ಹುಂಡೈನ ಈ ಕಾರುಗಳ ಮೇಲೆ 1 ಲಕ್ಷದವರೆಗೆ ಭಾರಿ ರಿಯಾಯಿತಿ ! ಆಫರ್‌ ಮುಗಿಯುವ ಮೊದಲು ಕಾರ್‌ ಬುಕ್‌ ಮಾಡಿ

ಹುಂಡೈ ಮೇ 2026 ರಲ್ಲಿ ತನ್ನ ಜನಪ್ರಿಯ ಕಾರುಗಳ ಮೇಲೆ 1 ಲಕ್ಷದವರೆಗೆ ಅಧಿಕ ಭಾರಿ ರಿಯಾಯಿತಿ ನೀಡುತ್ತಿದೆ. ಹೊಸ ಕಾರು ಖರೀದಿಸುವ ಯೋಚನೆಯಿದ್ದರೆ ಈ ಅವಕಾಶ ಮಿಸ್‌ ಮಾಡ್ಕೋಬೇಡಿ.

ನೀವು ಮೇ ತಿಂಗಳಲ್ಲಿ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗಾಗಿ ಒಂದು ಒಳ್ಳೆ ಸುದ್ದಿ ಇದೆ. ಹುಂಡೈ ಕಂಪನಿ ಹೊಸ ಕಾರು ಖರೀದಿಯಲ್ಲಿ 1 ಲಕ್ಷ ರೂ.ಗಳ ವರೆಗೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಈ ಕೊಡುಗೆಯು ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು, ಸ್ಕ್ರ್ಯಾಪೇಜ್ ಇನ್ಸೆಂಟಿವ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳಂತಹ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಹೊಸ ಕಾರು ಖರೀದಿಸುವವರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಹುಂಡೈ ಈ ರಿಯಾಯಿತಿ ಆಫರ್‌ಗಳನ್ನು ಮೇ ತಿಂಗಳ ಖರೀದಿಗೆ ಸೀಮಿತಗೊಳಿಸಿದೆ. ಹಾಗಾದರೆ ಹುಂಡೈನ ಯಾವ ಕಾರುಗಳಿಗೆ ಹೆಚ್ಚು ರಿಯಾಯಿತಿಗಳಿವೆ ಎಂದು ಒಂದೊಂದಾಗಿ ತಿಳಿಯೋಣ.

ಹುಂಡೈ ಕ್ರೆಟಾ ಮೇಲೆ ಅತ್ಯಧಿಕ ರಿಯಾಯಿತಿ

ಹುಂಡೈನ ಕ್ರೆಟಾ ಕಾರು ಕಂಪನಿಯ ಅತ್ಯಂತ ಜನಪ್ರಿಯ ಕಾರುಗಳಲ್ಲೊಂದು. ಎಸ್‌ಯುವಿ ಕಾರು ಇಷ್ಟಪಡುವವರಿಗೆ ಇದು ಕ್ರೆಟಾ ಉತ್ತಮ ಆಯ್ಕೆಯಾಗಿದೆ. ಈ ಎಸ್‌ಯುವಿ ಮೇ 2026 ರ ಖರೀದಿಯಲ್ಲಿ ಅತ್ಯಧಿಕ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರನ್ನು ಕೊಳ್ಳುವುದರಿಂದ 1 ಲಕ್ಷದ ವರೆಗೆ ಉಳಿತಾಯ ಮಾಡಬಹುದು. ಇದರಲ್ಲಿ 20,000 ರೂಗಳ ನಗದು ರಿಯಾಯಿತಿ, 50,000 ರೂ.ಗಳ ಸ್ಕ್ರ್ಯಾಪೇಜ್ ಇನ್ಸೆಂಟಿವ್‌, ಮತ್ತು 30,000 ರೂ.ಗಳ ವಿನಿಮಯ ಬೋನಸ್‌ ಸೇರಿವೆ.

ಹುಂಡೈ ಅಲ್ಕಾಜರ್ ಮತ್ತು ಕ್ರೆಟಾ ಇವಿ

ಹುಂಡೈನ ಅಲ್ಕಾಜಾರ್‌ನ ಪೆಟ್ರೋಲ್ ಮಾದರಿಯಲ್ಲಿ 85,000 ರೂ. ವರೆಗೆ ರಿಯಾಯಿತಿ ನೀಡಿದರೆ, ಕ್ರೆಟಾ ಇವಿಯ ಮೇಲೆ 85,000 ರೂ.ವರೆಗೆ ಉಳಿತಾಯ ಮಾಡಬಹುದು. ಇದರಲ್ಲಿ 40,000 ರೂ. ನಗದು ರಿಯಾಯಿತಿ, 25,000 ರೂ. ಸ್ಕ್ರ್ಯಾಪೇಜ್ ಬೋನಸ್ ಮತ್ತು 20,000 ರೂ. ವಿನಿಮಯ ಬೋನಸ್ ಸೇರಿವೆ. ಆದರೆ ಕ್ರೆಟಾ ಇವಿಯಲ್ಲಿ ಕಾರ್ಪೊರೇಟ್ ಮತ್ತು ಗ್ರಾಮೀಣ ರಿಯಾಯಿತಿಗಳು ಪ್ರತ್ಯೇಕವಾಗಿ ಸೇರಿವೆ.

ಇದನ್ನೂ ಓದಿ: ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿರುವ ಟಾಟಾ ಮೋಟಾರ್ಸ್‌: ಇವಿ ವಿಭಾಗದಲ್ಲೂ ಪ್ರಾಬಲ್ಯ ಪ್ರದರ್ಶನ

ಹ್ಯಾಚ್‌ಬ್ಯಾಕ್‌ ಮತ್ತು ಸೆಡಾನ್‌ ಕಾರುಗಳ ಮೇಲೂ ಇದೆ ರಿಯಾಯಿತಿ

ಗ್ರ್ಯಾಂಡ್ ಐ10 ನಿಯೋಸ್ ಕಾರು, 30,000 ರೂ. ನಗದು ರಿಯಾಯಿತಿ ಸೇರಿದಂತೆ ಒಟ್ಟು 68,000 ರೂ. ವರೆಗಿನ ಲಾಭದೊಂದಿಗೆ ಲಭ್ಯವಿದೆ. ಹುಂಡೈ ಐ20 ಕಾರು 25,000 ರೂ. ನಗದು ರಿಯಾಯಿತಿ ಸೇರಿದಂತೆ 65,000 ರೂ. ವರೆಗಿನ ರಿಯಾಯಿತಿ ಪಡೆದುಕೊಂಡಿದೆ. ವೆರ್ನಾ ಮತ್ತು ಎಕ್ಸ್‌ಟೆ ಕಾರುಗಳು 55,000 ರೂ. ವರೆಗಿನ ಗರಿಷ್ಠ ಪ್ರಯೋಜನಗಳೊಂದಿಗೆ ಲಭ್ಯವಿದೆ.

ಹುಂಡೈ ಔರಾ ಮೇಲೆ 15,000 ರೂ.ಗಳ ರಿಯಾಯಿತಿ ಇದ್ದರೆ, ವೆನ್ಯೂ ಮತ್ತು ವೆನ್ಯೂ ಎನ್ ಲೈನ್ ಎರಡೂ ಮಾದರಿಗಳಲ್ಲಿ ಕೇವಲ 5,000 ರೂ.ಗಳ ಅತ್ಯಂತ ಕಡಿಮೆ ಸ್ಕ್ರ್ಯಾಪೇಜ್ ಬೋನಸ್ ನೀಡಲಾಗಿದೆ.

ಈ ಆಫರ್‌ ಎಲ್ಲಿಯವರೆಗೆ?

ಹುಂಡೈನ ಈ ಆಫರ್ ಮೇ 31, 2026 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಆಫರ್‌ಗಳ ಲಾಭ ಪಡೆಯುವ ಬಯಕೆಯಿದ್ದರೆ, ಮೇ ತಿಂಗಳು ಮುಗಿಯುವುದ ಮೊದಲು ನಿಮ್ಮ ಇಷ್ಟದ ಕಾರನ್ನು ಬುಕ್‌ ಮಾಡಿ. ನಗರವನ್ನು ಅವಲಂಬಿಸಿ ಆಫರ್‌ಗಳು ಬದಲಾಗಬಹುದು. ಹೆಚ್ಚಿನ ಮಾಹಿತಿ ಮತ್ತು ಆಫರ್ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಹುಂಡೈ ಶೋ ರೂಂ ಅನ್ನು ಸಂಪರ್ಕಿಸಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories