ಹುಂಡೈನಿಂದ ಸ್ಕೋಡಾವರೆಗೆ: ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದೆ 5 ಅದ್ಭುತ SUVಗಳು

Upcoming SUVs: ಭಾರತದ ವಾಹನ ಮಾರುಕಟ್ಟೆಯಲ್ಲಿ ಈಗ SUV ಕಾರುಗಳದ್ದೇ ಕಾರುಬಾರು. ಇತರ ವಿಭಾಗಗಳಿಗೆ ಹೋಲಿಸಿದರೆ ಹೆಚ್ಚಿನ ಬೇಡಿಕೆಯಿದೆ.

ನಗರ, ಹಳ್ಳಿ ಎಲ್ಲಾ ರೋಡ್‌ಗಳಿಗೂ ಹೊಂದಿಕೆಯಾಗುವ ಈ ಕಾರುಗಳಿಗೆ ವಾಹನ ಪ್ರಪಂಚದಲ್ಲಿ ಬಹು ಬೇಡಿಕೆ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಕಾರು ತಯಾರಿಕಾ ಕಂಪನಿಗಳು ಸಹ ಹಲವಾರು ಹೊಸ ಹೊಸ ಎಸ್‌ಯುವಿ ಕಾರುಗಳನ್ನು ಪರಿಚಯಿಸುತ್ತಿದ್ದಾರೆ.

ಮುಂಬರುವ ತಿಂಗಳಿನಲ್ಲಿ ಕೆಲವು ಪ್ರಮುಖ ಕಾರು ತಯಾರಿಕಾ ಕಂಪನಿಗಳು ಎಸ್‌ಯುವಿ ಕಾರುಗಳನ್ನು ಪರಿಚಯಿಸಲಿದ್ದಾರೆ. ಅದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಬಿಡುಗಡೆಗೆ ಸಜ್ಜಾಗಿ ನಿಂತ ಹುಂಡೈ ವೆನ್ಯೂ

ಹುಂಡೈ ಕಂಪನಿಯು ಭಾರತದ ವಾಹನ ಮಾರುಕಟ್ಟೆಯಲ್ಲಿ ವೆನ್ಯೂ ಕಾರನ್ನು ಕಾಂಪ್ಯಾಕ್ಟ್‌ ಎಸ್‌ಯುವಿ ವಿಭಾಗದಲ್ಲಿ ಮಾರಾಟ ಮಾಡುತ್ತಿದೆ.

ಕಂಪನಿಯು ನವೆಂಬರ್‌ 4 ರಂದು ಈ ಎಸ್‌ಯುವಿಯ ಹೊಸ ಪೀಳಿ ಹೊಸ ವೆನ್ಯೂವನ್ನು ಭಾರತದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಈ ಹೊಸ ವೆನ್ಯೂ ಬಗ್ಗೆ ವಿವಿರಗಳನ್ನು ಕಂಪನಿಯು ಇತ್ತೀಚೆಗಷ್ಟೆ ಬಿಡುಗಡೆ ಮಾಡಿತ್ತು. ಹಲವಾರು ಬದಲಾವಣೆಗಳೊಂದಿಗೆ ಮುಂದಿನ ತಿಂಗಳು ಬಿಡುಗಡೆಯಾಗಲು ಹುಂಡೈ ವೆನ್ಯೂ ಸಜ್ಜಾಗಿದೆ.

ಟಾಟಾ ಸಿಯೆರಾ

ದೇಶದ ಪ್ರತಿಷ್ಠಿತ ವಾಹನ ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾದ ಟಾಟಾ, ನವೆಂಬರ್‌ ಅಂತ್ಯದ ವೇಳೆಗೆ ಟಾಟಾ ಸಿಯೆರಾವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇದಕ್ಕೆ ಹೊಂದಿಕೊಂಡಿರುವ ರೂಪಾಂತರವನ್ನು ಈ ಹಿಂದೆ 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

ರೆನಾಲ್ಟ್‌ ಡಸ್ಟರ್‌

ರೆನಾಲ್ಟ್‌ ಸಹ ತನ್ನ ಹೊಸ ಪೀಳಿಗೆ ಡಸ್ಟರ್‌ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇನ್ನೂ ಅಧಿಕೃತ ದಿನಾಂಕ ಬಹಿರಂಗವಾಗಿಲ್ಲವಾದರೂ ಮುಂಬರುವ ತಿಂಗಳಿನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಬೇರೆ ದೇಶಗಳಲ್ಲಿ ಈ ಕಾರಿನ ಹೆಸರನ್ನು ರೆನಾಲ್ಟ್‌ ಬದಲು ಡೇಸಿಯಾ ಡ್ಸಟರ್‌ ಎಂದು ನೀಡಲಾಗುತ್ತಿದೆ. ಈ ಎಸ್‌ಯುವಿ ಹೈಬ್ರಿಡ್‌ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸದ್ಯದಲ್ಲೇ ಲಾಂಚ್ ಆಗಲಿದೆ ಹುಂಡೈನ ಹೊಸ ವೆನ್ಯೂ: ಟೀಸ‌ರ್ ಬೆನ್ನಲ್ಲೇ ಬುಕಿಂಗ್‌ಗೂ ಅವಕಾಶ

ನಿಸ್ಸಾನ್‌ ಟೆಕ್ಸಾನ್‌

ನಿಸ್ಸಾನ್‌ ಇತ್ತೀಚೆಗೆ ಟೆಕ್ಸಾನ್‌ ಎಸ್‌ಯುವಿಯ ಮೊದಲ ನೋಟವನ್ನು ಟೀಸರ್‌ ಮೂಲಕ ಬಹಿರಂಗಪಡಿಸಿತ್ತು. ಮುಂದಿನ ವರ್ಷದ ಆರಂಭದಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇದನ್ನು ರೆನಾಲ್ಟ್‌ ಡಸ್ಟರ್‌ ಪ್ಲಾಟ್‌ಫಾರ್ಮ್‌ನಂತೆಯೇ ನಿರ್ಮಿಸು ಸಾಧ್ಯತೆಯಿದ್ದರೂ ಎರಡೂ ಎಸ್‌ಯುವಿಗಳು ಹಲವಾರು ಬದಲಾವಣೆಗಳನ್ನು ಹೊತ್ತು ತರುವ ನಿರೀಕ್ಷೆಯಿದೆ.

ಸ್ಕೋಡಾ ಕುಶಾಕ್‌ ಫೇಸ್‌ಲಿಫ್ಟ್‌

ವರದಿಗಳ ಪ್ರಕಾರ ಸ್ಕೋಡಾ ಕಂಪನಿ ಕುಶಾಕ್‌ ಎಸ್‌ಯುವಿಯನ್ನು ಫೇಸ್‌ಲಿಫ್ಟ್‌ ಮಾಡಲು ಸಕಲ ತಯಾರಿ ನಡೆಸುತ್ತಿದೆ. ಬಿಡುಗಡೆಗೂ ಮುನ್ನ, ಇದನ್ನು ಭಾರತದ ರಸ್ತೆಗಳಲ್ಲಿ ಹಲವಾರು ಬಾರಿ ಪರೀಕ್ಷಿಸುತ್ತಿರುವುದು ಕಂಡುಬಂದಿದೆ.

ಇದರರ್ಥ ಈ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಇದರ ಸೈಡ್‌ ಪ್ರೊಫೈಲ್‌ ಮಾತ್ರ ಈಗಿರುವ ಆವೃತ್ತಿಯಂತೇ ಇರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಜಪಾನ್ ಮೊಬಿಲಿಟಿ ಶೋ 2025 ರಲ್ಲಿ ಪ್ರದರ್ಶನಗೊಳ್ಳಲಿರುವ ಮಾರುತಿಯ 4 ಕಾರುಗಳು

(Here are the details about SUVs in the next few months in India upcoming New SUVs)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories