ಭಾನುವಾರ, ಏಪ್ರಿಲ್ 27, 2025
HomeBreakingದೂರದ ಮುಂಬೈನಿಂದ ಬೆಂಗಳೂರು ಪೊಲೀಸರಿಗೆ ಸಹಾಯಹಸ್ತ…! ನಟ ಸೋನುಸೂದ್ ಸಹಾಯಕ್ಕೆ ಅಪಾರ ಮೆಚ್ಚುಗೆ…!!

ದೂರದ ಮುಂಬೈನಿಂದ ಬೆಂಗಳೂರು ಪೊಲೀಸರಿಗೆ ಸಹಾಯಹಸ್ತ…! ನಟ ಸೋನುಸೂದ್ ಸಹಾಯಕ್ಕೆ ಅಪಾರ ಮೆಚ್ಚುಗೆ…!!

- Advertisement -

ಕೊರೋನಾ ಸಂಕಷ್ಟದ ಹೊತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಬದುಕಿನ ಬಗ್ಗೆ ಚಿಂತಿಸುತ್ತಿದ್ದಾಗ ಲಕ್ಷಾಂತರ ಕಾರ್ಮಿಕರಿಗಾಗಿ ಮಿಡಿದ ಬಾಲಿವುಡ್ ನಟ ಸೋನು ಸೂದ್, ಕರೋನಾ ಎರಡನೇ ಅಲೆಯ ಹೊತ್ತಿನಲ್ಲೂ ತಮ್ಮ ಸಹಾಯಹಸ್ತ ಚಾಚಿದ್ದಾರೆ. ಸಿಲಿಕಾನ ಸಿಟಿಯ ಖಾಕಿ ಪಡೆಗಾಗಿ ಮಿಡಿದಿರುವ ಸೋನು ಸೂದ್ ದೂರದ ಮುಂಬೈನಿಂದ ನೆರವಿನ ಹಸ್ತ ಚಾಚಿ ಸ್ಯಾಂಡಲ್ ವುಡ್ ನಟರು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡಿದ್ದಾರೆ.

ಸೋನುಸೂದ್, ಸಿನಿಮಾದಲ್ಲಿ ಖಳ ನಾಯಕನ ಪಾತ್ರದಲ್ಲಿ ಮಿಂಚುತ್ತಲೇ ರಿಯಲ್ ಲೈಫ್ ನಲ್ಲಿ ನಾಯಕನ ಸ್ಥಾನಕ್ಕೆ ಏರಿದ ವ್ಯಕ್ತಿ. ಕೊರೋನಾ ಸಂಕಷ್ಟದಲ್ಲಿ ಜನರಿಗಾಗಿ ಮಿಡಿದ ಸೋನು ಸೂದ್ ಭಾರತದಾದ್ಯಂತ ಎಷ್ಟೋ ಜನರ ಕಣ್ಣೀರು ಒರೆಸಿ ಇತರರಿಗೆ ನೆರವಾಗಿದ್ದಾರೆ. ಇದೀಗ ಸಿಲಿಕಾನ್ ಸಿಟಿಯ ಖಾಕಿ ಪಡೆಗಾಗಿ ಮಿಡಿದಿರುವ ಸೋನು ಸೂದ್ ಕೊರೋನಾದಲ್ಲಿ ಜನಸೇವೆಗೆ ನಿಂತಿರುವ ಪೊಲೀಸರ ಸಹಾಯಕ್ಕೆ ಧಾವಿಸಿದ್ದಾರೆ.

ಸೋನು ಸೂದ್ ಬೆಂಗಳೂರಿನ ಪೊಲೀಸರಿಗಾಗಿ ಆಕ್ಸಿಜನ್ ಕಾನ್ಸಟ್ರೇಟರ್ ಮೆಶಿನ್ ಕಳುಹಿಸಿಕೊಟ್ಟಿದ್ದಾರೆ. ಬೆಂಗಳೂರು ಪೊಲೀಸರ ಬಳಕೆಗಾಗಿ ಈ ಆಕ್ಸಿಜನಗ ಸಾಂದ್ರಕ ಯಂತ್ರ ಕಳುಹಿಸಿದ್ದು, ಇದಕ್ಕೂ ಮೊದಲು ನಗರ ಪೊಲೀಸ್ ಆಯುಕ್ತ ಕಮಲ್ ಪಂಥರಿಗೆ ದೂರವಾಣಿ ಕರೆ ಮಾಡಿದ ಸೋನು ಸೂದ್ ತಮ್ಮ ಚಿಕ್ಕ ಕೊಡುಗೆಯನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರಂತೆ.

ಸೋನು ಸೂದ್ ಸಹಾಯಕರು ಆಕ್ಸಿಜನ್ ಕಾನ್ಸಟ್ರೇಟರ್ ಯಂತ್ರವನ್ನು ಸೋನುಸೂದ್ ಪರವಾಗಿ ನಗರ ಪೊಲೀಸ್ ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ.  ಈ ಆಕ್ಸಿಜನ್ ಕಾನ್ಸಟ್ರೇಟರ್ ವಾತಾವರಣದಲ್ಲಿನ ಆಕ್ಸಿಜನ್ ಸಂಗ್ರಹಿಸಿ ಮಾನವನ ದೇಹಕ್ಕೆ ಅಗತ್ಯವಾದ ಆಕ್ಸಿಜನ್ ಒದಗಿಸುವ ಮೂಲವಾಗಿ ಕೆಲಸ ಮಾಡುತ್ತದೆ.

ಸರಳವಾಗಿ ಆಕ್ಸಿಜನ್ ಪೊರೈಸಲು ಈ ಯಂತ್ರ ಸಹಾಯಕವಾಗಿದೆ. ಮಾರುಕಟ್ಟೆಯಲ್ಲಿ ಈ ಯಂತ್ರಕ್ಕೆ 40 ಸಾವಿರದಿಂದ 2 ಲಕ್ಷ ರೂಪಾಯಿವರೆಗೆ ದರವಿದೆ. ಸೋನು ಸೂದ್ 1 ಲಕ್ಷ ಬೆಲೆಯ  ಈ ಮೆಶಿನ್ ನ್ನು ಪೊಲೀಸರಿಗಾಗಿ ನೀಡಿದ್ದಾರೆ.

ಕೊರೋನಾ ಎರಡನೇ ಅಲೆಯಲ್ಲಿ ಪೊಲೀಸರು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದು, ಸ್ಯಾಂಡಲ್ ವುಡ್ ಯಾವ ನಟರೂ ಪೊಲೀಸರ ಕಷ್ಟಕ್ಕೆ ಮಿಡಿದಿಲ್ಲ. ಆದರೆ ದೂರದ ಸೋನುಸೂದ್ ಕರ್ನಾಟಕದ ಪೊಲೀಸರ ಕಷ್ಟಕ್ಕೆ ಮಿಡಿದಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ಜನರು ನಮ್ಮ ಸ್ಯಾಂಡಲ್ ವುಡ್ ನ ಬಾಸ್, ಕಿಚ್ಚ,ದಚ್ಚು,ರಾಕಿಂಗ್ ಸ್ಟಾರ್,ಹ್ಯಾಟ್ರಿಕ್ ಹಿರೋ,ಪವರ್ ಸ್ಟಾರ್ ಗಳೆಲ್ಲ ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

RELATED ARTICLES

Most Popular