ಡ್ರಗ್ಸ್‌ ಪ್ರಕರಣ : ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್‌ ಜಾರಿ

0

ಬೆಂಗಳೂರು : ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚಿಗಷ್ಟೇ ಬಂಧಿತನಾಗಿದ್ದ ಡ್ಯಾನ್ಸರ್‌ ಕಿಶೋರ್ ಶೆಟ್ಟಿ ವಿಚಾರಣೆಯ ವೇಳೆಯಲ್ಲಿ ಕಿಶೋರ್ ಅಮನ್ ಶೆಟ್ಟಿ ತನ್ನ ಆಪ್ತ ಸ್ನೇಹಿತನಾಗಿರುವ ತರುಣ್ ಅನುಶ್ರೀಯ ಜೊತೆಗೆ ಪಾರ್ಟಿ ಮಾಡಿದ್ದ ಎಂಬ ವಿಷಯವನ್ನು ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ನಟಿ, ನಿರೂಪಕಿ ಅನುಶ್ರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ತರುಣ್ ಶೆಟ್ಟಿ ಹಾಗೂ ಕಿಶೋರ್ ಅಮನ್ ಶೆಟ್ಟಿ ಸಾಕಷ್ಟು ಬಾರಿ ಡ್ರಗ್ಸ್ ಪಾರ್ಟಿಯನ್ನು ಮಾಡಿದ್ದಾರೆ. ಅಲ್ಲದೇ ಕಿಶೋರ್ ಅಮನ್ ಶೆಟ್ಟಿಯ ಇಬ್ಬರು ಸ್ನೇಹಿತೆಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆಯಲ್ಲಿ ಯುವತಿಯರು ಡ್ರಗ್ಸ್ ಸೇವನೆಯನ್ನು ಮಾಡಿದ್ದರು ಅನ್ನುವ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲದೇ ಅನುಶ್ರೀ ಕೂಡ ಮಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಕಿಶೋರ್ ಶೆಟ್ಟಿ ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಖುದ್ದು ವಿಚಾರಣೆಗೆ ಹಾಜರಾಗುವ ಕುರಿತು ನಿರೂಪಕಿ ಅನುಶ್ರೀ ಅವರಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಅನುಶ್ರೀ ಅವರಿಗೆ ಖುದ್ದು ನೋಟೀಸ್ ನೀಡಲು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ಹೊರಟಿದೆ.

Leave A Reply

Your email address will not be published.