ಸದ್ಯದಲ್ಲೇ ಲಾಂಚ್ ಆಗಲಿದೆ ಹುಂಡೈನ ಹೊಸ ವೆನ್ಯೂ: ಟೀಸರ್ ಬೆನ್ನಲ್ಲೇ ಬುಕಿಂಗ್‌ಗೂ ಅವಕಾಶ
New Hyundai Venue Facelift: ದಕ್ಷಿಣ ಕೊರಿಯಾದ ಕಾರು ತಯಾರಿಕಾ ಕಂಪನಿ ಹುಂಡೈ ಭಾರತದ ಮಾರುಕಟ್ಟೆಗೆ ಸೆಕೆಂಡ್ ಜನರೇಷನ್ ವೆನ್ಯೂ ಕಾರಿನ ಟೀಸರ್ ಅನಾವರಣಗೊಳಿಸಿದೆ.
ನವೆಂಬರ್‌ನಲ್ಲಿ ಬಿಡಗಡೆಯ ದಿನಾಂಕ ನಿಗದಿಯಾಗಿದ್ದರೂ 25,000 ಟೋಕನ್ ಮೊತ್ತಕ್ಕೆ ಬುಕಿಂಗ್ ತೆಗೆದುಕೊಳ್ಳಲು ಪ್ರಾರಂಭಿಸಿದೆ.
ಹುಂಡೈ ವೆನ್ಯೂ ಕಾರಿನ ಪರಿಷ್ಕರಣೆಯು ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸನ್, ಮಹೀಂದ್ರಾ XUV3XO ಮುಂತಾದವುಗಳಿಗೆ ನೇರ ಸ್ಪರ್ಧೆ ಒಡ್ಡಲಿದೆ.
ಹೊಸದಾಗಿ ಪರಿಷ್ಕರಣೆಗೊಂಡು ಮಾರುಕಟ್ಟೆಗೆ ಬಂದ ವೆನ್ಯ ನಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂದು ನೋಡೋಣ.
ಹೇಗಿದೆ ಹೊಸ ಹುಂಡೈ ವೆನ್ಯೂ ವಿನ್ಯಾಸ
ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ನವೀಕರಣಗೊಂಡ ವೆನ್ಯು, ಸಂಪೂರ್ಣವಾಗಿ ವಿಭಿನ್ನ ನೋಟವನ್ನು ಪಡೆದುಕೊಂಡಿದೆ.
ಅದರ ಮುಂಭಾಗದ ಬಾನೆಟ್‌ನಾದ್ಯಂತ ಚಲಿಸುವ ಹೊಸ ಎಲ್‌ಇಡಿ ಲೈಟ್ ಸ್ಟ್ರಿಪ್ ಪಡೆದುಕೊಂಡಿದೆ. ಹೆಡ್‌ಲೈಟ್‌ಗಳ ಪಕ್ಕದಲ್ಲಿ ಡೇಟೈಮ್ ರನ್ನಿಂಗ್ ಲೈಟ್‌ಗಳು (ಡಿಆರ್‌ಎಲ್‌ಗಳು) ಇವೆ.
ಇದು ಕಾರಿಗೆ ವಿಶಿಷ್ಟ ಮತ್ತು ಆಧುನಿಕ ನೋಟವನ್ನು ನೀಡುತ್ತದೆ. ಮುಂಭಾಗದ ಬಂಪರ್ ಕೆಳಗೆ ಸ್ಕಿಡ್ ಪ್ಲೇಟ್‌ಗಳನ್ನು ಮತ್ತು ಅದರ ಮೇಲೆ ಕ್ರಿಯಾತ್ಮಕ ರೂಫ್ ಹಳಿಗಳನ್ನು ಜೋಡಿಸಲಾಗಿದೆ.
ಹಿಂಭಾಗದ ವಿನ್ಯಾಸದಲ್ಲೂ ಬದಲಾವಣೆ ಕಾಣಬಹುದಾಗಿದೆ. ಮುಂಭಾಗದ ಸೊಗಸಾದ ನೋಟದಂತೆ ಹಿಂಭಾಗದ ನೋಟವನ್ನು ಸಹ ಕಾಯ್ದುಕೊಂಡಿದೆ.
ಕಪ್ಪು ಫಲಕದ ಎಲ್‌ಇಡಿ ಟೈಲ್‌ಲೈಟ್‌ಗಳು ಎದ್ದು ಕಾಣುತ್ತವೆ. ಮಿಶ್ರಲೋಹಗಳ ಚಕ್ರದ ವಿನ್ಯಾಸ ಇನ್ನಷ್ಟು ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತಿದೆ.
ಒಳಾಂಗಣ ಹೇಗಿದೆ?
ಇನ್ನು ಹುಂಡೈ ವೆನ್ಯೂ ಒಳಾಂಗಣವೂ ಸಹ ಸಾಕಷ್ಟು ಸ್ಟೈಲಿಶ್ ಆಗಿದೆ. ಡ್ಯುಯಲ್-ಟೋನ್ ಇಂಟೀರಿಯರ್ (ಡಾರ್ಕ್ ನೇವಿ ಮತ್ತು ಡವ್ ಗ್ರೇ) ಮತ್ತು ಮೂನ್ ವೈಟ್ ಆಂಬಿಯೆಂಟ್ ಲೈಟಿಂಗ್ ಹೊಂದಿರುವ ಕಾಫಿ-ಟೇಬಲ್ ರೀತಿಯ ಸೆಂಟ್ರಲ್ ಕನ್ಸೋಲ್ ಅನ್ನು ಒಳಗೊಂಡಿದೆ.
ಸೀಟುಗಳನ್ನು ಸಹ ಡ್ಯುಯಲ್-ಟೋನ್ ಲೆದರ್‌ನಲ್ಲಿ ಅಪ್‌ಹೋಲ್ಟರ್ ಮಾಡಲಾಗಿದೆ. ಹೊಸ ಡಿ-ಕಟ್ ಸ್ಟೀರಿಂಗ್ ವೀಲ್ ಮತ್ತು ಟೆರಾಝೊ ಟೆಕ್ಸ್ಚರ್ಡ್ ಕ್ರ್ಯಾಶ್ ಪ್ಯಾಡ್ ಗಾರ್ನಿಶ್ ಸಹ ಲಭ್ಯವಿದೆ. ಇದು 12.3-ಇಂಚಿನ + 12.3-ಇಂಚಿನ ಬಾಗಿದ ಪನೋರಮಿಕ್ ಡಿಸ್ಪ್ಲೇಯನ್ನು ಸಹ ಹೊಂದಿದೆ.
ಎಸ್ಯುವಿಯ ಕ್ಯಾಬಿನ್ ಹಿಂಭಾಗದ ಕಿಟಕಿ ಸನ್‌ಶೇಡ್, ಎಲೆಕ್ಟ್ರಿಕ್ 4-ವೇ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 2-ಸ್ಟೆಪ್ ರಿಕ್ಲೈನಿಂಗ್ ರಿಯರ್ ಸೀಟ್‌ಗಳು ಮತ್ತು ಹಿಂಭಾಗದ ಎಸಿ ವೆಂಟ್‌ಗಳನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಫ್ಯಾಮಿಲಿ ಕಾರ್: ಮಹೀಂದ್ರಾ ಬೊಲೆರೊ ನಿಯೊ ವೈಶಿಷ್ಟ್ಯ ಏನು?
ಎಂಜಿನ್ ಹೇಗಿದೆ?
ಹೊಸ ಹುಂಡೈ ವೆನ್ಯೂ 3 ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಕಪ್ಪಾ 1.2 ಲೀಟರ್ MPi ಪೆಟ್ರೋಲ್, ಕಪ್ಪಾ 1.0 ಲೀಟರ್ ಟರ್ಬೋ GDi ಪೆಟ್ರೋಲ್ ಮತ್ತು 1.5 ಲೀಟರ್ CRDi ಡೀಸಲ್ ನಲ್ಲಿ ಬರುತ್ತದೆ. ಟ್ರಾನ್ಸ್‌ಮಿಶನ್‌ನಲ್ಲಿಯೂ ಮ್ಯಾನ್ಯುವಲ್, ಆಟೋಮೆಟಿಕ್ ಮತ್ತು ಡ್ಯುವಲ್ ಟ್ರಾನ್ಸ್‌ಮಿಷನ್ ನಂತಹ 3 ಆಯ್ಕೆಗಳಿವೆ.
ಹುಂಡೈ ವೆನ್ಯೂ ವೇರಿಯಂಟ್‌ಗಳು
ಪೆಟ್ರೋಲ್ ಆವೃತ್ತಿಯಲ್ಲಿ HX2, HX4, HX5, HX6, HX6T, HX8 ಮತ್ತು HX10 ಗಳು ಸೇರಿವೆ. ಇನ್ನು ಡೀಸಲ್ ಆವೃತ್ತಿಯಲ್ಲಿ HX2, HX5, HX7 ಮತ್ತು HX10 ಗಳಲ್ಲಿ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಜಪಾನ್ ಮೊಬಿಲಿಟಿ ಶೋ 2025 ರಲ್ಲಿ ಪ್ರದರ್ಶನಗೊಳ್ಳಲಿರುವ ಮಾರುತಿಯ 4 ಕಾರುಗಳು
(Next Generation Hyundai Venue teaser out know the new features and booking details)



