ಹೊಸ ವರ್ಷಕ್ಕೆ ಮಹೀಂದ್ರಾದ್ದೇ ಸೌಂಡು: ಟೀಸರ್‌ನಿಂದ ಬಹಿರಂಗವಾಯ್ತು 7XO ದ ಹೊಸ ವೈಶಿಷ್ಟ್ಯ
Mahinda XUV 7XO: ಭಾರತದಲ್ಲಿ ಈಗ XUV ಕಾರುಗಳದ್ದೇ ಹವಾ. ಕಾರು ಕೊಳ್ಳುವವರು ಮೊದಲಿನ ಆಯ್ಕೆಯೂ ಅದೇ. ಸುರಕ್ಷಿತ, ಆರಾಮದಾಯಕ, ಚಾಲಕ ಸ್ನೇಹಿಯಾಗಿರುವ ಈ ಕಾರುಗಳು ಸದ್ಯದ ಟ್ರೆಂಡ್ ಕೂಡಾ ಹೌದು.
ಅದಕ್ಕಾಗಿಯೇ ಭಾರತದ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ XUV ಸೇರ್ಪಡೆಯಾಗುತ್ತಿವೆ. ಮಹೀಂದ್ರದ XUV ಕಾರುಗಳು ದೊಡ್ಡ ಸಂಚಲನವನ್ನೇ ಮೂಡಿಸಿವೆ.
ಬಹು ವಿಭಾಗಗಳಲ್ಲಿ ವಾಹನಗಳನ್ನು ಮಾರಾಟ ಮಾಡುವ ಮಹೀಂದಾ ಶೀಘ್ರದಲ್ಲೇ ಹೊಸ XUV 7XO ಅನ್ನು ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ.
ಬಿಡುಗಡೆಗೂ ಮುನ್ನ ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಇದರ ಮತ್ತೊಂದು ವೈಶಿಷ್ಟ್ಯದ ಕುರಿತು ವಿವರಗಳನ್ನು ಹಂಚಿಕೊಂಡಿದೆ.
ಮಹೀಂದ್ರಾ ತನ್ನ ಹೊಸ ಎಸ್‌ಯುವಿ, ಮಹೀಂದ್ರಾ XUV 7XO ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿಕೊಂಡಿರುವ ಬೆನ್ನಲ್ಲೇ ಕಾರಿನ ಹೊಸ ಹೊಸ ವೈಶಿಷ್ಟ್ಯಗಳನ್ನು ಟೀಸ್ ಮಾಡುತ್ತಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹೊಸ ಟೀಸರ್ ಪ್ರಕಾರ ಇದರಲ್ಲಿ ಮತ್ತೊಂದು ಪ್ರಭಾವಶಾಲಿ ವೈಶಿಷ್ಟ್ಯವನ್ನು ವಾಹನ ಸವಾರರು ಪಡೆಯಬಹುದು ಎಂಬುದನ್ನು ಬಹಿರಂಗಪಡಿಸಿದೆ.
ಯಾವ ಹೊಸ ವೈಶಿಷ್ಟ್ಯ?
ತಯಾರಕರು ಬಿಡುಗಡೆ ಮಾಡಿದ ಹೊಸ ಟೀಸರ್ ಆಧಾರದ ಮೇಲೆ ಇದು ಆಡಿಯೊ ಸಿಸ್ಟಮ್‌ಗೆ ಸಂಬಂಧಿಸಿದ ವೈಶಿಷ್ಟ್ಯವಾಗಿದೆ.
ಅದೇನೆಂದರೆ XUV 7XO ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ. ಇದು ಡಾಲ್ಬಿ ಅಟ್ಮೋಸ್‌ನಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.
ಬೇರೆ ಯಾವ ಹೊಸ ವೈಶಿಷ್ಟ್ಯ ಇದರಲ್ಲಿದೆ?
ಮಹೀಂದ್ರಾ ಈ ಹಿಂದೆ ಬಿಡುಗಡೆಮಾಡಿರುವ ಟೀಸರ್‌ಗಳ ಪ್ರಕಾರ ಹಲವಾರು ಇತರ ವೈಶಿಷ್ಟ್ಯಗಳು ಇದರಲ್ಲಿದೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.
ತಯಾರಕರು ದೃಢಪಡಿಸಿರುವ ವೈಶಿಷ್ಟ್ಯಗಳಲ್ಲಿ 540-ಡಿಗ್ರಿ ಕ್ಯಾಮೆರಾ, ಲೆವೆಲ್-2 ADAS, ಲೇನ್ ನಿರ್ಗಮನ ವ್ಯವಸ್ಥೆ, ಸನ್‌ರೂಫ್, ಹಿಂಭಾಗದ ಆಸನ ಪರದೆಗಳು, ಅಡ್ರಿನೊ ಮತ್ತು ಟ್ರಿಪಲ್ ಫ್ರಂಟ್-ಮೌಂಟೆಡ್ ಸ್ಕ್ರೀನ್ ಗಳು ಸೇರಿವೆ.
ಇದನ್ನೂ ಓದಿ: ಭಾರಿ ರಿಯಾಯಿತಿ ಟೆಕ್ನಿಕ್‌ನೊಂದಿಗೆ ಸದ್ದು ಮಾಡಲು ಸಜ್ಜಾಗಿರುವ ಕವಾಸಕಿ ನಿಂಜಾ 300 ಬೈಕ್
ಪ್ರೀ ಬುಕಿಂಗ್ ಪ್ರಾರಂಭವಾಗಿದೆಯಾ?
ಮಹೀಂದ್ರಾ XUV 7XO ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ ಆರಂಭವಾಗಿದೆ. ತಯಾರಕರು ₹21,000 ಠೇವಣಿ ಪಾವತಿಸಿ ಆನ್‌ಲೈನ್‌ನಲ್ಲಿ ಮತ್ತು ಡೀಲರ್‌ಶಿಪ್‌ಗಳ ಮೂಲಕ ಈ ಎಸ್‌ಯುವಿಯನ್ನು ಬುಕ್ ಮಾಡಬಹುದು ಎಂದು ಘೋಷಿಸಿದ್ದಾರೆ.
ಬಿಡುಗಡೆ ಯಾವಾಗ?
ಮಹೀಂದ್ರಾದಿಂದ ಬಂದಿರುವ ಮಾಹಿತಿಯ ಪ್ರಕಾರ, ಮಹೀಂದ್ರಾ XUV 7XO ಜನವರಿ 5, 2026 ರಂದು ಭಾರತದಲ್ಲಿ ಔಪಚಾರಿಕವಾಗಿ ಬಿಡುಗಡೆಯಾಗಲಿದೆ.



