ಘರ್ಜಿಸುತ್ತ ರೋಡಿಗಿಳಿದ Royal Enfield Scram 411; ಮಧ್ಯಮ ವರ್ಗದ ಆಫ್‌ ರೋಡಿಂಗ್ ಬೈಕ್ ಪ್ರಿಯರಿಗೆ ಹೇಳಿ ಮಾಡಿಸಿದ ಬೈಕ್ ಇದಂತೆ!

ರಾಯಲ್ ಎನ್‌ಫೀಲ್ಡ್ ಅಂತಿಮವಾಗಿ ಭಾರತದಲ್ಲಿ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು (Royal Enfield Scram 411) ಬಿಡುಗಡೆ ಮಾಡಿದೆ. ಇದು ಅತ್ಯಂತ ಜನಪ್ರಿಯ ಸಾಹಸ ಬೈಕ್ ಹಿಮಾಲಯನ್ ಸರಣಿಯ ಮುಂದುವರೆದ ಭಾಗವೇ ಆಗಿದೆ. ಆದರೂ Scram 411 ಮಾದರಿಯ ಬೈಕ್‌ನ್ನು ಅನ್ನು ರಸ್ತೆಗಳಲ್ಲಿ ಪ್ರಾಬಲ್ಯ ಸಾಧಿಸಲು ಮತ್ತು ಮಧ್ಯಮ ಆಫ್-ರೋಡಿಂಗ್‌ಗಾಗಿ ರೂಪಿಸಲಾಗಿದೆ. ಮೋಟಾರ್‌ಸೈಕಲ್ ಎಡಿವಿ ಕ್ರಾಸ್ಒವರ್ ಆಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನಲ್ಲಿರುವ 411cc, ಸಿಂಗಲ್-ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಚಾಲಿತವಾಗಿದೆ. ಎಂಜಿನ್‌ನಿಂದ ಉತ್ಪತ್ತಿಯಾಗುವ ಗರಿಷ್ಟ ಶಕ್ತಿಯು 24.3 bhp ಆಗಿದ್ದು, ಗರಿಷ್ಠ ಟಾರ್ಕ್ 32Nm ಆಗಿರುತ್ತದೆ. ಆದರೂ ಸ್ಕ್ರಾಮ್‌ನ ಮುಂಭಾಗದ ಚಕ್ರವು ಹಿಮಾಲಯನ್ ಮಾಡೆಲ್‌ಗಿಂತ ಚಿಕ್ಕದಾಗಿರುತ್ತದೆ.

ಹಿಮಾಲಯನ್ ಮುಂಭಾಗದಲ್ಲಿ 21 ಇಂಚಿನ ಚಕ್ರವನ್ನು ಹೊಂದಿದ್ದರೆ, ಸ್ಕ್ರಾಮ್ 19 ಇಂಚಿನ ಮುಂಭಾಗದ ಚಕ್ರವನ್ನು ಹೊಂದಿರುತ್ತದೆ. ಹಿಂದಿನ ಚಕ್ರವು ಹಿಮಾಲಯನ್ 17-ಇಂಚಿನ ವಿನ್ಯಾಸವನ್ನೇ ಹೊಂದಿರುತ್ತದೆ.

ಹಿಮಾಲಯದಂತೆಯೇ ಸ್ಕ್ರ್ಯಾಮ್ ಸ್ಪೋಕ್ಡ್ ಚಕ್ರಗಳು ಮತ್ತು 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ.

ಇದನ್ನೂ ಓದಿ: Mahindra Bolero Luxury Camper: ಮಹೀಂದ್ರಾ ಜೀಪ್‌ನಲ್ಲೇ ಅಡಿಗೆ, ಊಟ, ಸ್ನಾನ, ನಿದ್ದೆ, ಶೌಚ! ಐಷಾರಾಮಿ ಕಾರು ಭಾರತದಲ್ಲೂ ಬಿಡುಗಡೆ

ಹಿಮಾಲಯದ ಸ್ಪ್ಲಿಟ್ ಸೀಟ್ ವಿನ್ಯಾಸಕ್ಕಿಂತ ಭಿನ್ನವಾಗಿ ಸ್ಕ್ರಾಮ್ 411 ಒಂದೇ ಸೀಟ್ ಹೊಂದಿದೆ. ಹ್ಯಾಂಡಲ್‌ಬಾರ್ ಹಿಮಾಲಯನ್ ಮಾಡೆಲ್‌ನಂತೆಯೇ ಇದೆ. ಹ್ಯಾಂಡಲ್‌ಬಾರ್‌ನ ಎತ್ತರವು ಹಿಮಾಲಯನ್ ಮಾಡೆಲ್‌ಗಿಂತ ಎತ್ತರಕ್ಕಿಂತ ಹೆಚ್ಚಿಲ್ಲ. ಹಿಮಾಲಯನ್‌ನಲ್ಲಿ ಇರುವ ವಿಂಡ್‌ಸ್ಕ್ರೀನ್ ಅನ್ನು Scram ಹೊಂದಿಲ್ಲ.

ಸುರಕ್ಷತೆಯ ದೃಷ್ಟಿಯಿಂದ, ಬೈಕ್‌ನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು (ಮುಂಭಾಗ ಮತ್ತು ಹಿಂಭಾಗ) ಲಭ್ಯವಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದ್ದರೆ, ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆನ್ಷನ್ ಇದೆ. ಆಯಾಮಗಳಿಗೆ ಸಂಬಂಧಿಸಿದಂತೆ, ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 1455 ಎಂಎಂ ವ್ಹೀಲ್‌ಬೇಸ್, ಗ್ರೌಂಡ್ ಕ್ಲಿಯರೆನ್ಸ್ 200 ಎಂಎಂ ಮತ್ತು ಸೀಟ್ ಎತ್ತರ 795 ಎಂಎಂ ಹೊಂದಿದೆ. ಬೈಕ್‌ನ ಕರ್ಬ್ ತೂಕ 185 ಕೆ.ಜಿ ಆಗಿದ್ದರೆ ಇಂಧನ ಸಾಮರ್ಥ್ಯ 15 ಲೀಟರ್.

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ರ ಬಣ್ಣದ ಆಯ್ಕೆಗಳಿಗೆ ಬಂದಾಗ ಬಹು ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. ಬಿಳಿ, ಬೆಳ್ಳಿ, ಕಪ್ಪು, ನೀಲಿ, ಗ್ರ್ಯಾಫೈಟ್ ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ಮತ್ತೊಂದೆಡೆ ಬಳಕೆದಾರರು ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್ ಮತ್ತು ಬೈಕ್‌ನ ಸೆಂಟರ್ ಸ್ಟ್ಯಾಂಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ರಾಯಲ್ ಎನ್‌ಫೀಲ್ಡ್ ಬೈಕ್ ಸ್ಕ್ರಾಮ್ 411 ಎಕ್ಸ್ ಶೋ ರೂಂನ ಆರಂಭಿಕ ಬೆಲೆ 2.03 ಲಕ್ಷ ರೂ ಆಗಿದೆ.

ಇದನ್ನೂ ಓದಿ: Yamaha Neo Electric Scooter: ರಿಮೂವೇಬಲ್ ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದು!

(royal enfield scram 411 check price update)

Comments are closed.