ನಾಳೆ ವಿಶ್ವದ ಎತ್ತರದ ವಿವೇಕಾನಂದರ ಪ್ರತಿಮೆ ಲೋಕಾರ್ಪಣೆ

0

ಉಡುಪಿ : ಜಗತ್ತಿನ‌ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಗಿಳಿಯಾರಿನಲ್ಲಿ ನಿರ್ಮಾಣಗೊಂಡಿದೆ. ಸುಮಾರು 35 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕನ್ಯಾಕುಮಾರಿಯಲ್ಲಿರೋ ವಿವೇಕಾನಂದ ಪ್ರತಿಮೆಯಂತೆಯೇ ಲೋಹದ ಲೇಪನ ಮಾಡಿದ್ದು, ವಿಶ್ವದ ಎತ್ತರದ ವಿವೇಕಾನಂದ ಪ್ರತಿಮೆ ನಾಳೆ ಲೋಕಾಪರ್ಣೆಗೊಳ್ಳಲಿದೆ.        
ಸಾಲಿಗ್ರಾಮದಲ್ಲಿರುವ ಡಿವೈನ್ ಪಾರ್ಕ್ ನ ಅಂಗಸಂಸ್ಥೆಯಾಗಿರೋ ಕೋಟ ಸಮೀಪದ ಮೂಡುಗಿಳಿಯಾರಿನಲ್ಲಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿಶ್ವದ ಅತೀ ಅಪರೂಪದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರ ಸರ್ವಕ್ಷೇಮ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿವೇಕಾನಂದರ ಅತೀ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.ಕನ್ಯಾಕುಮಾರಿ ಹಾಗೂ ಕೊಲ್ಕತ್ತಾದಲ್ಲಿ ಈ ಹಿಂದೆ ಎತ್ತರದ ವಿವೇಕಾನಂದ ಪ್ರತಿಮೆ ನಿರ್ಮಾಣಗೊಂಡಿತ್ತು. ಆದರೀಗ ಕೃಷ್ಣನ ತವರಿನಲ್ಲಿ ವಿವೇಕಾನಂದ ಪ್ರತಿಮೆ ತಲೆಎತ್ತಿನಿಂತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಸರ್ವಕ್ಷೇಮ ಆಸ್ಪತ್ರೆಯನ್ನು ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಆಸ್ಪತ್ರೆಯ ನಡುಭಾಗದಲ್ಲಿ ವಿವೇಕಾನಂದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆಸ್ಪತ್ರೆಯನ್ನು ಫೆಬ್ರವರಿ 1 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದಾರೆ. 35 ಅಡಿ ಎತ್ತರದ ವಿವೇಕಾನಂದ ಪ್ರತಿಮೆಯನ್ನು ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ವಿವಿಯ ಕುಲಪತಿ ಎಚ್.ಆರ್.ನಾಗೇಂದ್ರ ಜೀ ಅನಾವರಣಗೊಳಿಸಲಿದ್ದಾರೆ.ಡಿವೈನ್ ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕ ಡಾ.ಎ.ಚಂದ್ರಶೇಖರ ಉಡುಪ ಅಧ್ಯಕ್ಷತೆ ವಹಿಸಿದ್ದಾರೆ. ಬಂದರು, ಮೀನುಗಾರಿಗೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಜಗತ್ತೀನ ಅತೀ ಎತ್ತರದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

https://youtu.be/33A64C74yZE

Leave A Reply

Your email address will not be published.