ಡ್ರಗ್ಸ್ ಪ್ರಕರಣ : ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ : ಜೈಲುವಾಸ ಫಿಕ್ಸ್

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಟಿ ಮಣಿಯರಿಗೆ ಜೈಲುವಾಸ ಫಿಕ್ಸ್ ಆಗಿದ್ದು, ಆದೇಶ ಹೊರಬೀಳುತ್ತಿದ್ದಂತೆಯೇ ನಟಿಯರು ಕಣ್ಣೀರು ಸುರಿಸಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಾಗಿಣಿ, ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈಗಾಗಲೇ ಎನ್ ಡಿಪಿಎಸ್ ಕೋರ್ಟ್ ಜಾಮೀನು ನಿರಾಕರಣೆ ಮಾಡಿದ ಬೆನ್ನಲ್ಲೇ ಇದೀಗ ನಟಿ ಮಣಿಯರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಅಲ್ಲದೇ ರಾಗಿಣಿ ಹಾಗೂ ಸಂಜನಾ ಇಂದು ಜಾಮೀನು ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದರು. ಆದರೆ ಹೈಕೋರ್ಟ್ ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಮೂವರು ಡ್ರಗ್ಸ್ ಪೆಡ್ಲರ್ ಗಳ ಜಾಮೀನು ಅರ್ಜಿಯನ್ನು ನಿರಾಕರಣೆ ಮಾಡಿದೆ.

ರಾಗಿಣಿ, ಸಂಜನಾಗೆ ಜಾಮೀನು ಕೊಡಬಾರದು. ಸಾಕ್ಷ್ಯ ನಾಶದ ಆರೋಪ ಇಬ್ಬರ ಮೇಲೆ ಇವೆ. ಇಬ್ಬರ ವಿರುದ್ಧವೂ ಡಿಜಿಟಲ್ ಸಾಕ್ಷ್ಯ ಲಭ್ಯವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ.

ಜಾಮೀನು ಕೊಟ್ಟರೆ ಇಬ್ಬರು ಪ್ರಭಾವಿಗಳಾಗಿದ್ದರಿಂದ ಪ್ರಕರಣದ ಪ್ರಭಾವ ಬೀರುವ ಸಾಧ್ಯತೆಗಳಿವೆ ಹಾಗಾಗಿ ಜಾಮೀನು ನೀಡಕೂಡದ ಎಂದು ಸಿಸಿಬಿ ಪರ ವಕೀಲರು ವಾದ ಮಂಡಿಸಿದ್ದರು.

ಡ್ರಗ್ ಕೇಸಲ್ಲಿ ರಾಗಿಣಿ ಅಮಾಯಕಿ. ನಮ್ಮ ಕಕ್ಷಿದಾರರ ವಿರುದ್ಧ ಅನಗತ್ಯ ಆರೋಪಗಳನ್ನ ಮಾಡಲಾಗಿದೆ. ಸಿಸಿಬಿ ಪೊಲೀಸರ ದಾಳಿ ವೇಳೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಡ್ರಗ್ ಕೇಸಲ್ಲಿ ಸುಮ್ಮನೆ ಸಿಲುಕಿಸಲಾಗಿದೆ ಎಂದು ರಾಗಿಣಿ ಪರ ವಕೀಲರು ನ್ಯಾಯಲಯದ ಗಮನಕ್ಕೆ ತಂದಿದ್ದರು.

ರಾಗಿಣಿ ಮತ್ತು ಸಂಜನಾ ಸೇರಿದಂತೆ ಒಟ್ಟು ಆರೋಪಿಗಳು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಹೈಕೊರ್ಟ್ ಜಾಮೀನು ನೀಡಲು ನಿರಾಕರಿಸಿದೆ.

ಜಾಮೀನು ಅರ್ಜಿ ವಿಚಾರಣೆಯಾಗುತ್ತಿದ್ದರೆ ರಾಗಿಣಿ ಹಾಗೂ ಸಂಜನಾ ಜೈಲಿನಲ್ಲಿ ತೀರ್ಪಿಗಾಗಿ ಕಾಯುತ್ತಿದ್ದರು. ಆದರೆ ತೀರ್ಪು ಹೊರ ಬರುತ್ತಿದ್ದಂತೆಯೇ ಇಬ್ಬರೂ ಕೂಡ ಕಣ್ಣೀರು ಸುರಿಸಿದ್ದಾರೆ. ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡುವವರೆಗೂ ಇಬ್ಬರೂ ನಟಿ ಮಣಿಯರಿಗೆ ಜೈಲೇ ಗತಿಯಾಗಿದೆ.

Comments are closed.