ಆನ್ ಲೈನ್ ಲೋನ್ ಆ್ಯಪ್ ಗಳಿಗೆ ಬ್ರೇಕ್….! ಪ್ರಕರಣ ದಾಖಲಿಸಿಕೊಂಡ ಸಿಸಿಬಿ…!!

ಬೆಂಗಳೂರು: ಫೇಸ್ ಬುಕ್ ತೆರದ್ರೇ ಸಾಕು ಆನ್ ಲೈನ್ ನಲ್ಲಿ ಯಾವುದೇ ಇನ್ ಕಂ‌‌ಡಾಕ್ಯುಮೆಂಟ್ ಇಲ್ಲದೇ ಲೋನ್ ಕೊಡೋ ಆ್ಯಪ್ ಗಳದ್ದೇ ಕಾರುಭಾರು. ಆದರೇ ಈಗ ಈ ಆ್ಯಪ್ ಗಳ‌ ಕರಾಳ ಮುಖ ಬಹಿರಂಗವಾಗಿದ್ದು ಸಿಸಿಬಿ ಪ್ರಕರಣ ದಾಖಲಿಸಿಕೊಂಡಿದೆ.

ಜನರ ತುರ್ತು ಅಗತ್ಯವನ್ನು ದುರ್ಬಳಕೆ ಮಾಡಿಕೊಳ್ಳೋ ಆನ್ ಲೈನ್ ಆ್ಯಪ್ ಗಳು ಕ್ಷಣಾರ್ಧದಲ್ಲಿ ಲೋನ್ ಒದಗಿಸುವ ಭರವಸೆ ನೀಡಿ ಹಣ ವನ್ನು ಲೋನ್ ಆಗಿ ನೀಡುತ್ತವೆ.

ಯಾವುದೇ ಇನ್ ಕಂ‌ ಡಾಕ್ಯುಮೆಂಟ್ ಕೇಳದ ಈ ಆ್ಯಪ್ ಗಳ ಸರಳತೆಗೆ ಮುರುಳಾದ ಜನ ಹಣ ಪಡೆಯುತ್ತಿದ್ದರು. ಆದರೆ ಹೀಗೆ ಹಣವನ್ನು ಸಾಲ ನೀಡಿದ ಆ್ಯಪ್ ಗಳು ಬಳಿಕ‌ ಜನರ ಜೀವ‌ಹಿಂಡಲು ಆರಂಭಿಸುತ್ತಿದ್ದವು.

ನಿಯಮ ಬಾಹಿರವಾಗಿ ಬಡ್ಡಿ ವಸೂಲಿ ಮಾಡಿ ಸಾಲದಾರನನ್ನು ಹೆಸರಿಸುವ ಆ್ಯಪ್ ಗಳು ಹಣ ಕೊಡದ ವ್ಯಕ್ತಿಗಳ ಮೊಬೈಲ್ ನಂಬರ್, ಪೋಟೋ ಹಾಗೂ ಮಾಹಿತಿಗಳನ್ನು ದುರ್ಬಳಕೆಮಾಡಿಕೊಂಡು ಹಿಂಸೆ ನೀಡುತ್ತಿದ್ದವು.

ಈ ಹಿನ್ನೆಲೆಯಲ್ಲಿ ನಗರದ ಕ್ರೈಂ‌ಬ್ರ್ಯಾಂಚ್ ಈ ರೀತಿ ಸಾಲ ನೀಡುವ ಆ್ಯಪ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದೆ.

ಅಷ್ಟೇ ಅಲ್ಲ ಈ ರೀತಿ ಆ್ಯಪ್ ಗಳಿಂದ‌ ಮೋಸ ಹೋದವರು ಹಾಗೂ ತೊಂದರೆಗೆ ಒಳಗಾದವರು ಸಿಸಿಬಿ ಗೆ ದೂರು ನೀಡುವಂತೆ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್‌ಮಾಹಿತಿ ನೀಡಿದ್ದಾರೆ.

Comments are closed.