ಭಾನುವಾರ, ಏಪ್ರಿಲ್ 27, 2025
HomeBreakingಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!

ಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!

- Advertisement -

ಪೊಲೀಸರು ಲಾಠಿ ರುಚಿ ತೋರಿಸಿ ಜನರನ್ನು ಬೆದರಿಸುತ್ತಿದ್ದಾರೆ. ಖಾಕಿ ಪಡೆಗೆ ಮಾನವೀಯತೆಯೇ ಇಲ್ಲ ಎಂದೆಲ್ಲ ಕಮೆಂಟ್ ಮಾಡೋರಿಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಮ್ಮ ಮಾದರಿ ಕಾರ್ಯದ ಮೂಲಕ  ಉತ್ತರ ನೀಡಿದ್ದಾರೆ.

ನಿರ್ಮಾಪಕ ರಾಮು ಸಾವಿಗೆ ಸಚಿವ ಸುಧಾಕರ್ ಕಾರಣ….! ಇಂದ್ರಜಿತ್ ಗಂಭೀರ ಆರೋಪ…!!

ಪ್ರಸ್ತುತ ರೇಲ್ವೈ ಇಲಾಖೆಯ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾಸ್ಕರ್ ರಾವ್ ಬೆಳ್ಳಂಬೆಳಗ್ಗೆ ಕೆ.ಆರ್.ಮಾರುಕಟ್ಟೆಗೆ ಧಾವಿಸಿದ್ದಾರೆ. ಅಷ್ಟೇ ಅಲ್ಲ ಕೆ.ಆರ್.ಮಾರುಕಟ್ಟೆಯ ವ್ಯಾಪಾರಸ್ಥರಿಗೆ, ಜನರಿಗೆ ಸೋಷಿಯಲ್ ಡಿಸ್ಟನ್ಸ್, ಮಾಸ್ಕ್ ಧರಿಸುವ ಕುರಿತು ತಿಳುವಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲ ಸಾವಿರಾರು ಮಾಸ್ಕ್ ಗಳನ್ನು ಜನರಿಗೆ ಉಚಿತವಾಗಿ ವಿತರಿಸಿ ಬಡ ವ್ಯಾಪಾರಸ್ಥರಿಗೆ ನೆರವಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಭಾಸ್ಕರ್ ರಾವ್ , ಇದೊಂದು ಸಂಕಷ್ಟದ ಸ್ಥಿತಿ. ಈ ಹೊತ್ತಿನಲ್ಲಿ ಫೇಕ್ ವಿಡಿಯೋ ಫಾರ್ವಡ್ ಮಾಡಿಕೊಂಡು, ಜನರಲ್ಲಿ ಆತಂಕ ಬಿತ್ತುತ್ತ ಬದುಕುವ ಬದಲು  ಪಾಸಿಟಿವ್ ಆಗಿರಿ.

ಅಸ್ಸಾಂನಲ್ಲಿ‌ 6.4ರಷ್ಟು ತೀವ್ರತೆಯ ಪ್ರಬಲ ಭೂಕಂಪನ

ಧನಾತ್ಮಕ ಚಿಂತನೆಗಳನ್ನು ಹಂಚಿಕೊಳ್ಳಿ. ನಾನು ಅಷ್ಟೇ ನನಗಿರುವ ಅವಕಾಶದಲ್ಲಿ ಜನಸಾಮಾನ್ಯರಿಗೆ ನೆರವಾಗೋಣ ಎಂದು ಕೆ.ಆರ್.ಮಾರುಕಟ್ಟೆಗೆ ಬಂದಿದ್ದೇನೆ. ಇಲ್ಲಿನ ಜನರಿಗೆ ಮಾಸ್ಕ್ ವಿತರಿಸಿ ಅವರಿಗೊಂದಿಷ್ಟು ತಿಳುವಳಿಕೆ, ಮುಂಜಾಗ್ರತೆ ಮೂಡಿಸಿದರೇ ಕೊರೋನಾ ನಿಯಂತ್ರಣಕ್ಕೆ ಸಹಾಯವಾಗಲಿದೆ.

ಕೊರೋನಾದಿಂದ ಐಸಿಯು ಸೇರಿದ್ದ ಕೋಮಲ್…! ರಾಯರ ಪವಾಡದಿಂದ ತಮ್ಮ ಚೇತರಿಸಿಕೊಂಡ ಎಂದ ನಟ ಜಗ್ಗೇಶ್…!!

ಹೀಗಾಗಿ ನನ್ನಿಂದಾದ ಕೆಲಸವನ್ನು ನಾನು ಮಾಡಿದ್ದೇನೆ. ಎಲ್ಲರೂ ಅಷ್ಟೇ ಕೊರೋನಾಗೆ ಹೆದರುವ ಅಗತ್ಯವಿಲ್ಲ. ಬದಲಾಗಿ ಮುಂಜಾಗ್ರತೆ ವಹಿಸಿ ಆರೋಗ್ಯವಾಗಿರಿ. ಧನಾತ್ಮಕ ವಿಚಾರಗಳಿರಲಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊರೊನಾಗೆ ಬಲಿ

ಅನಗತ್ಯವಾಗಿ ಓಡಾಡಿ ಕೊರೋನಾ ಹರಡುವ ಅಥವಾ ವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನಗಳು ಬೇಡ ಎಂದು ಸಲಹೆ ನೀಡಿದ್ದಾರೆ.  

RELATED ARTICLES

Most Popular