ಕೊವೀಡ್ ನಿಯಮಗಳ ಸಡಿಲಿಕೆ ….! ಬೆಂಗಳೂರಿಗೆ ಬರಲು ಕೊರೋನಾ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದ ಬಿಬಿಎಂಪಿ…!!

ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದ  ಲಾಕ್ ಆಗಿದ್ದ ರಾಜ್ಯ ರಾಜಧಾನಿ ಬೆಂಗಳೂರು ಇಂದಿನಿಂದ ಅನ್ ಲಾಕ್ ಆಗಲಿದ್ದು, ಈಗಾಗಲೇ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರರಾಜ್ಯದಿಂದ ಜನರು ರಾಜಧಾನಿಯತ್ತ ಪ್ರಯಾಣ ಆರಂಭಿಸಿದ್ದಾರೆ. ಹೀಗೆ ರಾಜಧಾನಿಗೆ ಆಗಮಿಸುತ್ತಿರುವವರಿಗೆ ಬಿಬಿಎಂಪಿ ಸಿಹಿಸುದ್ದಿ ನೀಡಿದ್ದು, ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ ಎಂದಿದೆ.

ಜೂನ್ 14 ರಿಂದ ರಾಜ್ಯ ಸರ್ಕಾರ ಭಾಗಶಃ ಅನ್ ಲಾಕ್ ಪ್ರಕ್ರಿಯೆ ಆರಂಭಿಸಿದೆ. ಗಾರ್ಮೆಂಟ್ಸ್ ಸೇರಿದಂತೆ ಹಲವು ಉದ್ಯಮಗಳು ಕಾರ್ಯಾರಂಭ ಮಾಡಿರೋದರಿಂದ ಮಹಾನಗರ ಬೆಂಗಳೂರಿನತ್ತ ಮಹಾವಲಸೆ ಮತ್ತೆ ಆರಂಭವಾಗಿದೆ.

ಹೀಗೆ ರಾಜ್ಯದ ಹೊರಭಾಗದಿಂದ ಹಾಗೂ ಜಿಲ್ಲೆಗಳಿಂದ ಬರುತ್ತಿರುವವರು ಕೊರೋನಾ ಪರೀಕ್ಷಾ ವರದಿ ತರುವುದು ಕಡ್ಡಾಯವಲ್ಲ ಎಂದು ಬಿಬಿಎಂಪಿ ಆದೇಶಿಸಿದೆ.

ಆದರೆ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಹಲವು ಜನನಿಬಿಡ ಸ್ಥಳಗಳಲ್ಲಿ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ ಎಂದು ಆಯುಕ್ತರು ವಿವರಣೆ ನೀಡಿದ್ದಾರೆ.

ಬೆಂಗಳೂರು ಅನ್ ಲಾಕ್ ಆಗಿದ್ದರೂ ಕೆ.ಆರ್.ಮಾರುಕಟ್ಟೆ ಸೇರಿದಂತೆ ಹಲವು ಜನಸಂದಣಿ ಹೆಚ್ಚಿರುವ ಪ್ರದೇಶಗಳು ಮುಚ್ಚಿರಲಿದ್ದು,ಸಾರ್ವಜನಿಕ ಪ್ರದೇಶದಲ್ಲಿ  ಓಡಾಡುವವರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

Comments are closed.