ಟಿ20 ಸರಣಿ : 4ನೇ ಪಂದ್ಯದಲ್ಲೂ ಸೋತ ಕಿವಿಸ್, ಸೂಪರ್ ಓವರ್ ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು

0

ವೆಲ್ಲಿಂಗ್ಟನ್ : ನ್ಯೂಜಿಲ್ಯಾಂಡ್ ವಿರುದ್ದ ಟಿ20 ಸರಣಿಯ 4ನೇ ಪಂದ್ಯದಲ್ಲಿಯೂ ನ್ಯೂಜಿಲ್ಯಾಂಡ್ ಸೋಲನ್ನು ಕಂಡಿದೆ. ಮೂರನೇ ಪಂದ್ಯದಂತೆಯೇ ನಾಲ್ಕನೇ ಪಂದ್ಯವೂ ಟೈ ಆಗಿದ್ದು, ಸೂಪರ್ ಓವರ್ ನಲ್ಲಿ  ಕನ್ನಡಿಗೆ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ, ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ಕೆ.ಎಲ್.ರಾಹುಲ್ ಭರ್ಜರಿ ಆರಂಭವೊದಗಿಸುವ ಭರವಸೆ ನೀಡಿದರು. ಸಂಜು ಸ್ಯಾಮ್ಸನ್ ಭರ್ಜರಿ ಸಿಕ್ಸರ್ ಸಿಡಿಸಿದ ಬೆನ್ನಲ್ಲೇ ಕೆಟ್ಟ ಹೊಡೆತಕ್ಕೆ ಮನ ಮಾಡಿದ ಸ್ಯಾಮ್ಸನ್ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ನಾಯಕ ಕೊಯ್ಲಿ ಕೂಡ ಕೇವಲ 11 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ನಂತರ ಬಂದ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಗಳಿಸಿದ್ದು ಕೇವಲ 1 ರನ್. ಆದರೆ ಕನ್ನಡಿಗ ಮನೀಶ್ ಪಾಂಡೆ ಕೆ.ಎಲ್.ರಾಹುಲ್ ಜೊತೆ ಒಂದಿಷ್ಟು ಹೊತ್ತು ಉತ್ತಮ ಜೊತೆಯಾಟ ನಡೆಸಿದ್ರು. ಕೆ.ಎಲ್.ರಾಹುಲ್ 39 ರನ್ ಗಳಿಸಿದ್ರೆ, ಮನೀಶ್ ಪಾಂಡೆ ಭರ್ಜರಿ ಅರ್ಧ ಶತಕ ಗಳಿಸಿದ್ರು. ಶಾರ್ದೂಲ್ ಠಾಕೂರ್ 20 ರನ್ ಗಳಿಸಿದ್ರು, ಬಿಟ್ರೆ ಉಳಿದ ಬ್ಯಾಟ್ಸಮನ್ ಗಳು ನ್ಯೂಜಿಲ್ಯಾಂಡ್ ಬೌಲರ್ ಗಳನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ. 20 ಓವರ್ ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತ್ತು. ಇಶಾ ಸೋಧಿ ಮೂರು ವಿಕೆಟ್ ಪಡೆದ್ರೆ, ಬೆನ್ನೆಟ್ 2 ಹಾಗೂ ಸ್ಟನ್ನರ್, ಕುಗ್ಲೆಂಜಿ ಹಾಗೂ ಸೌತಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಭಾರತದ ಗುರಿಯನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ಗೆ ಬುಮ್ರಾ ಆರಂಭಿಕ ಆಘಾತ ನೀಡಿದ್ರು. 4 ರನ್ ಗಳಿಸಿದ್ದ ಮಾರ್ಟಿನ್ ಗುಪ್ಟಿಲ್ ಗೆ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಕೊಲಿನ್ ಮುನ್ರೋಗೆ ಜೊತೆಯಾದ ಕೀಪರ್ ಸೈಫರ್ಟ್ ಭರ್ಜರಿ ಜೊತೆಯಾಟ ನೀಡಿದ್ರು. ಕೊಲಿನ್ ಮುನ್ರೋ 64 ರನ್ ಗಳಿಸಿದ್ರೆ, ಸೈಫರ್ಟ್ 57 ರನ್ ಸಿಡಿಸಿದ್ರು. ರಾಸ್ ಟೇಲರ್ 27 ರನ್ ಗಳಿಸಿದ್ದು ಬಿಟ್ರೆ ಉಳಿದ ಆಟಗಾರರು ಭಾರತದ ಬೌಲರ್ ಗಳ ಎದುರು ರನ್ ಗಳಿಸಲು ತಡಕಾಡಿದ್ರು.
ಅದರಲ್ಲೂ ಕೊನೆಯ ಓವರ್ ನಲ್ಲಿ ನ್ಯೂಜಿಲ್ಯಾಂಡ್ ಗೆ 7 ರನ್ ಅವಶ್ಯಕತೆಯಿತ್ತು. ಕೊನೆಯ ಓವರ್ ಎಸೆಯಲು ನಾಯಕ ಕೊಯ್ಲಿ ಶಾರ್ದೂಲ್ ಠಾಕೂರ್ ಕೈಗೆ ಚೆಂಡು ನೀಡಿದ್ದಾರೆ. ಕೊನೆಯ ಓವರ್ ನ್ನು ಅದ್ಬುತವಾಗಿ ಎಸೆದ ಠಾಕೂರ್ ಕೇವಲ 6 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಡ್ರಾ ಮಾಡಿಸಿದ್ದಾರೆ.

ರೋಚಕ ಸೂಪರ್ ಓವರ್ : ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಗೆ ಜಸ್ಪ್ರಿತ್ ಬೂಮ್ರಾ 6 ಎಸೆತಗಳಲ್ಲಿ 14 ರನ್ ಬಿಟ್ಟುಕೊಟ್ರು. 15 ರನ್ ಗುರಿ ಪಡೆದ ಭಾರತ ತಂಡದ ಪರ ಆರಂಭಿಕರಾಗಿ ನಾಯಕ ವಿರಾಟ್ ಕೊಯ್ಲಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಕಣಕ್ಕಿಳಿದಿದ್ದರು. ಟೀಮ್ ಸೌಥಿ ಎಸೆದ ಮೊದಲ ಎಸೆತವನ್ನು ರಾಹುಲ್ ಸಿಕ್ಸರ್ ಗೆ ಅಟ್ಟಿದ್ರೆ, ಎರಡನೇ ಎಸೆತವನ್ನು ಬೌಂಡರಿಗಟ್ಟಿದ್ರು. ಮೂರನೇ ಎಸೆತದಲ್ಲಿಯೂ ಆರ್ಭಟಿಸಿದ ರಾಹುಲ್ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಾಲ್ಕನೇ ಎಸೆತದಲ್ಲಿ 2 ರನ್ ಗಳಿಸಿದ ಕೊಯ್ಲಿ, ಐದನೇ ಎಸೆತದಲ್ಲಿ ಬೌಂಡರಿ ಬಾರಿಸೋ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ 4-0 ಅಂತರದಿಂದ ಗೆದ್ದುಕೊಂಡಿದ್ದು, ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡುವತ್ತ ಹೆಜ್ಜೆ ಇಟ್ಟಿದೆ.

ಸಂಕ್ಷಿಪ್ತ ಸ್ಕೋರ್ :

ಭಾರತ : ಕೆ.ಎಲ್.ರಾಹುಲ್ 39 (26), ಸಂಜು ಸ್ಯಾಮ್ಸನ್ 8 (5), ವಿರಾಟ್ ಕೊಯ್ಲಿ 11 (9), ಶ್ರೇಯಸ್ ಐಯ್ಯರ್ 1 (7). ಶಿವಂ ದುಬೆ 12 (9). ಮನೀಶ್ ಪಾಂಡೆ 50 (36), ಶಾರ್ದೂಲ್ ಠಾಕೂರ್ 20 (15), ನವದೀಪ್ ಸೈನಿ 11 (9), ಇಶಾ ಸೋದಿ 26/3, ಹಮೀಶ್ ಬೆನ್ನೆಟ್ 41/2, ಸ್ಟನ್ನರ್ 26/1, ಸ್ಕಾಟ್ ಕುಗ್ಗಲಂಜೆ 39/1, ಟೀಮ್ ಸೌಥಿ 28/1
ನ್ಯೂಜಿಲ್ಯಾಂಡ್ : ಮಾರ್ಟಿನ್ ಗುಫ್ಟಿಲ್ 4 (8). ಕೊಲಿನ್ ಮುನ್ರೋ 64 (47), ಟೀಮ್ ಸೈಫರ್ಟ್ 57 (39). ರಾಸ್ ಟೇಲರ್ 24 (18). ಶಾರ್ದೂಲ್ ಠಾಕೂರ್ 33/2, ಜಸ್ಪ್ರಿತ್ ಬೂಮ್ರಾ 20/1, ಯಜುವೇಂದ್ರ ಚಹಲ್ 38/1

Leave A Reply

Your email address will not be published.