ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿರುವ ಟಾಟಾ ಮೋಟಾರ್ಸ್‌: ಇವಿ ವಿಭಾಗದಲ್ಲೂ ಪ್ರಾಬಲ್ಯ ಪ್ರದರ್ಶನ

ಕಳೆದ ತಿಂಗಳು ಅಂದರೆ ಏಪ್ರಿಲ್‌ 2026 ಟಾಟಾ ಮೊಟಾರ್ಸ್‌ ಪಾಲಿಗೆ ಸಂತಸ ತಂದಿದೆ. ಕಂಪನಿ ಏಪ್ರಿಲ್‌ ತಿಂಗಳಿನಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಒಟ್ಟು 59,701 ವಾಹನಗಳನ್ನು ಮಾರಾಟಮಾಡಿದೆ.

ದೇಸೀ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ತನ್ನ ನಾನಾ ಬಗೆಯ ವಾಹನಗಳನ್ನು ಮಾರಾಟ ಮಾಡುತ್ತದೆ. ಕಳೆದ ತಿಂಗಳು ಅಂದರೆ ಏಪ್ರಿಲ್‌ 2026 ಟಾಟಾ ಮೊಟಾರ್ಸ್‌ ಪಾಲಿಗೆ ಸಂತಸ ತಂದಿದೆ. ಕಂಪನಿ ಏಪ್ರಿಲ್‌ ತಿಂಗಳಿನಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಒಟ್ಟು 59,701 ವಾಹನಗಳನ್ನು ಮಾರಾಟಮಾಡಿದೆ. ಕಳೆದ ವರ್ಷ ಏಪ್ರಿಲ್‌ 2025 ರಲ್ಲಿ ಟಾಟಾ ಎಲ್ಲ ಸೇರಿ 45,532 ಯೂನಿಟ್‌ ಮಾರಾಟ ಮಾಡಿತ್ತು. ಅಂದರೆ ಈ ವರ್ಷ ಅದು 31.1% ಹೆಚ್ಚು ವಾಹನಗಳನ್ನು ಮಾರಾಟ ಮಾಡಿ ಲಾಭ ಗಳಿಸಿದೆ. ಟಾಟಾದ ವಾಹನಗಳ ಮಾರಾಟದಲ್ಲಿ ಭಾರತದ ಪಾಲು ಬಹಳ ದೊಡ್ಡದಿದೆ. ಭಾರತದಲ್ಲಿ 59,000 ಯೂನಿಟ್‌ ಮಾರಾಟ ಮಾಡಿದ್ದರೆ, ಜಗತ್ತಿನ ಇತರ ಭಾಗಗಳಲ್ಲಿ 701 ವಾಹಾನಗಳನ್ನು ಮಾರಾಟಮಾಡಿದೆ. ಈ ರೀತಿಯ ರಫ್ತು ಮಾರಾಟದಲ್ಲಿ ಸುಮಾರು 110.5% ರಷ್ಟು ಭಾರಿ ಹೆಚ್ಚಳವನ್ನ ದಾಖಲುಮಾಡಿದೆ. ಈ ಅಂಕಿಅಂಶಗಳನ್ನು ನೋಡಿದರೆ ವಿದೇಶಿ ಮಾರುಕಟ್ಟೆಗಳಲ್ಲಿಯೂ ತನ್ನ ಹಿಡಿತ ಸಾಧಿಸಲಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಬಲಿಷ್ಠ ಬೆಳವಣಿಗೆಯತ್ತ ಇವಿ ವಿಭಾಗ

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ (ಇವಿ) ವಿಭಾಗದಲ್ಲಿಯೂ ಬಲವಾದ ಬೆಳವಣಿಗೆಯನ್ನು ಕಂಡಿದೆ. ಕಂಪನಿಯು ಭಾರತ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 9,150 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 5,318 ಯುನಿಟ್‌ ಮಾರಾಟಮಾಡಿದೆ. ಇದು ಇವಿ ಮಾರಾಟದಲ್ಲಿ ಸರಿಸುಮಾರು 72.1% ರಷ್ಟು ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ. ಇದಕ್ಕೆ ಕಂಪನಿಗೆ ಇವಿ ವಾಹನಗಳ ಅಳವಡಿಕೆಯಲ್ಲಿರುವ ಆಸಕ್ತಿ ಪ್ರದರ್ಶಿಸುತ್ತದೆ.

ಇದನ್ನೂ ಓದಿ: ಟಾಟಾ ಪಂಚ್‌ಗೆ ಠಕ್ಕರ್‌ ಕೊಡಲು ಬರ್ತಿದೆ ಮಾರುತಿಯ ಹೊಸ SUV : ಕಡಿಮೆ ಬಜೆಟ್‌, ಸಿಕ್ಕಾಪಟ್ಟೆ ಮೈಲೇಜ್‌..!

ಟಾಟಾದ ಒವೊ ಪೋರ್ಟ್‌ಫೋಲಿಯೊದಲ್ಲಿ ಹ್ಯಾರಿಯರ್‌ ಇವಿ,ಕರ್ವ್‌ ಇವಿ, ನೆಕ್ಸಾನ್‌ ಇವಿ, ಟಿಯಾಯೊ ಇವಿ ಮತ್ತು ಟಾಗೊರ್‌ ಇವಿ ಸೇರಿದೆ. ಇದಲ್ಲದೆ, ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಟಾಟಾ ಸಿಯೆರಾದ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಎಲೆಕ್ಟ್ರಿಕ್ ವಾಹನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಯೋಜಿಸಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories