ಸಿಎನ್‌ಜಿಯಲ್ಲಿ ಬಿಡುಗಡೆಯಾದ ಕಿಯಾ ಕ್ಯಾರೆನ್ಸ್: ಬೆಲೆ ಮತ್ತು ವೈಶಿಷ್ಟ್ಯ ಏನು?
Kia Carens CNG Car: ಭಾರತದ ವಾಹನ ಪ್ರಪಂಚದಲ್ಲಿ ಕಿಯಾ ಅನೇಕ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಈಗ ಕಿಯಾ ಇಂಡಿಯಾ ತನ್ನ ಜನಪ್ರಿಯ ಕ್ಯಾರೆನ್ಸ್ MPV ಶ್ರೇಣಿಗೆ ಸಿಎನ್‌ಜಿ ಆಯ್ಕೆಯನ್ನು ಸೇರಿಸಿ ಬಿಡುಗಡೆಮಾಡಿದೆ.
11.77 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆ ನಿಗದಿಪಡಿಸಿದೆ. ಈಗಿರುವ ಪ್ರೀಮಿಯಂ ಪೆಟ್ರೋಲ್ MT ವೇರಿಯಂಟ್‌ನ 10.99 ಲಕ್ಷ ರೂ. ಬೆಲೆಗಿಂತ 77,900 ರೂ. ಅಧಿಕವಾಗಿದೆ.
ಲೊವಾಟೋ ಅಭಿವೃದ್ಧಿಪಡಿಸಿದ ಈ ಸಿಎನ್‌ಜಿ ಕಿಟ್ ಅನ್ನು ಸರ್ಕಾರದಿಂದ ಅನುಮೋದಿಸಲ್ಪಟ್ಟಿದೆ . ಇದು ಮೂರು ವರ್ಷ ಅಥವಾ 1 ಲಕ್ಷ ಕಿಲೋಮೀಟರ್‌ಗಳ ಥರ್ಡ್ ಪಾರ್ಟಿ ವ್ಯಾರಂಟಿಯನ್ನು ನೀಡುತ್ತದೆ.
ಡೀಲರ್ ಮಟ್ಟದ ಫಿಟ್‌ಮೆಂಟ್ ಆಗಿ ಸಿಎನ್‌ಜಿ ಆಯ್ಕೆಯನ್ನು ನೀಡಲಾಗುತ್ತಿದೆ. ವಾಹನ ಖರೀದಿದಾರರು ಕಾರಿನ ಮೂಲ ರಚನೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಈ ವೈಶಿಷ್ಟ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಕಿಯಾ ಕ್ಯಾರೆನ್ಸ್ ಎಂಜಿನ್ ವೈಶಿಷ್ಟ್ಯ
ಕಿಯಾ ಕ್ಯಾರೆನ್ಸ್ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು. ಅದೆಂದರೆ ಸ್ಮಾರ್ಟ್‌ಸ್ಟ್ರೀಮ್ G1.5 T-GDi 6iMT, ಸ್ಮಾರ್ಟ್‌ಸ್ಟ್ರೀಮ್ G1.5 6MT, ಮತ್ತು 1.5L CRDi VGT 6MT.
ಕಿಯಾ ಕ್ಯಾರೆನ್ಸ್ ನಲ್ಲಿ 15 ಮತ್ತು 16 ಇಂಚಿನ ಟೈರ್‌ಗಳು, ಹ್ಯಾಲೊಜೆನ್ ಲ್ಯಾಂಪ್‌ಗಳು, ಹ್ಯಾಲೊಜೆನ್ ಟೈಲ್ ಲ್ಯಾಂಪ್‌ಗಳು, ಶಾರ್ಕ್ ಫಿನ್ ಆಂಟೆನಾ, ಟಿಲ್ಟ್ ಸ್ಟೀರಿಂಗ್, ಪವರ್ ವಿಂಡೋಸ್, ರಿಯರ್ ವ್ಯೂ ಕ್ಯಾಮೆರಾ ಇದೆ.
12.5 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಂಟು ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಸೆಮಿ ಲೆದರೆಟ್ ಸೀಟುಗಳು, ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಕೀಲೆಸ್ ಎಂಟ್ರಿ, ಏಳು ಬಣ್ಣ ಆಯ್ಕೆಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.
ಹೇಗಿದೆ ಸುರಕ್ಷತೆ?
ಕಿಯಾ ಕ್ಯಾರೆನ್ಸ್ ABS, EBD, ESC, HAC, VSM, DBC, ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸಂವೇದಕ, ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ISOFIX ಚೈಲ್ಡ್ ಆಂಕಾರೇಜ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ.
ಯಾವುದಕ್ಕೆ ಸ್ಪರ್ಧೆ ನೀಡಲಿದೆ?
ಕಿಯಾ ಬಜೆಟ್ MPV ವಿಭಾಗದಲ್ಲಿ ಕ್ಯಾರೆನ್ಸ್ ಸಿಎನ್‌ಜಿ ಅನ್ನು ನೀಡುತ್ತಿದೆ ಮತ್ತು ಈ ವಿಭಾಗದಲ್ಲಿ ಇದು ಮಾರುತಿ ಎರ್ಟಿಗಾ ಜೊತೆ ನೇರವಾಗಿ ಸ್ಪರ್ಧಿಸುತ್ತದೆ.
ಇದನ್ನೂ ಓದಿ: ಹುಂಡೈನಿಂದ ಸ್ಕೋಡಾವರೆಗೆ: ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದೆ 5 ಅದ್ಭುತ SUVಗಳು
(Kia launched Carens CNG variant in India Know the price and specifications)



