Yamaha ದ ಮೊದಲ ಎಲಿಕ್ಟ್ರಿಕ್‌ ಸ್ಕೂಟರ್‌ Aerox E: ಸಿಂಗಲ್‌ ಚಾರ್ಜ್‌ನಲ್ಲಿ ಓಡತ್ತೆ 106 ಕಿಮಿ

Yamaha Aerox E: ಒಂದು ಕಾಲದಲ್ಲಿ ಭಾರತದಲ್ಲಿ ಯಮಹಾ ಬೈಕ್‌ಗಳದ್ದೇ ಜೋರು ಸದ್ದಾಗಿತ್ತು. ಇಂದಿಗೂ ಸಹ ಬಹಳಷ್ಟು ಜನರ ನೆಚ್ಚಿನ ಕಂಪನಿ ಇದಾಗಿದೆ.

ಈಗ ಯಮಹಾ ಮೋಟಾರ್ ಇಂಡಿಯಾ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಏರೋಕ್ಸ್ ಇ ಮತ್ತು ಇಸಿ-06 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಸೇರ್ಪಡೆಯಿಂದ ಯಮಹಾ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗಕ್ಕೆ ತನ್ನ ಪ್ರವೇಶ ಮಾಡಿದೆ. ಈ ಎರಡು ಸ್ಕೂಟರ್‌ಗಳಲ್ಲಿ, ಏರೋಕ್ಸ್ ಇ ಹೆಚ್ಚಿನ ಕಾರ್ಯಕ್ಷಮತೆಯ ಇ-ಮ್ಯಾಕ್ಸಿ ಸ್ಕೂಟರ್ ಆಗಿದ್ದು, ಯಮಹಾದ ಏರೋಕ್ಸ್ 155 ರ ಎಲೆಕ್ಟ್ರಿಕ್ ಆವೃತ್ತಿಯಾಗಿದೆ.

ಯಮಹಾ ಏರೋಕ್ಸ್ ಇ ಮತ್ತು ಇಸಿ-06 ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡೋಣ.

ಹೇಗಿದೆ ಯಮಹಾ ಏರೋಕ್ಸ್ ಇ ಬ್ಯಾಟರಿ?

ಯಮಹಾ ಏರೋಕ್ಸ್ ಇ ಭಾರತದ ಮೊದಲ ಮ್ಯಾಕ್ಸಿ-ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರಲ್ಲಿ ಯಮಹಾ ದ ರೇಸಿಂಗ್-ಪ್ರೇರಿತ ವಿನ್ಯಾಸವನ್ನು ಅತ್ಯಾಧುನಿಕ ವಿದ್ಯುತ್ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ.

ಇದರ ಎಲೆಕ್ಟ್ರಿಕ್‌ ಮೋಟಾರ್ 9.4 kW ಪವರ್ ಮತ್ತು 48 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಏರೋಕ್ಸ್ E ಡ್ಯುಯಲ್ ಡಿಟ್ಯಾಚೇಬಲ್ 3 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಅಂದರೆ ಒಟ್ಟು 6 kWh.

ಅವುಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಬಹುದಾಗಿದೆ. ಅದನ್ನು ಸುಲಭವಾಗಿ ತೆಗೆಯಲು ಮತ್ತು ಪೋರ್ಟಬಿಲಿಟಿಗಾಗಿ ಅವುಗಳಲ್ಲಿ ಗ್ರಿಪ್‌ ಅನ್ನು ಅಳವಡಿಸಲಾಗಿದೆ.

ಯಮಹಾ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮೂರು ಚಾಲನಾ ವಿಧಾನಗಳನ್ನು ಒದಗಿಸಿದೆ. ಇಕೋ, ಸ್ಟ್ಯಾಂಡರ್ಡ್ ಮತ್ತು ಪವರ್ ಎಂಬ ಮೂರು ವಿಧಾನಗಳನ್ನು ಕಾಣಬಹುದು.

ಇದು ವೇಗವರ್ಧನೆಗಾಗಿ ಬೂಸ್ಟ್ ಕಾರ್ಯವನ್ನು ಸಹ ಹೊಂದಿದೆ. ಇದು ರಿವರ್ಸ್ ಮೋಡ್ ಅನ್ನು ಸಹ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 106 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಯಮಾಹಾ ಹೇಳಿಕೊಂಡಿದೆ.

ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಲು ಮಾರುಕಟ್ಟೆಗೆ ಬರಲಿದೆ ಮಹೀಂದ್ರಾ XEV 9S: ವಿನ್ಯಾಸ, ಬೆಲೆ, ವೈಶಿಷ್ಟ್ಯ ಏನು?

ವಿನ್ಯಾಸ ಹೇಗಿದೆ?

ಯಮಹಾ ಏರೋಕ್ಸ್ ಇ ನ ವಿನ್ಯಾಸವು ಸ್ಪೋರ್ಟಿ ಮಾತ್ರವಲ್ಲ, ಫ್ಯೂಚರಿಸ್ಟಿಕ್ ಕೂಡ ಆಗಿದೆ. ಇದು ಟ್ವಿನ್ ಎಲ್ಇಡಿ ಕ್ಲಾಸ್ ಡಿ ಹೆಡ್‌ಲೈಟ್‌ಗಳು, ಎಲ್ಇಡಿ ಫ್ಲಾಷರ್‌ಗಳು ಮತ್ತು 3D-ಎಫೆಕ್ಟ್ ಎಲ್ಇಡಿ ಟೈಲ್‌ಲೈಟ್ ಗಳನ್ನು ಒಳಗೊಂಡಿದೆ.

ಇದು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ 5-ಇಂಚಿನ ಟಿಎಫ್‌ಟಿ ಕಲರ್ ಸ್ಕ್ರೀನ್ ಅನ್ನು ಸಹ ಹೊಂದಿದೆ. ಸ್ಮಾರ್ಟ್‌ಫೋನ್ ಸಂಪರ್ಕ, ವಾಹನ ಅಂಕಿಅಂಶಗಳು, ಪಾರ್ಕಿಂಗ್ ಲೊಕೇಷನ್‌ ಮತ್ತು ಮೆಂಟೇನೆನ್ಸ್‌ ರಿಮೈಂಡರ್‌ ವೈಶಿಷ್ಟ್ಯಗಳನ್ನು ನೀಡುವ ಯಮಹಾ ವೈ-ಕನೆಕ್ಟ್ ಅಪ್ಲಿಕೇಶನ್ ಸ್ಕ್ರೀನ್‌ ಹೊಂದಿದೆ. ಇದನ್ನು ಮೊಬೈಲ್‌ಗೆ ಕನೆಕ್ಟ್‌ ಮಾಡಬಹುದಾಗಿದೆ.

ಯಮಹಾ ಏರೋಕ್ಸ್ ಇ ವೈಶಿಷ್ಟ್ಯ

ಯಮಾಹಾ ಅಡ್ವಾನ್ಸಡ್‌ ಮೋಟಾರ್‌ ಕಂಟ್ರೋಲ್ ಮತ್ತು ರೈಡ್‌–ಬೈ–ವೈರ್‌ ನಿಖರತೆಯನ್ನು ಹೊಂದಿದೆ.

ಇದು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಸಿಂಗಲ್-ಚಾನೆಲ್ ABS ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಡಿಟ್ಯಾಚೇಬಲ್ ಡ್ಯುಯಲ್ ಬ್ಯಾಟರಿ ಸೆಟಪ್, ಸ್ಮಾರ್ಟ್ ಕೀ ಸಿಸ್ಟಮ್ ಮತ್ತು ಔಟ್‌ಸೈಡ್‌ ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ: Tata Bikes: ಟಾಟಾ 125 ಸಿಸಿ ಬೈಕ್! ಬರೀ ಇಷ್ಟೇ ಬೆಲೆಗೆ ಸಿಗೋದು ಹೌದಾ?

ಈ ಎಲ್ಲಾ ವೈಶಿಷ್ಟ್ಯಗಳು ICE ಸ್ಕೂಟರ್‌ಗಳಿಗೆ ಹೋಲಿಸಿದರೆ ಉತ್ತಮ ಸವಾರಿ ಅನುಭವವನ್ನು ಒದಗಿಸಲು ಸಂಯೋಜಿಸಿದಂತೆ ಕಾಣಿಸುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories