ಅಪ್ಕೋ ಮಾಜಿ‌ ಅಧ್ಯಕ್ಷರ ಮನೆ ಮೇಲೆ ಸಿಬಿಐ ದಾಳಿ : ವಶಕ್ಕೆ ಪಡೆದ ಆಸ್ತಿ ಮೌಲ್ಯ ಕೇಳಿದ್ರೆ ಬೆಚ್ಚಿಬೀಳ್ತಿರಿ !

0

ಆಂಧ್ರ : ಅಪ್ಕೊ ಮಾಜಿ‌ ಅಧ್ಯಕ್ಷನ‌ ಮನೆ ಮೇಲೆ ಸಿಬಿಐ ದಾಳಿ‌ ನಡೆಸಿದ್ದಾರೆ. ಅಪ್ಕೋದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ಮಾಜಿ ಅಧ್ಯಕ್ಷರ ‌ಮನೆ ಮೇಲೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಆಸ್ತಿ‌ ಜಪ್ತಿ ಮಾಡಲಾಗಿದೆ.

ನಿನ್ನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಖಾಜಿಪೇಟ್​ನಲ್ಲಿರುವ ಅಪ್ಕೋ ಮಾಜಿ ಅಧ್ಯಕ್ಷ ಗುಜ್ಜಲ ಶ್ರೀನಿವಾಸಲು ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು.

ದಾಳಿಯ ವೇಳೆಯಲ್ಲಿ ಬರೋಬ್ಬರಿ 3 ಕೆಜಿ ಚಿನ್ನ, 2 ಕೆ.ಜಿ ಬೆಳ್ಳಿ, 1 ಕೋಟಿ ನಗದು ಸೇರಿದಂತೆ ಹಲವು ಪ್ರಮಾಣದ ಆಸ್ತಿಯನ್ನ ಸಿಬಿಐ ವಶಕ್ಕೆ ಪಡೆದಿದೆ.

ಗುಜ್ಜಲ ಶ್ರೀನಿವಾಸ್ ಅವರ ಪ್ರಮುಖ ಅನುಯಾಯಿ ರಾಘವೇಂದ್ರ ಮತ್ತು ಕೈಮಗ್ಗ ಸಮಾಜದ ಅಧ್ಯಕ್ಷ ಕೊಂಡಯ್ಯ ಎಂಬುವರ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.