ಕುಂದಾಪುರ : 7 ನಿಮಿಷಗಳಲ್ಲಿ ಗ್ರಾಹಕರ ಕಣ್ಣೆದುರಲ್ಲೇ ತಮ್ಮಿಷ್ಟ ಕೇಕ್ ಸಿದ್ದಪಡಿಸಿಕೊಡುವ ಅಂತರಾಷ್ಟ್ರೀಯ ಗುಣಮಟ್ಟದ 7tfh ಹೆವೆನ್ ಕೇಕ್ ಮಳಿಗೆ ಕುಂದಾಪುರದಲ್ಲಿ ಶುಭಾರಂಭಗೊಂಡಿದೆ. ಕುಂದಗನ್ನಡ ಖ್ಯಾತ ಮಿಮಿಕ್ರಿ ಕಲಾವಿದ ಮಂಜುನಾಥ ಕುಂದೇಶ್ವರ ಉದ್ಘಾಟಿಸಿದ್ದಾರೆ.

ಕುಂದಾಪುರದ ಹೊಸ ಬಸ್ ನಿಲ್ದಾಣದ ಬಳಿಯಲ್ಲಿರುವ ಅನಂತ ಪದ್ಮನಾಭ ಚೇಂಬರ್ಸ್ ನಲ್ಲಿ ಶುಭಾರಂಭಗೊಂಡಿರುವ 7th ಹೆವೆನ್ ಮಳಿಗೆಯು ಬೆಳಗ್ಗೆ 9 ರಿಂದ ರಾತ್ರಿ 9ರ ವರೆಗೂ ಕಾರ್ಯನಿರ್ವಹಿಸಲಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹಲವು ಬಗೆಯ ಕೇಕ್ ಗಳನ್ನು ಕೇವಲ 7 ನಿಮಿಷ ಅವಧಿಯಲ್ಲಿ ತಯಾರಿಸಿ ನೀಡಲಾಗುತ್ತಿದೆ. ಅದೂ ಗ್ರಾಹಕರ ಕಣ್ಣೇದುರಲ್ಲೇ ಸಿದ್ದವಾಗು ತ್ತಿದೆ. Cakes, Dessert, Mug cakes, Chocolates, Macarons ಸೇರಿದಂತೆ ಹಲವು ವಿನ್ಯಾಸದ ಕೇಕ್ ಗಳು 7th Heaven ನಲ್ಲಿ ಲಭ್ಯವಾಗಲಿದೆ.

ಈ ಸಂದರ್ಭದಲ್ಲಿ ಉದ್ಯಮಿ ಕೆ.ಪಿ.ಕಾಮತ್, ಸಂಸ್ಥೆಯ ಪಾಲುದಾರರಾದ ಐಶ್ವರ್ಯ ಶೋಭಿತ್, ರೊನಾಲ್ಡ್ ರೈಮಂಡ್ ಫೆರ್ನಾಂಡಿಸ್, ಉದ್ಯಮಿ ಶೋಭಿತ್ ಕುಮಾರ್, ರಿಮಾ ರೊನಾಲ್ಡ್ ಫರ್ನಾಂಡೀಸ್, ವಿಜಯ ಎಸ್.ರಾವ್, ನವೀನ್ ಕುಮಾರ್, ಶೇಕ್ ಅಹಮದ್ ರಿಮಾಜ್ ಮುಂತಾದವರು ಉಪಸ್ಥಿತರಿದ್ದರು.

ದೇಶದ 21 ರಾಜ್ಯಗಳಲ್ಲಿ ಈಗಾಗಲೇ ಮನೆಮಾತಾಗಿರುವ 7th heaven ಕುಂದಾಪುರದ ಜನತೆಗೆ ಹೊಸ ರುಚಿ ಕೇಕ್ ಗಳನ್ನು ಉಣಬಡಿಸಲಿದೆ. 7th ಹೆವೆನ್ ಸಂಸ್ಥೆ ಶುಭಾರಂಭದ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ಕೇಕ್ ಗಳ ಖರೀದಿಯ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.


