದ್ರಾ XEV 9S ಸಂಭಾವ್ಯ ವೈಶಿಷ್ಟ್ಯಗಳು

XEV 9S ಟ್ರಿಪಲ್ ಸ್ಕ್ರೀನ್ ಡಿಸ್ಪ್ಲೇ ಸೆಟಪ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದು ಚಾಲನಾ ಅನುಭವವನ್ನು ಇನ್ನಷ್ಟು ಸ್ಮಾರ್ಟ್ ಮತ್ತು ತಂತ್ರಜ್ಞಾನ ಸ್ನೇಹಿಯಾಗಿರುತ್ತದೆ.

ಡ್ರೈವಿಂಗ್‌ ಮಾಡುವಾಗ ಏಂಬಿಯಂಟ್ ಲೈಟಿಂಗ್‌ ಅನುಭವ ದೊರೆಯುತ್ತದೆ. ಜೊತೆಗೆ ಇದರಲ್ಲಿ ಲೆವಲ್‌ 2 ಆಟೋಮೆಟಿಕ್‌ ಡ್ರೈವಿಂಗ್‌ ಅಸಿಸ್ಟೆಂಟ್‌ ಸಿಸ್ಟಮ್‌ ನೋಡಬಹುದು.

ಇದರಲ್ಲಿ ವೆಂಟಿಲೇಟೆಡ್‌ ಸೀಟ್‌ ಮತ್ತು ಡ್ಯುಯಲ್‌ ಜೋನ್‌ ಕ್ಲೈಮೇಟ್ ಕಂಟ್ರೋಲ್‌ ಇರುವ ಸಾಧ್ಯತೆಯಿದೆ. ಇದರಲ್ಲಿ ಪವರ್‌ ಡೈವರ್‌ ಸೀಟ್‌, 360 ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಕಾಣಬಹುದು.

ಬ್ಯಾಟರಿ ಕ್ಷಮತೆ

XEV 9S ಮಹೀಂದ್ರಾದ 59kWh ಮತ್ತು 79kWh LFP ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇವು BE 6 ಮತ್ತು XEV 9e ನಲ್ಲಿಯೂ ಲಭ್ಯವಿದೆ. ಮಹೀಂದ್ರಾ XEV 9S AWD (ಆಲ್-ವೀಲ್ ಡ್ರೈವ್) ಆಯ್ಕೆಯನ್ನು ಸಹ ಒಳಗೊಂಡಿರಬಹುದು.

ಬೆಲೆ ಎಷ್ಟಿರಬಹುದು?

ಮಹೀಂದ್ರಾ XEV 9S ಬೆಲೆ 25 ಲಕ್ಷದಿಂದ 35 ಲಕ್ಷ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಇದು XEV 9e ಗಿಂತ ಹೆಚ್ಚಿನ ಬೆಲೆಯಾಗಿದೆ.

ಇದನ್ನು ಇದೇ ನವೆಂಬರ್ 26-27 ರಂದು ನಡೆಯುವ ಮಹೀಂದ್ರಾದ ‘ಸ್ಕ್ರೀಮ್ ಎಲೆಕ್ಟ್ರಿಕ್’ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಅನಾವರಣಗೊಳಿಸಲಾಗುವುದು.

ಇದನ್ನೂ ಓದಿ: ಸಿಎನ್‌ಜಿಯಲ್ಲಿ ಬಿಡುಗಡೆಯಾದ ಕಿಯಾ ಕ್ಯಾರೆನ್ಸ್: ಬೆಲೆ ಮತ್ತು ವೈಶಿಷ್ಟ್ಯ ಏನು?

(Mahindra XEV 9S interior teaser reveals attractive look and facility)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories