Nasal Spray Vaccine : ಮಕ್ಕಳ ಮೂಗಿಗೆ ಕೊರೊನಾ ಲಸಿಕೆ : ಸದ್ಯದಲ್ಲಿಯೇ ಬರಲಿದೆ ನೇಸಲ್ ವ್ಯಾಕ್ಸಿನ್

ನವದೆಹಲಿ : ಮಕ್ಕಳಿಗೆ ಕೊರೊನಾ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದ್ರಲ್ಲೂ ಮಕ್ಕಳಿಗೆ ನೇಸಲ್ ಡ್ರಾಪ್ಸ್ ಮೂಲಕ ಕೊರೊನಾ ವ್ಯಾಕ್ಸಿನ್ ನೀಡಲು ಸಂಶೋಧನೆ ನಡೆಯುತ್ತಿದೆ.

ಭಾರತದಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದ್ರೆ 12 ವರ್ಷದೊಳಗಿನ ಮಕ್ಕಳಿಗೆ ಚುಚ್ಚುಮದ್ದನ್ನು ಆಶ್ರಯಿಸುವುದು ಕಷ್ಟಸಾಧ್ಯ. ಅದ್ರಲ್ಲೂ ಸಣ್ಣ ಮಕ್ಕಳಿಗೆ ಚುಚ್ಚುಮದ್ದು ನೀಡುವುದು ಸವಾಲಿನ ಕಾರ್ಯ ಹೀಗಾಗಿಯೇ ಭಾರತ್ ಭಯೋಟೆಕ್ ಸಂಸ್ಥೆ ಇಂಟ್ರಾ ನೇಸಲ್ ಕೋವಿಡ್ ಲಸಿಕೆಯನ್ನು ಸಿದ್ದಪಡಿಸುತ್ತಿದೆ.

ದೇಶದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಎದುರಾಗಿದ್ದು, ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ನಡುವಲ್ಲೇ ಮಕ್ಕಳಿಗೆ ನೀಡುವುದಕ್ಕೆ ಸಂಬಂದಿಸಿದಂತೆ ಗಂಭೀರವಾದ ಚಿಂತನೆ ನಡೆಯುತ್ತಿದೆ. ಮಕ್ಕಳಿಗೆ ಚುಚ್ಚು ಮದ್ದುಗಳನ್ನು ನೀಡುವುದು ಅಷ್ಟು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿಯೇ ವಿಶ್ವದಾದ್ಯಂತ ಪರ್ಯಾಯ ಮಾರ್ಗಗಳತ್ತ ಸಂಶೋಧನೆ ನಡೆಯುತ್ತಿದೆ.

ರಷ್ಯಾದಲ್ಲಿ ಮಕ್ಕಳಿಗೆ ಮೂಗಿನ ಮೂಲಕ ಕೊರೊನಾ ಲಸಿಕೆ ನೀಡುವ ಪ್ರಯೋಗ ಆರಂಭವಾಗಿದ್ದು, ಸಪ್ಟೆಂಬರ್ ಮಧ್ಯಭಾಗದಲ್ಲಿ ಮೂಗಿನ ಮೂಲಕ ನೀಡುವ ಲಸಿಕೆ ಲಭ್ಯವಾಗಲಿದೆ. ರಷ್ಯಾದ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಪ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯಾಲಜಿ ಸಮಸ್ಥೆ ಅಭಿವೃದ್ದಿ ಪಡಿಸಿರುವ ನೇಸಲ್ ಡ್ರಾಪ್ಸ್ ನ್ನು 8 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತಿದೆ.

ವಿಶ್ವದಲ್ಲಿಯೇ ಮೊದಲ ಬಾರಿಗೆ ನೀಡಲಾದ ಸ್ಪಟ್ನಿಕ್ ವಿ ಲಸಿಕೆಯನ್ನು ಕೂಡ ಇದೇ ಗಮಾಲೆ ರಿಸರ್ಚ್ ಇನ್ಸ್ಟಿಟ್ಯೂಟ್ ಆಪ್ ಎಪಿಡೆಮಿಯಾಲಜಿ ಆಂಡ್ ಮೈಕ್ರೋಬಯಾಲಜಿ ಸಂಶೋಧನಾ ಕೇಂದ್ರ ಅಭಿವೃದ್ದಿ ಪಡಿಸಿದ್ದು, ಇದೀಗ ಕೊರೊನಾ ನೇಸಲ್ ಡ್ರಾಪ್ಸ್ ಕೂಡ ಅಭಿವೃದ್ದಿ ಪಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅದ್ರಲ್ಲೂ ಮಕ್ಕಳಿಗೆ ಚುಚ್ಚು ಮದ್ದು ಮೂಲಕ ಕೊರೊನಾ ಲಸಿಕೆ ನೀಡುವ ಬದಲು ಪರ್ಯಾಯ ಮಾರ್ಗಗಳ ಕುರಿತು ಸಂಶೋಧನೆ ನಡೆಯುತ್ತಿದೆ.

Comments are closed.