6 ತಿಂಗಳ ಮಗುವಿನಿಂದ ವಾಟರ್ ಸ್ಕಿಂಗ್ : ವೈರಲ್ ಆಯ್ತು ರಿಚ್ ಅಡ್ವೆಂಚರ್

0
  • ವಂದನಾ ಕೊಮ್ಮುಂಜೆ

ಕೆಲವರಿಗೆ ಅಡ್ವೆಂಚರ್ ಅಂದ್ರೆ ಒಂದು ಹವ್ಯಾಸ. ಅದಕ್ಕಾಗಿ ಕೆಲವರು ಬೆಟ್ಟ ಹತ್ತುತ್ತಾರೆ, ನೀರಲ್ಲಿ ಕಿಲೋಮೀಟರ್ ಗಟ್ಟಲೆ ಈಜುತ್ತಾರೆ. ಇನ್ನು ಕೆಲವರು ಡೇಜಂರಸ್ ಜಾಗದಲ್ಲಿ ಸ್ಟಂಟ್ ಮಾಡುತ್ತಾರೆ. ಹವ್ಯಾಸ ಮತ್ತು ಆಸಕ್ತಿ ಇದ್ರೆ ಸಾಧಿಸೋಕೆ ಯಾವುದು ಸಾಧ್ಯವಿಲ್ಲ ಹೇಳಿ. ಆದ್ರೆ ಇದನ್ನೆಲ್ಲಾ ಮಾಡೋಕೆ ಒಂದು ವಯಸ್ಸು ಮೀರಿರ ಬೇಕು. ಅಥವಾ ಅದರಲ್ಲಿ ಸ್ವಲ್ಪನಾದ್ರೂ ಹಿಡಿತ ಇರಬೇಕು ಅಲ್ವಾ ?

ಯಾವುದೂ ನಮಗೆ ಹುಟ್ಟಿನಿಂದಲೇ ಬಂದಿರಲ್ಲ ಅಲ್ವಾ. ಯಾವುದನ್ನಾದ್ರೂ ಕಲಿಯೋಕು ತಿಳಿದುಕೊಳ್ಳೋಕೆ ಆಗುವಷ್ಟಾದರೂ ವಯಸ್ಸಾ ಗಿರಬೇಕು. ಆದ್ರೆ ಇಲ್ಲಿ 6 ತಿಂಗಳ ಮಗು ಎಲ್ಲರೂ ಅಚ್ಚರಿಯಿಂದ ನೋಡೋ ಸಾಧನೆ ಮಾಡಿದೆ.

ಹೌದು 6 ತಿಂಗಳ ಮಗುವೊಂದು ವಾಟರ್ ಸ್ಕಿಂಗ್ ಮಾಡಿರೋದು ಈಗ ವೈರಲ್ ಆಗಿದೆ. ಅಮೇರಿಕಾದ ದಂಪತಿ ತಮ್ಮ ಮಗು ರಿಚ್ ನ ವಾಟರ್ ಸ್ಕಿಂಗ್ ವಿಡಿಯೋವನ್ನು ಇಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇಸ್ಟಾಗ್ರಾಂನಲ್ಲಿ ಲೇಕ್ ಡೇಸ್ ಅಂತ ಪೋಸ್ಟ್ ಮಾಡಲಾಗಿದ್ದು ಇದು ಈಗ ವೈರಲ್ ಆಗಿದೆ.

ಇನ್ನು ಈ ವಿಡಿಯೋದಲ್ಲಿ ರಿಚ್ ಪ್ರೋಫೆಷನಲ್ ವಾಟರ್ ಸ್ಕಿಂಗ್ ಗಳ ರೀತಿ ನೀರಿನಲ್ಲಿ ಜಾರುತ್ತಿರೋದು ಎಲ್ಲರ ಮನ ಗೆದ್ದಿದೆ. ನೀರಿನ ಹನಿಗಳು ಮಗುವಿನ ಮುಖಕ್ಕೆ ಬಿದ್ದರೂ ಹೆದರದೇ ಅದನ್ನು ಎಂಜಾಯ್ ಮಾಡಿದೆ. ಇದನ್ನು ನೋಡಿದ್ರೆ ಯಾವುದೇ ಕೆಲಸ ಮಾಡೋಕು ಏಜ್ ಜಸ್ಟ್ ನಂಬರ್ ಅನ್ನಿಸೋದು ಸುಳ್ಳಲ್ಲ

https://www.instagram.com/p/CFDy1cZpnCA/?utm_source=ig_web_copy_link
Leave A Reply

Your email address will not be published.