ಶಾಸಕ ಲಾಲಾಜಿ ಮೆಂಡನ್ ಹೋರಾಟಕ್ಕೆಗೆಲುವು : ಹೆಜಮಾಡಿ ಸರ್ವ ಋತು ಬಂದರಿಗೆ ಶಿಲಾನ್ಯಾಸ

ಹೆಜಮಾಡಿ : ಹಲವು ವರ್ಷಗಳಿಂದಲೂ ಮೀನುಗಾರರ ಬೇಡಿಕೆ ಇದೀಗ ಈಡೇರುತ್ತಿದೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೋರಾಟದ ಫಲವಾಗಿ ನಾಳೆ ಹೆಜಮಾಡಿಯಲ್ಲಿ ಸರ್ವ ಋತು ಬಂದರು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ವ ಋತು ಬಂದರಿಗೆ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 2 ರಿಂದ 3 ಸಾವಿರಕ್ಕೂ ಅಧಿಕ ಮೀನುಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೆಜಮಾಡಿಯಲ್ಲಿ ಸರ್ವ ಋತು ಬಂದರು ನಿರ್ಮಾಣವಾದ ನಂತರದಲ್ಲಿ ಕಾಪುವಿನಿಂದ ಹಿಡಿದು ಸುರತ್ಕಲ್ ವರೆಗಿನ ಮೀನುಗಾರರಿಗೆ ಅನುಕೂಲವಾಗಲಿದೆ.

ಮಲ್ಪೆ, ಮಂಗಳೂರು ಬಂದರುಗಳಲ್ಲಿ ಬೋಟುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಮೀನುಗಾರರಿಗೆ ಬೋಟುಗಳನ್ನು ಲಂಗರು ಹಾಕಲು ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಜಮಾಡಿಯಲ್ಲಿ ಬಂದರು ನಿರ್ಮಾಣವಾದರೆ ಸಾವಿರಾರು ಮೀನುಗಾರರಿಗೆ ಅನುಕೂಲಕರವಾಗಲಿದೆ ಅಂತಾ ಹಲವು ವರ್ಷಗಳಿಂದಲೂ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.

ಆದರೆ ಇದುವರೆಗೂ ಮೀನುಗಾರಿಕಾ ಬಂದರು ನಿರ್ಮಾಣವಾಗಿರಲಿಲ್ಲ. ಆದರೆ ಲಾಲಾಜಿ ಆರ್.ಮೆಂಡನ್ ಶಾಸಕರಾಗಿ ಪುನರಾಯ್ಕೆ ಯಾಗುತ್ತಿದ್ದಂತೆಯೇ ಬಂದರು ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ. ಶಾಸಕರ ಕಾರ್ಯಕ್ಕೆ ಇದೀಗ ಮೀನುಗಾರರು ಸಂತಸಗೊಂಡಿದ್ದಾರೆ. ಅಲ್ಲದೇ ಅತೀ ಶೀಘ್ರದಲ್ಲಿಯೇ ಬಂದರು ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸುವುದಾಗಿಯೂ ಶಾಸಕರು ಭರವಸೆಯನ್ನು ನೀಡಿದ್ದಾರೆ.

Comments are closed.