Student’s mysterious death : ತರಗತಿಯಲ್ಲಿ ವಿದ್ಯಾರ್ಥಿನಿ ನಿಗೂಢ ಸಾವು

ಬೆಂಗಳೂರು : (Student’s mysterious death)ತರಗತಿಯಲ್ಲಿ ವಿದ್ಯಾರ್ಥಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.ಗಂಗಮ್ಮನಗುಡಿ ಆರ್‌ ಡಿ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ರಾಮಚಂದ್ರಪುರದ ನಿವಾಸಿ ನಾಗೇಂದ್ರ ಹಾಗೂ ಸರಸ್ವತಿ ದಂಪತಿಯ ಪುತ್ರಿ, ನಾಲ್ಕನೇ ತರಗತಿಯ ವಿದ್ಯಾರ್ಥಿನಿ ನಿಶ್ಚಿತಾ ಮೃತಪಟ್ಟ ವಿದ್ಯಾರ್ಥಿ(Student’s mysterious death)ಯಾಗಿದ್ದಾಳೆ.

ಶಾಲೆಯ ತರಗತಿ ಕೊಠಡಿಯಲ್ಲಿ ಪಾಠ ನಡೆಯುತ್ತಿರುವ ವೇಳೆಯಲ್ಲಿ ನಿಶ್ಚಿತಾ ಮೇಲೆ ಶಿಕ್ಷಕಿಯು ಹಲ್ಲೆ ನಡೆಸಿದ್ದರು. ಇದರಿಂದಾಗಿ ವಿದ್ಯಾರ್ಥಿನಿ ಪ್ರಜ್ಞಾಹೀನಳಾಗಿ ಕುಸಿದು ಬಿದ್ದಿದ್ದಾಳೆ. ಕೂಡಲೇ ವಿದ್ಯಾರ್ಥಿನಿಯನ್ನು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ(Student’s mysterious death).

ವಿದ್ಯಾರ್ಥಿನಿ ನಿಶ್ಚಿತಾ ತಂದೆ ನಾಗೇಂದ್ರ ಅವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಪತ್ನಿ ಹಾಗೂ ಇಬ್ಬರ ಮಕ್ಕಳೊಂದಿಗೆ ರಾಮಚಂದ್ರಪುರದಲ್ಲಿ ನೆಲೆಸಿದ್ದಾರೆ. ಮನೆ ಸಮೀಪದ ಶಾಲೆಯಲ್ಲಿ ನಿಶ್ಚಿತಾ ವ್ಯಾಸಂಗ ಮಾಡುತ್ತಿದ್ದಳು ಶುಕ್ರವಾರ ಮಧ್ಯಾಹ್ನ ಸರಿಸುಮಾರು 1:30 ರ ಹೊತ್ತಿಗೆ ನಿಶ್ಚಿತಾ ಪ್ರಜ್ಞೆ ತಪ್ಪಿದ್ದಾಳೆ . ಕೂಡಲೇ ಶಿಕ್ಷಕರು ಹಾಗೂ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವೀಡಿಯೋ ಶಾಲೆಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಮಗಳ ಸಾವಿನ ಕುರಿತು ನಿಶ್ಚಿತಾ ತಂದೆ ನಾಗೇಂದ್ರ ಅವರು ಗಂಗಮ್ಮನಗುಡಿ ಪೋಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ : Fridge Blast : ಪ್ರಿಡ್ಜ್ ಸ್ಪೋಟ ; ಮನೆಯಲ್ಲಿದ್ದ ಮೂವರು ಸಾವು , ಇಬ್ಬರಿಗೆ ಗಾಯ

ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ.”ವಿದ್ಯಾರ್ಥಿನಿ ನಿಶ್ಚಿತಾಳ ಸಾವಿಗೆ ಇನ್ನೂ ಕೂಡ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯಾಸತ್ಯತೆ ಬಯಲಾಗಲಿದೆ . ಆಕೆಯ ಪೋಷಕರಿಂದ ದೂರು ದಾಖಲಾಗಿದೆ . ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತಿದೆ .” ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ವಸಂತರಾವ್‌ ಪಾಟೀಲ್‌ ತಿಳಿಸಿದ್ದಾರೆ .

ಇದನ್ನೂ ಓದಿ : A terrible road accident : ಭೀಕರ ರಸ್ತೆ ಅಪಘಾತ : 6 ಮಂದಿ ಸಾವು, ಮೂವರು ಗಂಭೀರ

ಈ ಘಟನೆಯ ಕುರಿತು ಮಾತನಾಡಿದ ಬಾಲಕಿಯ ಅಜ್ಜಿ ನರ್ಸಮ್ಮ, ನಮ್ಮ ಮಗುವಿನ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿದ್ದಾರೆ. ಈ ಹಿಂದೆ ಕೂಡ ಡೆಸ್ಟರ್‌ನಿಂದ ಕಣ್ಣಿಗೆ ಹೊಡೆದಿದ್ದರು ಎಂದು ಆರೋಪಿಸಿದರು.ನಿನ್ನೆ ಕೂಡ ಹೊಡೆದಿದ್ದಾರೆ, ಅದೇ ಕಾರಣಕ್ಕೆ ಮಗು ಸಾವನ್ನಪ್ಪಿದೆ. ನಮಗೆ ವಿಚಾರ ತಿಳಿದು ಸ್ಕೂಲ್ ಬಳಿ ಹೋದಾಗ ಮಗುಗೆ ಪ್ರಜ್ಞೆ ಇರಲಿಲ್ಲ. ಅಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಈಗ ಸ್ಕೂಲ್‍ನವರು, 4 ಲಕ್ಷ ಪರಿಹಾರ ಕೊಡ್ತೀವಿ ಅಂತಿದ್ದಾರೆ. ನಮಗೆ ಹಣ ಬೇಡ, ನಮಗೆ ನ್ಯಾಯಬೇಕು. ಹಲ್ಲೆ ಮಾಡಿದ ಶಿಕ್ಷಕಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : Umesh Reddy: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದು: ಸುಪ್ರೀಂಕೋರ್ಟ್ ಆದೇಶ

ಇನ್ನೂ ನಿಶಿತಾಳ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ನಿಶಿತಾ ತನ್ನ ಸ್ಕೂಲ್‍ನಲ್ಲೇ ಓದುತ್ತಿದ್ದ ತಮ್ಮನನ್ನು ಮಧ್ಯಾಹ್ನ 1:30ರ ವೇಳೆ ಹೊರಗೆ ಕರೆದುಕೊಂಡು ಬಂದು ಅಜ್ಜಿ ಜೊತೆಗೆ ಬಿಟ್ಟು ಹೋಗಿದ್ದಳು. ಆದರೆ ಆಕೆಯನ್ನು 1:50ರ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಕೂಲ್‍ನ ಹೊರಗೆ ತಂದಿದ್ದಾರೆ. ಸಿಬ್ಬಂದಿಯೇ ಬೈಕ್‍ವೊಂದರಲ್ಲಿ ಕೂರಿಸಿಕೊಂಡು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ನಿಶಿತಾ ಮೃತಪಟ್ಟಿರುವ ವಿಚಾರ ತಿಳಿಸಿದ ನಂತರ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

(Student’s mysterious death) An incident in which a student died mysteriously in the classroom took place in a private school in Bangalore. This incident took place on Friday at Gangammanagudi RD International School. The daughter of Nagendra and Saraswati, a resident of Ramachandrapura, and a student of class four, Seshta is the student who died.

Comments are closed.